ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳೆ ಸಮೀಕ್ಷೆಗೆ ಡ್ರೋನ್: ನೂರು ಜಿಲ್ಲೆಗಳಲ್ಲಿ ಪ್ರಾಯೋಗಿಕ ಬಳಕೆ

|
Google Oneindia Kannada News

ಬರ ನೆರೆ ಮುಂತಾದ ಕಾರಣಗಳಿಗೆ ಬೆಳೆ ನಷ್ಟ ಅನುಭವಿಸಿದಾಗ ಸರ್ಕಾರಗಳು ಪರಿಹಾರ ಘೋಷಿಸುವುದು ಸಾಮಾನ್ಯ. ನಷ್ಟ ಎಷ್ಟಾಗಿದೆ ಎಂಬುದನ್ನು ಅಂದಾಜು ಮಾಡುವುದು ಬಹಳ ಪ್ರಯಾಸದ ಕೆಲಸ.

ಸಾಮಾನ್ಯವಾಗಿ ವೈಮಾನಿಕ ಸಮೀಕ್ಷೆ ನಡೆಸಿ ಒಂದು ಅಂದಾಜನ್ನು ಮಾಡಲಾಗುತ್ತದೆ. ಇನ್ನು ಅಧಿಕಾರಿಗಳು ಪಂಚಾಯತಿ ಮಟ್ಟದಲ್ಲಿ ಖುದ್ದು ಸಮೀಕ್ಷೆ ನಡೆಸಿ ಅಂದಾಜು ನಷ್ಟದ ಮಾಪನ ಮಾಡುತ್ತಾರೆ. ಇದೆಲ್ಲಾ ಈವರೆಗೆ ನಡೆದುಕೊಂಡು ಬಂದಿರುವ ಪದ್ಧತಿ. ಇದೀಗ ಕೇಂದ್ರ ಕೃಷಿ ಸಚಿವಾಲಯ ಬೆಳೆಗಳ ಇಳುವರಿ, ನಷ್ಟ ಅಥವಾ what abouts ... ಅರಿಯಲು ಮಾನವ ರಹಿತ ವೈಮಾನಿಕ ಉಪಕರಣ ಡ್ರೋನ್ ಗಳನ್ನು ಬಳಸಲು ಮುಂದಾಗಿದೆ.

ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ

ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ

ಆರಂಭಿಕವಾಗಿ ಭತ್ತ ಬೆಳೆವ ದೇಶದ ಪ್ರಮುಖ ನೂರು ಜಿಲ್ಲೆಗಳಲ್ಲಿ ಭತ್ತ ಇಳುವರಿ, ನಷ್ಟ ಮುಂತಾದ ವಿವರಗಳನ್ನು ಕಲೆಹಾಕಲು ಡ್ರೋನ್ ಗಳನ್ನು ನಿಯೋಜಿಸಲು ಸಚಿವಾಲಯ ಮುಂದಾಗಿದೆ. ಪ್ರಾಯೋಗಿಕವಾಗಿ ನೂರು ಜಿಲ್ಲೆಗಳಲ್ಲಿ ಡ್ರೋನ್ ಉಪಕರಣಗಳನ್ನು ಬಳಸಿದ ನಂತರ ಮುಂದಿನ ದಿನಗಳನ್ನು ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಪಂಚಾಯತ್ ಮಟ್ಟದಲ್ಲಿ ಭತ್ತ ಬೆಳೆಯ ಇಳುವರಿ ಕುರಿತಾಗಿ ಅವಲೋಕಿಸಲು ಡ್ರೋನ್ ಬಳಸಿ ಚಿತ್ರಗಳನ್ನು ತೆಗೆಯಲು ಆಯ್ದ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವಂತೆ DGCA ಸಂಸ್ಥೆಯನ್ನು ಕೋರಿ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ.

2020 ವರ್ಷಾಂತ್ಯದಲ್ಲಿ ಘೋರ ಪರಿಸ್ಥಿತಿಯ ಎಚ್ಚರಿಕೆ ಕೊಟ್ಟ WFP2020 ವರ್ಷಾಂತ್ಯದಲ್ಲಿ ಘೋರ ಪರಿಸ್ಥಿತಿಯ ಎಚ್ಚರಿಕೆ ಕೊಟ್ಟ WFP

DGCA ಅನುಮತಿ ಕೋರಿ ಪತ್ರ

DGCA ಅನುಮತಿ ಕೋರಿ ಪತ್ರ

ಭತ್ತ ಬೆಳೆವ ನೂರು ಜಿಲ್ಲೆಗಳಲ್ಲಿ ಭತ್ತ ಕಟಾವು ಸಾಂಗವಾಗಿ ನಡೆಯುತ್ತಿದ್ದು, ಇದೀಗ ಅಲ್ಲಿನ ಬೆಳೆಗಳ ಚಿತ್ರಗಳನ್ನು ಡ್ರೋನ್ ಮೂಲಕ ದಾಖಲಿಸಲು DGCA ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

