ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕೃಷಿ ವಿವಿಯಲ್ಲಿ ಮೌಲ್ಯಮಾಪನ ಡಿಜಿಟಲ್

|
Google Oneindia Kannada News

ಬೆಂಗಳೂರು,ಫೆಬ್ರವರಿ 08 : ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ವಹಣೆಗಾಗಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಈ ವರ್ಷ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯವು ಮೆ.ವಿನ್ಫೋವೇರ್ ಟೆಕ್ನಾಲಜಿ ಸಂಸ್ಥೆ ಸಹಯೋಗದಲ್ಲಿ ತನ್ನ ಬೋಧನಾ, ಸಂಶೋದನೆ ಹಾಗೂ ವಿಸ್ತರಣಾ ಕಾರ್ಯಗಳ ಸುಧಾರಣೆಗೆ ಸ್ನಾತಕ ಪದವಿ ಶೈಕ್ಷಣಿಕ ನಿರ್ವಹಣೆ, ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ಬಳಕೆ ಮಾಡಿಕೊಂಡು ಸ್ನಾತಕ ಪದವಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ನಿರ್ವಹಣೆಯನ್ನು ನಿಭಾಯಿಸಲಾಗುತ್ತದೆ.

ಸ್ನಾತಕ ಪದವಿಗೆ ದಾಖಲಾಗುವ ಹಂತದಿಂದ ಘಟಿಕೋತ್ಸವದವರೆಗೂ ಅಂದರೆ, ಟೈಮ್ ಟೇಬಲ್, ತರಗತಿ, ಹಾಜರಾತಿ, ಫಲಿತಾಂಶ ಸೇರಿದಂತೆ ಘಟಿಕೋತ್ಸವದ ವರೆಗಿನ ಪ್ರತಿಯೊಂದುಹಂತವು ಕೂಡ ಈ ತಂತ್ರಾಂಶದಿಂದ ದಾಖಲು ಮಾಡಿಕೊಳ್ಳಬಹುದಾಗಿದೆ. ಈ ತಂತ್ರಾಂಶದಲ್ಲಿ 42 ಮಾಡ್ಯೂಲ್ ಗಳಿದ್ದು, ಅವುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ವಿವಿ ನಿರ್ಧರಿಸಿದೆ. ಇದರಲ್ಲಿ ಡಿಜಿಟಲ್ ಮೌಲ್ಯಮಾಪನ ಕೂಡ ಒಂದಾಗಿದೆ.

Digital evaluation of answer papers in UAS

ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಉತ್ತರ ಪುಸ್ತಕಗಳನ್ನು ಬಾರ್ ಕೋಡ್ ಮಾಡಿ, ಸ್ಕ್ಯಾನ್ ಮಾಡಿ, ಅನುಕ್ರಮವಾಗಿ ಸಿಸ್ಟಂಗೆ ಅಪ್ ಲೋಡ್ ಮಾಡಲಾಗುತ್ತದೆ. ಮೌಲ್ಯಮಾಪಕರಿಗೆ ಈ ತಂತ್ರಾಂಶ ಬಳಸಿ ಉತ್ತರ ಪತ್ರಿಕೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಈಗಾಘಲೇ ಡಿಜಿಟಲ್ ಮೌಲ್ಯ ಮಾಪನಕ್ಕೆ ಹಾಜರಾಗುವ 150 ಮಂದಿ ಮೌಲ್ಯಮಾಪಕರಿಗೆ ತಂತ್ರಾಂಶ ಬಳಕೆ ಕುರಿತು ತರಬೇತಿ ನೀಡಲಾಗಿದೆ.

English summary
First in the country, University of Agriculture Science has introduced digital evaluation system of answer papers and entire education system in to smart system. Around one thousand students will get benefit of this system, Said UAS vice chancellor Dr. H. Shivanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X