• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಹೈಬ್ರಿಡ್ ಭತ್ತ ಯೋಜನೆಯ ಪಿತಾಮಹ ಡಾ.ಎಂ ಮಹಾದೇವಪ್ಪ ನಿಧನ

|

ಚಾಮರಾಜನಗರ, ಮಾರ್ಚ್ 6: ಭಾರತದಲ್ಲಿ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹ, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಂ.ಮಹಾದೇವಪ್ಪ ಇಂದು ವಯೋಸಹಜ ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಮಹಾದೇವಪ್ಪ ಅವರು ಸಂಶೋಧನೆಗೆ ತೊಡಗುತ್ತಿದ್ದ ಕಳಕಳಿಯನ್ನು ಕಂಡ ಅವರ ಮಡದಿ ಸುಧಾ ಮಹಾದೇವಪ್ಪ "ನಾನು ನಿಮಗೆ ಎರಡನೆಯ ಹೆಂಡತಿ ಮೊದಲನೆಯ ಹೆಂಡತಿ ಭತ್ತ" ಎಂದು ಚೇಡಿಸಿದ್ದುಂಟು.

ಹಿರಿಯ ಸಾಹಿತಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ, ಸಿಎಂ ಸಂತಾಪ

ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದ ಮಹಾದೇವಪ್ಪ ಆಗಸ್ಟ್ 4, 1937 ರಲ್ಲಿ ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಮಾದಪ್ಪ ಹಾಗೂ ಪುಟ್ಟಬಸಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸ್ಥಳೀಯ ಶಾಲೆಯಲ್ಲಿಯೇ ಕಲಿತ ಇವರು ನಂತರ ಮೈಸೂರು, ಕೊಯಮತ್ತೂರಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.

ಧಾರವಾಡ ಕೃಷಿ ವಿವಿಯ ಉಪಕುಲಪತಿ

ಧಾರವಾಡ ಕೃಷಿ ವಿವಿಯ ಉಪಕುಲಪತಿ

ನಂತರ ಮೈಸೂರಿನ ಸಿ.ಎಫ್.ಟಿ.ಆರ್.ಐ ನಲ್ಲಿ ಹಿರಿಯ ಸಂಶೋಧಕರಾಗಿ ಸೇವೆ, ಅಲ್ಲಿಂದ ಬೆಂಗಳೂರಿನ ಕೃಷಿ ವಿವಿಯಲ್ಲಿ ಜೋಳ ಅಭಿವೃದ್ಧಿ ತಜ್ಞರಾಗಿ (ಬ್ರೀಡರ್), ಅಲ್ಲಿಂದ ಮಂಡ್ಯದ ವಿ.ಸಿ ಫಾರ್ಮನಲ್ಲಿ ಭತ್ತ ಸಸ್ಯ ವಿಜ್ಞಾನಿಯಾಗೆ ಸೇವೆ. ನಂತರ ಪಿಲಿಪೈನ್ಸ್ ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ (1977-1980). ಅಲ್ಲಿಂದ ಮತ್ತೆ ಕರ್ನಾಟಕಕ್ಕೆ ಬಂದ ಮಹಾದೇವಪ್ಪ ಅವರು ಹಲವು ಕಡೆ ಸೇವೆ ಸಲ್ಲಿಸಿ 1994 -2000 ಅವಧಿಗೆ ಧಾರವಾಡ ಕೃಷಿ ವಿವಿಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.

ಅಂತಾರಾಷ್ಟ್ರೀಯ ಮಟ್ಟದ ಕೆಲಸಗಳು

ಅಂತಾರಾಷ್ಟ್ರೀಯ ಮಟ್ಟದ ಕೆಲಸಗಳು

ಇವರು ಫಿಲಿಪೈನ್ಸ್, ಜಪಾನ್, ತೈವಾನ್, ಥೈಲ್ಯಾಂಡ್, ಮಲೇಷಿಯಾ, ಚೈನಾ, ಇಂಗ್ಲೇಡ್, ಆಸ್ಟ್ರೇಲಿಯಾ, ಅಮೆರಿಕಾ, ಕ್ಯೂಬಾ, ರಷ್ಯಾ, ಕೀನ್ಯಾ ದೇಶಗಳಲ್ಲಿ ಸಂಚರಿಸಿ ತಮ್ಮ ಸಂಶೋಧನೆ ಹಾಗೂ ಕಾರ್ಯವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದರು.

ಡಾ.ಶಿವಕುಮಾರ ಸ್ವಾಮಿಗಳು

ಡಾ.ಶಿವಕುಮಾರ ಸ್ವಾಮಿಗಳು

"ಪ್ರತಿಭೆ, ವಿದ್ವತ್ತು, ಶ್ರದ್ಧೆ, ಸೇವಾಕಾಂಕ್ಷೆಗಳ ಸಮ್ಮಿಲನವಾದ ವಿನಯ ಸೌಜನ್ಯಶೀಲಗಳ ಸುಸಂಕೃತರು ಡಾ.ಮಹಾದೇವಪ್ಪನವರು. ಭಾರತೀಯ ಜೀವನಧರ್ಮವಾದ ಕೃಷಿಯಂತಹ ಪವಿತ್ರ ಕ್ಷೇತ್ರದಲ್ಲಿ ವೃತ್ತಿಯನ್ನು ಧರ್ಮವೆಂದೇ ಪರಿಭಾವಿಸಿ ಘನತೆ ಗೌರವಕ್ಕೇರಿಸಿದ ಡಾ.ಮಹಾದೇವಪ್ಪನವರು ನಾವು ಕಂಡಂತೆ ರಾಷ್ಟ್ರದ ಅಮೂಲ್ಯ ಆಸ್ತಿ".