AMNEX, Agritech, RMSI Pvt Ltd and Weather Risk Management Sercices private Ltd ಸಂಸ್ಥೆಗಳಿಗೆ ಈ ವರ್ಷ ಕೊನೆ ಡಿಸೆಂಬರ್ 31 ರವರೆಗೆ ಡ್ರೋನ್ ಹಾರಿಸಲು ಅನುಮತಿ ನೀಡಬೇಕಾಗಿ ಸಚಿವಾಲಯ ಪ್ರಸ್ತಾವ ಸಲ್ಲಿಸಿದೆ. ಈ ಚಿತ್ರಗಳು ಇಳುವರಿ ಅಂದಾಜು ಮಾಡಲು ಸಹಕಾರಿ ಎಂದು ಸಚಿವಾಲಯದ ಅಧಿಕಾರಿ ಪುನರುಚ್ಚರಿಸಿದ್ದಾರೆ.

ಕರಾರುವಾಕ್ಕಾಗಿ ಮಾಹಿತಿ ತಿಳಿಯಬಹುದಾಗಿದೆ

ಕರಾರುವಾಕ್ಕಾಗಿ ಮಾಹಿತಿ ತಿಳಿಯಬಹುದಾಗಿದೆ

ಡ್ರೋನ್ ಆಧಾರಿತ ಚಿತ್ರಗಳನ್ನು ಆಂಧ್ರಪ್ರದೇಶ, ಬಿಹಾರ, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಒಟ್ಟು ಹತ್ತು ರಾಜ್ಯಗಳಲ್ಲಿ ದಾಖಲಿಸಲು ಸೂಚಿಸಲಾಗಿದೆ.

ಬೆಳೆಯ ಇಳುವರಿ, ಬೆಳೆ ನಷ್ಟ ಮುಂತಾದ ವಿಷಯಗಳನ್ನು ಡ್ರೋನ್ ಮೂಲಕ ತೆಗೆವ ಚಿತ್ರಗಳಿಂದ ಕರಾರುವಾಕ್ಕಾಗಿ ಮಾಹಿತಿ ತಿಳಿಯಬಹುದಾಗಿದೆ. 2020ರ ಮುಂಗಾರು ಹಂಗಾಮಿನಲ್ಲಿ 241.7 ಲಕ್ಷ ಹೆಕ್ಟೇರ್ ಪ್ರದೇಶ ವಿಮೆ ಅಡಿಯಲ್ಲಿದೆ ಎಂದೂ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಏವಿಯೇಷನ್ ತಜ್ಞರ ಅಭಿಪ್ರಾಯ

ಏವಿಯೇಷನ್ ತಜ್ಞರ ಅಭಿಪ್ರಾಯ

ಡ್ರೋನ್ ಬಳಸಿ ಭತ್ತ ಬೆಳೆದ ಭೂಮಿಯನ್ನು ಚಿತ್ರೀಕರಿಸಿದಾಗ ಪ್ರಮುಖವಾಗಿ ಸಸ್ಯ ಆರೋಗ್ಯ ಮತ್ತು ಸಸ್ಯ ಸಂರಕ್ಷಣಾ ವಿಧಾನಗಳನ್ನು ಅನುಸರಿಸಿದ್ದಾರೆಯೇ ಇಲ್ಲವೇ..? ಭೂಮಿಗೆ ಅಗತ್ಯ ಪ್ರಮಾಣದ ನೀರು ಹಾಯಿಸಿದ್ದಾರೋ ಇಲ್ಲವೋ ಎಂಬಿತ್ಯಾದಿ ಅಂಶಗಳನ್ನು ಡ್ರೋನ್ ನಲ್ಲಿ ಅಳವಡಿಸಿರುವ multispectral camera ದಾಖಲಿಸಬಲ್ಲದು.

ಅಲ್ಲದೆ ಬೆಳೆ ನಷ್ಟವನ್ನು ಅಂದಾಜು ಮಾಡುವ ಪಾರಂಪರಿಕ ವಿಧಾನಗಳಿಗಿಂತಲೂ ಇದು ಬಹಳ ಉತ್ತಮವಾದದ್ದು. ಹಾಗಾಗಿ ಇದೊಂದು ಉತ್ತಮ ಬೆಳವಣಿಗೆ ಎಂದು ಮಲ್ಟಿಪ್ಲೆಕ್ಸ್ ಡ್ರೋನ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಎಚ್.ಜಿ ಶಿವಕುಮಾರ್ ತಿಳಿಸಿದರು.

English summary
A senior official of the Ministry of Agriculture said the government is considering extending in the following days to more areas after using drone equipment in practically a hundred districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X