• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು: ಸಂಕ್ರಾಂತಿಗೆ ಏರಿಕೆಯಾಗಿದ್ದ ತರಕಾರಿ,ಹೂವಿನ ದರ ಕೊಂಚ ಇಳಿಕೆ

|

ಬೆಂಗಳೂರು,ಜನವರಿ 21: ಹಬ್ಬಕ್ಕೆ ಏರಿಕೆಯಾಗಿದ್ದ ತರಕಾರಿ ದರದಲ್ಲಿ ಈಗ ಕೊಂಚ ಇಳಿಕೆ ಕಂಡಿದೆ.

ನಗರದ ವಿವಿಧ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿರುವುದರಿಂದ ಸಂಕ್ರಾಂತಿ ಬಳಿಕ ಕೆಲ ತರಕಾರಿ ಹಾಗೂ ಹೂವಿನ ಬೆಲೆ ಕಡಿಮೆಯಾಗುತ್ತಿದೆ.

ಜ.13ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ

ಚಳಿಯಲ್ಲಿ ಹೂವು ಗುಣಮಟ್ಟ ಹೊಂದಿರುತ್ತದೆ. ಹಾಗೆಯೇ ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಹೂವಿನ ಬೆಲೆಯಲ್ಲಿ ವ್ಯತ್ಯಾಸವಾಗಿದೆ.ಹಬ್ಬದಲ್ಲಿ ಕೆಜಿಗೆ ಒಂದು ಸಾವಿರ ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದ ಮಲ್ಲಿಗೆ, ಕನಕಾಂಬರ ಇದೀಗ ಕೆಜಿಗೆ 300-600 ರೂ.ನಷ್ಟು ಇಳಿಕೆಯಾಗಿದೆ.

ಸಂಕ್ರಾಂರಿ ಹಬ್ಬದ ಹಿನ್ನೆಲೆ ಸಗಟು ಮಾರುಕಟ್ಟೆಯಲ್ಲೂ ಸ್ವಲ್ಪ ಮಟ್ಟಿಗೆ ತರಕಾರಿ, ಹೂವಿನ ದರ ಏರಿತ್ತು.ಈ ಮೊದಲು ವಿವಿಧ ಮಾರುಕಟ್ಟೆಗಳಲ್ಲಿ ಕೆಲ ತರಕಾರಿಗಳು ಕೆಜಿ 40ರೂ.ಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದವು. ಇದೀಗ ಕ್ಯಾರೆಟ್, ಟೊಮೆಟೋ, ಗೋರಿಕಾಯಿ, ಬಜ್ಜಿ ಮೆಣಸಿನಕಾಯಿ,ಎಲೆಕೋಸು ಇನ್ನಿತರೆ ತರಕಾರಿಗಳ ಬೆಲೆ ಕಡಿಮೆಯಾಗಿದೆ.

ಬೀನ್ಸ್, ಹೀರೇಕಾಯಿ, ನುಗ್ಗೇಕಾಯಿ ಒಳಗೊಂಡಂತೆ ಕೆಲ ತರಕಾರಿಗಳು ಸ್ಥಿರತೆ ಕಾಯ್ದುಕೊಂಡಿವೆ. ಆದರೆ, ಕೆಲವೆಡೆ ಚಿಲ್ಲರೆ ಮಾರಾಟಗಾರರು ಮಾತ್ರ ಸಾಗಣೆ ವೆಚ್ಚ ಸೇರಿಸಿ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ಹಾಪ್‌ಕಾಮ್ಸ್‌ಗಳಲ್ಲಿ ಬೆಲೆ ಕೊಂಚ ದುಬಾರಿ ಇದೆ.

   Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada

   ಕೆಂಪು ಗುಲಾಬಿ 60-100 ರೂ., ಮಲ್ಲಿಗೆ 500-600 ರೂ., ಕನಕಾಂಬರ 300-400 ರೂ., ಚೆಂಡು ಹೂವು 30-40 ರೂ.ಗೆ ಮಾರಾಟವಾಗುತ್ತಿದೆ.

   English summary
   A Good harvest of Vegetables across Karnataka, Price of Some Vegetables comedown significantly in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X