ಡಾ.ಎಂ.ಎಸ್ ಸ್ವಾಮಿನಾಥನ್

ಡಾ.ಎಂ.ಎಸ್ ಸ್ವಾಮಿನಾಥನ್

"Prof. M.Mahadevappa's contributions to agricultural research, education and development in our country , in general and Karnataka in particular have been truly monumental". He can be regarded as "father of the hybrid rice" program in our country. He has not only been successful breeder but also been a great leader of young professionals. ("ನಮ್ಮ ದೇಶದಲ್ಲಿ ಕೃಷಿ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿಗೆ ಪ್ರೊ.ಎಂ.ಮಹದೇವಪ್ಪ ಅವರ ಕೊಡುಗೆಗಳು ಅಪಾರ. ಸಾಮಾನ್ಯವಾಗಿ ಮತ್ತು ವಿಶೇಷವಾಗಿ ಕರ್ನಾಟಕವು ನಿಜವಾಗಿಯೂ ಸ್ಮರಣೀಯವಾಗಿದೆ ". ಅವರನ್ನು ನಮ್ಮ ದೇಶದಲ್ಲಿ "ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹ ಎಂದು ಪರಿಗಣಿಸಬಹುದು. ಅವರು ಯಶಸ್ವಿ ತಳಿಗಾರ ಮಾತ್ರವಲ್ಲದೆ ಯುವ ವೃತ್ತಿಪರರ ಶ್ರೇಷ್ಠ ನಾಯಕರಾಗಿದ್ದಾರೆ.)

ಗೂ.ರು.ಚನ್ನಬಸಪ್ಪ

ಗೂ.ರು.ಚನ್ನಬಸಪ್ಪ

"ಡಾ. ಮಹಾದೇವಪ್ಪ ಹಳ್ಳಿಗರಿಗೆ " ಬೆಳೆದರೆ ಬಾಳು, ಬೆಳೆಯದಿದ್ದರೆ ಹಾಳು" ಎಂಬ ಹಿತವಚನ ಹೇಳುತ್ತಾರೆ. ಪರಂಪರೆಯ ಒಕ್ಕಲುತನದ ಅನುಭವಗಳ ಹಿನ್ನೆಲೆಯಿಟ್ಟುಕೊಂಡೇ ಆಧುನಿಕ ವೈಜ್ಞಾನಿಕ ಪದ್ಧತಿಗಳ ಬಗೆಗೆ ರೈತರಿಗೆ ಮನವರಿಕೆ ಮಾಡಿ ಕೊಡುತ್ತಾರೆ. ಜನಪದ ಸಾಹಿತ್ಯದಲ್ಲಿ ಬರುವ ಕೃಷಿ ಸಂಬಂಧದ ನುಡಿಗಟ್ಟುಗಳನ್ನು ಹೃದಯಾರೆ ಸ್ವೀಕರಿಸಿ, ಆ ಜನ ಭಾಷೆಯಲ್ಲಿಯೇ ಕೃಷಿಕರ ಮನಮುಟ್ಟುತ್ತಾರೆ.

ಬಾಳ ಸಂಗಾತಿ ಸುಧಾ

ಬಾಳ ಸಂಗಾತಿ ಸುಧಾ

" ಇವರಿಗೆ ಬಸವಣ್ಣನವರ "ಕಾಯಕವೇ ಕೈಲಾಸ". "ದಯೆಯೇ ಧರ್ಮದ ಮೂಲ", "ಎನಗಿಂತ ಕಿರಿಯರಿಲ್ಲ" ಎಂಬ ಮಾತುಗಳು ಬಹಳ ಪ್ರಭಾವ ಬೀರಿವೆ. ಬಸವಣ್ಣನವರ ತತ್ವದ ಮೇಲೆ ಅಪಾರ ವಿಶ್ವಾಸ ಹಾಗೂ ನಂಬಿಕೆ. ಆದ್ದರಿಂದಲೇ ಜಾತಿಗಿಂತಲೂ ಒಳ್ಳೆಯ ಗುಣ ಹೊಂದಿರುವ ಮನುಷ್ಯನಿಗೆ ಬೆಲೆ ಕೊಡುತ್ತಾರೆ".

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

" Dr. Mahadevappa has made many contributions to Indian Agriculture sciences. Thanks to people like him, India has achieved self-sufficiency in agriculture and is confident of meeting the challenges of the future". ("ಡಾ.ಮಹಾದೇವಪ್ಪ ಅವರು ಭಾರತೀಯ ಕೃಷಿ ವಿಜ್ಞಾನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರಂತಹ ಜನರಿಗೆ ಧನ್ಯವಾದಗಳು, ಭಾರತವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ವಿಶ್ವಾಸ ಹೊಂದಿದೆ".)

English summary
DR. M. Mahadevappa Father of India's Rice Hybrid Paddy Project, Padma Bhushan awardee & Renowned Rice Breeder passes away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X