ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದಲ್ಲಿ ಸೊಪ್ಪು ಕಡಲೆ ತಿನ್ನಲು ಹಿಂಡುಹಿಂಡಾಗಿ ಲಗ್ಗೆ ಇಡುತ್ತಿವೆ ಕಡವೆಗಳು

By ಚಿದಾನಂದ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಜನವರಿ 19: ಕೋಟೆನಾಡಿನ ರೈತರ ಪಾಲಿಗೆ ಕಡವೆಗಳು ತಲೆನೋವಾಗಿ ಪರಿಣಮಿಸಿದೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಸೊಪ್ಪಿನ ಕಡಲೆಯನ್ನು ಹೆಚ್ಚಾಗಿ ಬೆಳೆದಿದ್ದು, ಇದಕ್ಕೆ ಕಡವೆಗಳ ಕಾಟ ಹೆಚ್ಚಾಗಿದೆ. ಪ್ರತಿನಿತ್ಯ ಹೊಲಕ್ಕೆ ದಾಳಿ ಇಡುವ ಹಿಂಡು ಹಿಂಡು ಕಡವೆಗಳು ರೈತರಿಗೆ ಚಿಂತೆ ತಂದಿದೆ.

ತಂಬಾಕಿನ ಬ್ಯಾರನ್ ನಲ್ಲಿ ಸಿಕ್ತು 80 ಕೆ.ಜಿ ಕಡವೆ ಮಾಂಸತಂಬಾಕಿನ ಬ್ಯಾರನ್ ನಲ್ಲಿ ಸಿಕ್ತು 80 ಕೆ.ಜಿ ಕಡವೆ ಮಾಂಸ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದ ರಾಜೇಂದ್ರ ಎಂಬ ರೈತನ ಸುಮಾರು 20 ಎಕರೆಯಲ್ಲಿ ಬೆಳೆದ ಸೊಪ್ಪಿನ ಕಡಲೆಯನ್ನು ಪ್ರತಿನಿತ್ಯ ಬರುವ ಕಡವೆಗಳು ತಿಂದು ಹಾಕುತ್ತಿವೆ. ಅದೇ ಗ್ರಾಮದ ನೂರಾರು ಎಕರೆ ಜಾಗದಲ್ಲಿ ರೈತರು ಕಡಲೆ ಬೆಳೆದಿದ್ದು, ಕಡವೆಗಳ ಕಾಟದಿಂದ ಆತಂಕದಲ್ಲಿದ್ದಾರೆ. ಇದೇ ಸಮಸ್ಯೆ ಕುರಿತು ರೈತ ರಾಜೇಂದ್ರ ಕಳೆದ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ ನಾಶವಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ ಅವರಿಂದ ಯಾವುದೇ ಪರಿಹಾರ ದೊರಕಿಲ್ಲ.

Deers Become Problem For Hiriyur Farmers

ಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆ

ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯೂರು ಅರಣ್ಯ ವಲಯ ಅಧಿಕಾರಿ ಶ್ರೀಹರ್ಷ ಅವರು ಮಾತನಾಡಿ, "ಆಂಧ್ರ ಮತ್ತು ಕರ್ನಾಟಕ ಗಡಿ ಭಾಗವಾಗಿರುವುದರಿಂದ ಕಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ರೈತರು ಬೆಳೆ ನಾಶದ ಬಗ್ಗೆ ದಾಖಲಾತಿ ಒದಗಿಸಿ ಕೊಟ್ಟರೆ ಇ-ಆಫ್ ಎಂಬ ಹೊಸ ಯೋಜನೆಯಿಂದ 15ರಿಂದ 30 ದಿನಗಳ ಒಳವೆ ಪರಿಹಾರ ಕೊಡಲಾಗುವುದು" ಎಂದು ಮಾಹಿತಿ ನೀಡಿದರು.

English summary
The deers have become problem for the farmers of chitradurga. In Hiriyur, deers eating all the crops
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X