• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಿಬೇವು ಬೆಳೆದು ಲಾಭಗಳಿಸಿದ ಧಾರವಾಡದ ರೈತ

|
Google Oneindia Kannada News

ಧಾರವಾಡ, ಜೂನ್ 25; ಕರಿಬೇವು ಅಡುಗೆಯ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ರೈತರು ಬೇಸಾಯ ಮಾಡಿದರೆ ಲಾಭವನ್ನು ತಂದುಕೊಡುತ್ತದೆ ಎಂದು ಧಾರವಾಡದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.

ಧಾರವಾಡದ ಮದೀಕೊಪ್ಪದ ರೈತ ಮೌಲಾಲಿ ಮಕ್ತುಮಸಾಬ ಬೇವಿನಮರದ ಒಂದೂವರೆ ಎಕರೆಯಲ್ಲಿ 25-30 ಕ್ವಿಂಟಾಲ್ ಕರಿಬೇವು ಬೆಳೆದಿದ್ದಾರೆ. ಇದರಿಂದಾಗಿ 85 ರಿಂದ 90 ಸಾವಿರ ರೂ. ಆದಾಯ ಪಡೆದಿದ್ದಾರೆ.

2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ 2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ

ರೈತ ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆದರು.1 ಎಕರೆ 20 ಗುಂಟೆ ಪ್ರದೇಶದಲ್ಲಿ ಕರಿಬೇವು ಬೆಳೆ ಹೊಸ ತೋಟ ನಿರ್ಮಿಸಿಕೊಂಡರು.

ವಿಶೇಷ ವರದಿ: ರೈತರ ಬೆಂಬಲಕ್ಕೆ ನಿಲ್ಲದ ಸರ್ಕಾರ, ಸಿಡಿದೆದ್ದ ಚಿತ್ರದುರ್ಗದ ರೈತ ದಯಾನಂದವಿಶೇಷ ವರದಿ: ರೈತರ ಬೆಂಬಲಕ್ಕೆ ನಿಲ್ಲದ ಸರ್ಕಾರ, ಸಿಡಿದೆದ್ದ ಚಿತ್ರದುರ್ಗದ ರೈತ ದಯಾನಂದ

ಆರು ತಿಂಗಳ ಅವಧಿಯಲ್ಲಿ 25 ರಿಂದ 30 ಕ್ವಿಂಟಾಲ್ ಕಟಾವು ಮಾಡಿ ಸುಮಾರು 85 ರಿಂದ 90 ಸಾವಿರ ರೂ.ಗಳ ಆದಾಯ ಪಡೆದಿದ್ದಾರೆ. ನರೇಗಾ ಯೋಜನೆಯಡಿ ಹೊಸತೋಟ ನಿರ್ಮಿಸಿಕೊಳ್ಳಲು ಕೂಲಿ ವೆಚ್ಚವಾಗಿ 1,07,013 ರೂ. ಹಾಗೂ ಸಾಮಗ್ರಿ ವೆಚ್ಚವಾಗಿ 16,820 ರೂ. ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ಪಡೆದರು. 389 ಮಾನವ ದಿನಗಳನ್ನು ಸೃಜಿಸಿದರು.

 ಮಂಡ್ಯ; ಪರಿಹಾರಕ್ಕಾಗಿ ರಸ್ತೆಯಲ್ಲೇ ಧರಣಿ ಕೂತ ರೈತ ದಂಪತಿ ಮಂಡ್ಯ; ಪರಿಹಾರಕ್ಕಾಗಿ ರಸ್ತೆಯಲ್ಲೇ ಧರಣಿ ಕೂತ ರೈತ ದಂಪತಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಧಾರವಾಡ ತಾಲೂಕಿನ ಎಲ್ಲ ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಅವಕಾಶವಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ 9743518608, ಅಮ್ಮಿನಬಾವಿ ಹೋಬಳಿ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ 9916114535, ಧಾರವಾಡ ಹೋಬಳಿ ಅಧಿಕಾರಿ ಯಲ್ಲಮ್ಮ ಐರಣಿ 9591164754 ಸಂಪರ್ಕಿಸಬಹುದು.

English summary
Dharwad district Mudikoppa farmer took curry tree cultivation under MGNREGA scheme. Get profit around 85 to 90 thousand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X