ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದಗೌಡರನ್ನು ಅಭಿನಂದಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು!

|
Google Oneindia Kannada News

ನವದೆಹಲಿ, ಫೆ. 12: ಕೊರೊನಾ ಸಂಕಷ್ಟದ ಮಧ್ಯೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜಿ ಬಿ ಎಲ್‌ ನರಸಿಂಹರಾವ್‌ ಅವರ ಪೂರಕ ಪ್ರಶ್ನೆಗೆ ಡಿವಿಎಸ್ ಉತ್ತರಿಸಿದರು. ಕೊರೊನಾ ವೈರಸ್‌ ಸಂಕಷ್ಟದಿಂದ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಕೆಲಸಗಾರರ ಪೈಕಿ ಯಾರಿಗಾದರೂ ಕೋವಿಡ್ ಸೋಂಕು ತಗುಲಿದರೆ ಇಡೀ ಕಾರ್ಖಾನೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಅದೇ ರೀತಿ ಸಾಗಣೆ ಮಾಡುವಾಗ, ಲೋಡ್‌, ಅನ್‌ಲೋಡ್‌ ಮಾಡುವಾಗ ಕಾರ್ಮಿಕರ ಕೊರತೆ ಎದುರಾಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನೀಭಾಯಿಸಲಾಯಿತು. ಅತಿವೃಷ್ಟಿಯಿಂದ ಕೆರೆ-ಕುಂಟೆಗಳು, ನೀರಾವರಿ ಜಲಾಶಯಗಳು ತುಂಬಿದವು. ಬಿತ್ತನೆ ಪ್ರದೇಶ ವೃದ್ಧಿಸಿ ರಸಗೊಬ್ಬರ ಬೇಡಿಕೆಯೂ ಹೆಚ್ಚಾಯಿತು. ಹೇಚ್ಚಾದ ಬೇಡಿಕೆಯನ್ನು ಪೂರೈಸಿ ಎಲ್ಲಿಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿ ವಲಯ ಶೇಕಡಾ 3.7 ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ಸಚಿವರು ವಿವರಿಸಿದರು.

ಇದಕ್ಕೆ ಮೊದಲು ವಿಜಯಸಾಯಿ ರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು ಆಂಧ್ರ ಪ್ರದೇಶದಲ್ಲಿಯೂ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೋಳ್ಳಲಾಗಿದೆ ಎಂದರು.

D.V. Sadananda Gowda said in Rajya sabha that fertilizer supply has increased by 25% this year

ಪ್ರತಿ ಹಂಗಾಮು ಶುರುವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ನಮ್ಮ ಇಲಾಖೆಯು ಪ್ರತಿಯೊಂದು ರಾಜ್ಯಗಳ ಬೇಡಿಕೆಯ ವಿವರ ಪಡೆದು ಅದರ ಪ್ರಕಾರವೇ ವಿವಿಧ ನಮೂನೆಯ ರಸಗೊಬ್ಬರಗಳನ್ನು ಸರಬರಾಜಿಗೆ ವ್ಯವಸ್ಥೆ ಮಾಡುತ್ತದೆ. ಪ್ರತಿವಾರವೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲ ರಾಜ್ಯಗಳ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ.

ಇದಲ್ಲದೆ ಯಾವ-ಯಾವ ರಾಜ್ಯಗಳಲ್ಲಿ ಯಾವ-ಯಾವ ನಮೂನೆಯ ರಸಗೊಬ್ಬರಗಳು ಎಷ್ಟೆಷ್ಟು ಇವೆ ಎಂಬುದನ್ನು ನಮ್ಮ ಆನ್‌ಲೈನ್‌ ಡ್ಯಾಷ್‌ಬೋರ್ಡ್-ʼಸಂಯೋಜಿತ ರಸಗೊಬ್ಬರ ಪರಿಶೀಲನಾ ವ್ಯವಸ್ಥೆ (ಐಎಫ್‌ಎಂಎಸ್)-ಮೂಲಕ ಪ್ರತಿದಿನವೂ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸದಾನಂದ ಗೌಡ ವಿವರಿಸಿದರು.

D.V. Sadananda Gowda said in Rajya sabha that fertilizer supply has increased by 25% this year

ವಿಜಯಸಾಯಿ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಆಂಧ್ರಪ್ರದೇಶದಲ್ಲಿ ಯಾವುದೇ ನಮೂನೆಯ ಗೊಬ್ಬರ ಕೊರತೆಯಾಗಿಲ್ಲ, ರಾಜ್ಯಕ್ಕೆ (ಎಪಿ) ಪ್ರಸಕ್ತ ಸಾಲಿನಲ್ಲಿ (2020-21) ಇದುವರೆಗೆ 17.5 ಲಕ್ಷ ಟನ್‌ ಯೂರಿಯಾ, 4 ಲಕ್ಷ ಟನ್‌ ಡಿಎಪಿ, 2.8 ಲಕ್ಷ ಟನ್‌ ಎಂಓಪಿ ಹಾಗೂ 13.5 ಲಕ್ಷ ಟನ್‌ ಎನ್‌ಪಿಕೆ ನಮೂನೆ ರಸಗೊಬ್ಬರ ಪೂರೈಕೆಯಾಗಿದೆ ಎಂದು ವಿವರಿಸಿದರು.

ಕೊರೊನಾ ಸಾಂಕ್ರಮಿಕದ ಮಧ್ಯೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡಿದ್ದಕ್ಕೆ ರಾಜ್ಯಸಭೆ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

English summary
Union chemical and fertilizer minister D.V. Sadananda Gowda said in Rajya sabha that fertilizer supply has increased by 25 per cent this year compared to last year. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X