ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬಿನ ನಾಡಲ್ಲಿ 110 ಟನ್ ಬಾಳೆ ಬೆಳೆದು ಲಾಭಗಳಿಸಿದ ರೈತ!

|
Google Oneindia Kannada News

ಧಾರವಾಡ, ಜುಲೈ 01; ತೋಟಗಾರಿಕೆ ಇಲಾಖೆ ಸಹಾಯದಿಂದ ರೈತರೊಬ್ಬರು ಕಬ್ಬಿನ ನಾಡಲ್ಲಿ 2 ಎಕರೆ 20 ಗುಂಟೆ ಜಮೀನಿನಲ್ಲಿ 110 ಟನ್ ಬಂದಾರದ ಬಾಳೆ ಬೆಳದು ಸಾಧನೆ ಮಾಡಿದ್ದಾರೆ. ಮೊದಲ ವರ್ಷವೇ ಸುಮಾರು 7 ಲಕ್ಷ ರೂ. ಆದಾಯಗಳಿಸಿದ್ದಾರೆ.

ಧಾರವಾಡ ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಬೊಳ್ಳಿ ಗ್ರಾಮದ ವಿಶ್ವಂಬರ ಬನ್ಸಿ ಎಂಬ ರೈತರು 2 ಎಕರೆ 20 ಗುಂಟೆ ಜಮೀನಿನಲ್ಲಿ ಅಂಗಾಂಶ ಬಾಳೆಯ ಹೊಸ ತೋಟ ನಿರ್ಮಿಸಿಕೊಂಡಿದ್ದಾರೆ.

ಶಿವಮೊಗ್ಗ; ಬಾಳೆ, ಅಡಕೆ ಬೆಳೆ ನಾಶ ಮಾಡಿದ ಕಾಡಾನೆಗಳು ಶಿವಮೊಗ್ಗ; ಬಾಳೆ, ಅಡಕೆ ಬೆಳೆ ನಾಶ ಮಾಡಿದ ಕಾಡಾನೆಗಳು

ತೋಟ ನಿರ್ಮಿಸಿಕೊಳ್ಳಲು ಇಲಾಖೆಯಿಂದ 30,600 ಅನುದಾನವನ್ನು ನೀಡಲಾಗಿದೆ. ಈಗ ಬಾಳೆ ಕಟಾವಿಗೆ ಬಂದಿದ್ದು ಪ್ರತಿ ಗೊನೆ ಸರಾಸರಿ 30 ರಿಂದ 35 ಕೆಜಿ ಇಳುವರಿ ನೀಡಿದೆ. ಇಲ್ಲಿವರೆಗೂ 100 ರಿಂದ 110 ಟನ್ ಕಟಾವು ಮಾಡಿ ತಲಾ 8 ರೂ. ನಂತೆ ಮಾರಾಟ ಮಾಡಿ 8,80,000 ರೂ. ಗಳಿಸಿದ್ದಾರೆ.

2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ 2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ

Dharwad Farmer Took Banana Cultivation Under National Horticulture Mission

ಮೊದಲನೇ ವರ್ಷ ಖರ್ಚು ವೆಚ್ಚ ತೆಗೆದು 7,00,000 ಲಕ್ಷ ನಿವ್ವಳ ಆದಾಯ ಗಳಿಸಿರುವುದಾಗಿ ರೈತ ವಿಶ್ವಂಬರ ಬನ್ಸಿ ಹೇಳಿದ್ದಾರೆ. ಬೆಳೆ ಬೆಳೆಯಲು ಸಹಕಾರ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಬಾಳೆ ಬೆಳೆದು ಬದುಕು ಕಟ್ಟಿಕೊಂಡ ಕೊಪ್ಪಳದ ರೈತ! ಬಾಳೆ ಬೆಳೆದು ಬದುಕು ಕಟ್ಟಿಕೊಂಡ ಕೊಪ್ಪಳದ ರೈತ!

Dharwad Farmer Took Banana Cultivation Under National Horticulture Mission

ಈ ವರ್ಷ ಇನ್ನೂ 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆಯಲು ನರೇಗಾ ಯೋಜನೆಯಡಿ ಸಹಾಯ ಪಡೆಯಲು ರೈತರು ಆಸಕ್ತಿ ವಹಿಸಿದ್ದಾರೆ. ಈ ಯೋಜನೆಯಡಿ ಮಾವು, ಪೇರಲ, ಲಿಂಬು ಹಾಗೂ ಕರಿಬೇವು ಸಸಿಗಳನ್ನು ಇಲಾಖಾ ನರ್ಸರಿಗಳಿಂದ ರಿಯಾಯಿತಿ ದರದಲ್ಲಿ ರೈತರಿಗೆ ನೀಡಲು ಅವಕಾಶವಿದೆ.

English summary
Dharwad farmer took banana cultivation under national horticulture mission. In first year farmer get profit of 7 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X