ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಭತ್ತ ಬೆಳೆಗೆ ಕಂದು ಜಿಗಿಹುಳು ಕಾಟ; ನಿಯಂತ್ರಣ ಹೇಗೆ?

|
Google Oneindia Kannada News

ಮಂಡ್ಯ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ನಾಟಿ ನೆಟ್ಟು ಬೆಳೆ ಚೆನ್ನಾಗಿ ಬೆಳೆದು ತೆನೆಯೊಡೆದು ಕೊಯ್ಲಿಗೆ ಬರುವ ವೇಳೆಗೆ ಅಲ್ಲಲ್ಲಿ ಕಂದು ಜಿಗಿಹುಳುಗಳು ದಾಳಿ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದ ಕಾರಣ ಕೆಆರ್ ‌ಎಸ್ ಗೆ ನೀರು ಹರಿದು ಬಂದಿದ್ದು ನಾಲೆಗೆ ನೀರು ಹರಿಯುತ್ತಿರುವುದರಿಂದ ರೈತರು ಭತ್ತದ ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ರೈತರು ಭತ್ತ ಬೆಳೆದಿದ್ದು, ತೆನೆಯೊಡೆದಿದೆ. ಹೀಗಿರುವಾಗಲೇ ಬೆಳೆಗೆ ಕೀಟಗಳು ದಾಳಿ ಮಾಡುತ್ತಿರುವುದರಿಂದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಭತ್ತದ ಕೃಷಿ ಮಾಡಿದ ಪ್ರದೇಶಗಳಲ್ಲಿ ಅಡ್ಡಾಡಿದರೆ ರೈತರು ಬೆಳೆದ ಭತ್ತದ ಗದ್ದೆಗಳಲ್ಲಿ ಭತ್ತದ ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ನಂತರ ತೆಂಡೆಗಳು ಸುಟ್ಟ ದೃಶ್ಯಗಳು ಕಾಣಸಿಗುತ್ತಿದೆ. ಮುಂದೆ ಓದಿ...

 ಮಂಡ್ಯದ ಕೆಲವು ಕಡೆ ಭತ್ತಕ್ಕೆ ಹುಳು ಕಾಟ

ಮಂಡ್ಯದ ಕೆಲವು ಕಡೆ ಭತ್ತಕ್ಕೆ ಹುಳು ಕಾಟ

ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಶಿವಪುರ, ಗಣಿಗ, ಮಾಚಗೌಡನಹಳ್ಳಿ, ದೊಡ್ಡಕೊತ್ತಗೆರೆ, ಚಿಕ್ಕ ಕೊತ್ತಗೆರೆ, ಚಂದಗಾಲು ಮುಂತಾದ ಗ್ರಾಮಗಳ ಭತ್ತದ ಗದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂದು ಜಿಗಿ ಹುಳುಗಳಿಗೆ ತುತ್ತಾಗಿರುವುದು ಕಂಡು ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತದ ಕೃಷಿಯತ್ತ ಆಸಕ್ತಿ ತೋರಿ ಬೆಳೆ ಬೆಳೆಯುತ್ತಿದ್ದು ಇದೀಗ ಬೆಳೆ ರೋಗಕ್ಕೆ ತುತ್ತಾಗುತ್ತಿರುವುದು ಆತಂಕವನ್ನು ತಂದಿದೆ.

ಮನೆಗೆ ಶೋಭೆ ತರುವ ಡೇಲಿಯಾ ಬೆಳೆಸೋದು ಬಲು ಸುಲಭ...ಮನೆಗೆ ಶೋಭೆ ತರುವ ಡೇಲಿಯಾ ಬೆಳೆಸೋದು ಬಲು ಸುಲಭ...

 ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಲು ಸೂಚನೆ

ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಲು ಸೂಚನೆ

ಈಗಾಗಲೇ ಕೀಟದ ಬಾಧೆಗೆ ತುತ್ತಾಗಿರುವ ಪ್ರದೇಶದಲ್ಲಿ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಅವರು ಭತ್ತದ ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ನಂತರ ತೆಂಡೆಗಳು ಸುಟ್ಟಂತೆ ಕಂಡು ಬಂದರೆ ತಕ್ಷಣವೇ ಕೃಷಿ ವಿಜ್ಞಾನಿಗಳು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಕೃಷಿ ವಿಜ್ಞಾನಿ ಈರೇಮಠ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೋಗ ಪೀಡಿತ ಪ್ರದೇಶಗಳಾದ ಬಸರಾಳು ಹೋಬಳಿಯ ಶಿವಪುರ, ಗಣಿಗ, ಮಾಚಗೌಡನಹಳ್ಳಿ, ದೊಡ್ಡಕೊತ್ತಗೆರೆ, ಚಿಕ್ಕ ಕೊತ್ತಗೆರೆ, ಚಂದಗಾಲು ಮೊದಲಾದ ಕಡೆ ತೆರಳಿ ಭತ್ತದ ಬೆಳೆ ವೀಕ್ಷಿಸಿ ಕಂದು ಜಿಗಿ ಹುಳುವಿನಿಂದಾಗುತ್ತಿರುವ ಹಾನಿಯನ್ನು ತಪ್ಪಿಸಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಸಲಹೆಗಳನ್ನು ನೀಡಿದ್ದಾರೆ.

