ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ; ಮಳವಳ್ಳಿ ರೈತನ ರೈಸ್ ಮ್ಯೂಸಿಯಂ ಬಗ್ಗೆ ತಿಳಿದಿದೆಯೇ?

|
Google Oneindia Kannada News

ಮಂಡ್ಯ, ಜನವರಿ 06: "ಬಹಳ ವಿಶೇಷ ಗುಣವುಳ್ಳ ಭತ್ತ ಮತ್ತು ಅಕ್ಕಿ ಯನ್ನು ಸಂರಕ್ಷಣೆ ಮಾಡುತ್ತಿರುವ ಸಯ್ಯದ್ ಗನಿಖಾನ್ ಅವರ ಕೆಲಸ ಬಹಳ ಶ್ಲಾಘನೀಯ" ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಹೇಳಿದರು.

ಬುಧವಾರ ಜಿಲ್ಲಾಧಿಕಾರಿಗಳು ಮಳವಳ್ಳಿ ತಾಲೂಕಿನ ಕಿರುಗಾವಲಿನ ಪ್ರಗತಿ ಪರ ರೈತ ಸಯ್ಯದ್ ಗನಿಖಾನ್ ಅವರ ಜಮೀನು ಮತ್ತು ಮನೆಗೆ ಭೇಟಿ ನೀಡಿದರು. "ಭತ್ತಗಳನ್ನು, ಭತ್ತದ ಜರ್ಮ್ ಪ್ಲಾಸಂಗಳನ್ನು ಸಂಗ್ರಹಣೆ ಮಾಡುವುದರಲ್ಲಿ ಬಹಳ ಅನುಕರಣೀಯ ಕೆಲಸವನ್ನು ಮಾಡಿದ್ದಾರೆ" ಎಂದರು.

ಕರ್ನಾಟಕ: ಭತ್ತ, ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕರ್ನಾಟಕ: ಭತ್ತ, ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತ ಸಯ್ಯದ್ ಗನಿಖಾನ್ ಮನೆಯಲ್ಲಿ ರೈಸ್ ಮ್ಯೂಸಿಯಂ ಮಾಡಿದ್ದಾರೆ. ಅಂದಾಜು 1,300 ಕ್ಕೂ ಹೆಚ್ಚು ವಿವಿಧ ರೈಸ್ ಜರ್ಮ್ ಪ್ಲಾಸಂಗಳನ್ನು ಮನೆಯಲ್ಲೇ ವೈಜ್ಞಾನಿಕವಾಗಿ ಸಂಗ್ರಹಣೆ ಮಾಡಿದ್ದಾರೆ. ಅವರ ಜಮೀನಿನಲ್ಲೇ ಬೆಳೆದ ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ.

 ಮಂಡ್ಯದಲ್ಲಿ ಭತ್ತ ಬೆಳೆಗೆ ಕಂದು ಜಿಗಿಹುಳು ಕಾಟ; ನಿಯಂತ್ರಣ ಹೇಗೆ? ಮಂಡ್ಯದಲ್ಲಿ ಭತ್ತ ಬೆಳೆಗೆ ಕಂದು ಜಿಗಿಹುಳು ಕಾಟ; ನಿಯಂತ್ರಣ ಹೇಗೆ?

 Deputy Commissioner Visits Rice Museum Malavalli

ಸಯ್ಯದ್ ಗನಿಖಾನ್ ಅವರು ತಾವು ಸಂಗ್ರಹಿಸಿರುವ ಜರ್ಮ್ ಪ್ಲಾಸಂಅನ್ನು ಸುತ್ತಮುತ್ತಲಿನ ರೈತರಿಗೂ ಕೊಟ್ಟು ವಿವಿಧ ತಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ತಳಿಗಳಲ್ಲಿ ವಿಶೇಷವಾದಂತಹ ಗುಣಗಳಿವೆ. ಕೆಲವು ತಳಿಗಳ ಅಕ್ಕಿಯಲ್ಲಿ ಸುಗಂಧದ ಗುಣಗಳಿದ್ದು, ಕೆಲವೊಂದು ಬೇಗ ಇಳುವರಿಯನ್ನು ಕೊಡುತ್ತವೆ, ಕೆಲವೊಂದು ನಿಧಾನವಾದರೂ ಗುಣಮಟ್ಟದ ಇಳುವರಿ ಬರುತ್ತದೆ.

ಹವಾಮಾನ ಬದಲಾವಣೆ; ಭತ್ತ ಬೆಳೆಯುವ ರೈತರಿಗೆ ಸಲಹೆ ಹವಾಮಾನ ಬದಲಾವಣೆ; ಭತ್ತ ಬೆಳೆಯುವ ರೈತರಿಗೆ ಸಲಹೆ

ಕೆಲವು ತಳಿಗಳಲ್ಲಿ ವಿಟಮಿನ್, ಕ್ಯಾಲ್ಸಿಯಂ, ನಾರಿನ ಪ್ರಮಾಣ ಹೆಚ್ಚಾಗಿರುತ್ತದೆ. ಇನ್ನು ಕೆಲವು ಅಕ್ಕಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇವು ಆರೋಗ್ಯಕರವಾಗಿ ಕೂಡಾ ಇವೆ. ನಮ್ಮ ಕರ್ನಾಟಕದ ಭತ್ತದೊಂದಿಗೆ ಭಾರತದ ವಿವಿಧ ರಾಜ್ಯಗಳಿಂದ, ದೇಶಗಳಿಂದ ತಂದಂತಹ ಭತ್ತಗಳನ್ನ ಸಂಗ್ರಹಣೆ ಮಾಡಿದ್ದಾರೆ.

 Deputy Commissioner Visits Rice Museum Malavalli

ಮನುಷ್ಯನಾದವನು ಜೀವಂತವಾಗಿ ಇರಬೇಕಾದರೇ ಮಾನವನ ನಾಗರೀಕತೆ ಉಳಿಯಬೇಕಾದರೇ ಆಹಾರ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಅಕ್ಕಿಯೊಂದಿಗೆ ಮಾನವ ಒಂದು ಅವಿನಾಭಾವ ಸಂಬಂಧವಿಟ್ಟುಕೊಂಡಿದ್ದಾನೆ.

English summary
Mandya deputy commissioner Dr. M. V. Venkatesh visited farmer Sayad Gani Khan farm in Malavalli. Farmer has rice museum and 1300 various type of paddy crop available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X