 ಕಂದು ಜಿಗಿಹುಳು ತಡೆಗೇನು ಮಾಡಬೇಕು?

ಕಂದು ಜಿಗಿಹುಳು ತಡೆಗೇನು ಮಾಡಬೇಕು?

ಅವರ ಪ್ರಕಾರ ಕಂದು ಜಿಗಿಹುಳು ವಿಎನ್ ‌ಆರ್-2233. ಜೋತಿ, ಪದ್ಮಾವತಿ ಎಂಸಿ-13ಭತ್ತದ ತಳಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ರೈತರು ಭತ್ತದ ಬೆಳೆಗೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಸಾರಜನಕ (ಯೂರಿಯಾ) ರಸಗೊಬ್ಬರವನ್ನು ಬಳಸಬಾರದು, ನಾಟಿ ಮಾಡುವ ಮುನ್ನ ಸಸಿಗಳ ಗರಿಗಳ ತುದಿಯನ್ನು ಕತ್ತರಿಸಿ ತೆಗೆಯಬೇಕು, ನಾಟಿ ಮಾಡುವಾಗ ಪ್ರತಿ ಮೂರರಿಂದ ನಾಲ್ಕು ಮೀಟರ್‌ಗೆ ಕಂದು ಜಿಗಿ ಪೀಡಿತ ಪ್ರದೇಶದಲ್ಲಿ ಪೂರ್ವ ಪಶ್ಚಿಮಕ್ಕೆ ಒಂದು ಸಾಲು ನಾಟಿ ಮಾಡದಿರುವುದು ಅಥವಾ ಇಕ್ಕಲು ತೆಗೆಯುವುದು ಉತ್ತಮ ಎಂದು ಹೇಳಿದ್ದಾರೆ.

ಶ್ರೀಗಂಧದ ಸಹವಾಸವೇ ಬೇಡ; ಚಿತ್ರದುರ್ಗ ರೈತನ ಗೋಳಾಟಶ್ರೀಗಂಧದ ಸಹವಾಸವೇ ಬೇಡ; ಚಿತ್ರದುರ್ಗ ರೈತನ ಗೋಳಾಟ

 ಭತ್ತ ಮನೆ ತಲುಪಿದರೆ ಸಾಕು

ಭತ್ತ ಮನೆ ತಲುಪಿದರೆ ಸಾಕು

ಭತ್ತದ ಸಾಲಿನಿಂದ ಸಾಲಿಗೆ 15 ಸೆಂ.ಮೀ. ಮತ್ತು ಸಸಿಯಿಂದ ಸಸಿಗೆ 10 ಸೆಂ.ಮೀ. ಅಂತರದಲ್ಲಿ ನಾಟಿ ಮಾಡುವುದರಿಂದ ಕಂದು ಜಿಗಿಹುಳು ನಿರ್ವಹಣೆ ಮಾಡಬಹುದು. ಆಗಿಂದಾಗ್ಗೆ ಗದ್ದೆಯಲ್ಲಿರುವ ಲವಣಯುಕ್ತ ನೀರು ಹೊರಗೆ ಹೋಗುವಂತೆ ಮಾಡಿ, ಒಂದು ದಿನ ಒಣಗಿಸಿ ಮತ್ತೆ ಹೊಸ ನೀರು ಹಾಯಿಸಬೇಕು, ಇಮಿಡಾಕ್ಲೋಪ್ರಿಡ್ 200ಎಸ್ ‌ಎಲ್ 0.5 ಮಿಲೀ, 1ಲೀ ನೀರು, ಥಯೋಮೆಥಾಕ್ಸಂ 25ಡಬ್ಲ್ಯೂಜಿ 0.5ಗ್ರಾಂ, ಲೀ., ಕ್ಲೋರೋಪೈರಿಫಾಸ್ 200 ಇಸಿ 2ಮಿಲಿ, 1ಲೀ., ಕಾಬೋ ಫ್ಯೂರಾನ್ 3ಜಿ 20ಕೆ.ಜಿ. ಅನ್ನು 1ಲೀ ನೀರಿಗೆ ಬೆರಿಸಿ, ದ್ರಾವಣವನ್ನು ಬುಡದ ಭಾಗಕ್ಕೆ ಸಿಂಪಡಿಸಿದರೆ ಉತ್ತಮ ಬೆಳೆಯನ್ನು ಪಡೆದು, ಹೆಚ್ಚು ಇಳುವರಿಯನ್ನು ದಾಖಲಿಸಬಹುದು ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳೆ ಕೊಯ್ಲಿಗೆ ಬರುತ್ತಿರುವುದರಿಂದ ಕಾಲ ಬೆಳೆಯನ್ನು ಕಾಪಾಡಿಕೊಂಡು ಕೊಯ್ಲು ಮಾಡಿ ಭತ್ತವನ್ನು ಮನೆಗೆ ಸೇರಿಸಿಕೊಂಡರೆ ಸಾಕೆನ್ನುವಂತಾಗಿದೆ.

English summary
Paddy crops in some parts of mandya district proned to disease. Here is detail about that disease and how to control it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X