ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲು ಹಾಕಿ: ಸಿಎಂ ಸೂಚನೆ

|
Google Oneindia Kannada News

ಬೆಂಗಳೂರು, ಜೂನ್ 13: ಕಬ್ಬು ಬೆಳೆಗಾರರಿಗೆ ಶೀಘ್ರವೇ ಬಾಕಿ ಪಾವತಿಸಿ ಇಲ್ಲವೇ ಸಕ್ಕರೆ ಕಾರ್ಖಾನೆ ಮುಚ್ಚಿ ಎಂದು ಸಿಎಂ ಕುಮಾರಸ್ವಾಮಿ ಅವರು ಇಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಸಕ್ಕರೆ ಹರಾಜು ಹಾಕಿ ರೈತರಿಗೆ ಅವರಿಗೆ ಸಿಗಬೇಕಾದ ಹಣ ಪಾವತಿಸಲು ಸೂಚನೆ ನೀಡಿ ಎಂದು ಹೇಳಿದರು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಸಂಪುಟದಿಂದ ಹೊರಕ್ಕೆ?ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಸಂಪುಟದಿಂದ ಹೊರಕ್ಕೆ?

ಇದೇ ತಿಂಗಳ 30 ರ ಒಳಗಾಗಿ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಬಾಕಿ ಹಣ ಪಾವತಿ ಮಾಡಬೇಕು, ಹಣವಿಲ್ಲ ಎಂದರೆ ಸಕ್ಕರೆ ಹರಾಜು ಹಾಕಿ, ಬಾಕಿ ಪಾವತಿ ಮಾಡದಿದ್ದರೆ ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

CM Kumaraswamy warn sugar factory owners to pay balance money to farmers

ರೈತರಿಗೆ ಬಾಕಿ ಹಣ ಕೊಡಿಸುವ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದು, ರೈತರ ಬಾಕಿ ಹಣ ಕೊಡಿಸಲು ಆಗದೇ ಇದ್ದರೆ ಅದರ ಸಂಪೂರ್ಣ ಹೊರೆ ಜಿಲ್ಲಾಧಿಕಾರಿಗಳದ್ದೇ ಎಂದು ಸಿಎಂ ಕುಮಾರಸ್ವಾಮಿ ಇಂದು ಹೇಳಿದರು.

ಸಂಪುಟ ವಿಸ್ತರಣೆ : ಎರಡು ಖಾತೆಗಳಿಗೆ ಕಾಂಗ್ರೆಸ್ ಬೇಡಿಕೆ?ಸಂಪುಟ ವಿಸ್ತರಣೆ : ಎರಡು ಖಾತೆಗಳಿಗೆ ಕಾಂಗ್ರೆಸ್ ಬೇಡಿಕೆ?

ಈ ಸಭೆಯಲ್ಲಿ ಈ ವರ್ಷದ ಕಬ್ಬಿನ ಬಾಕಿ ಹಣ ಪಾವತಿಯ ಬಗ್ಗೆ ಅಷ್ಟೆ ಮಾತನಾಡಲಾಯಿತು, ಕಳೆದ ವರ್ಷದ ಬಾಕಿ ಹಣದ ಬಗ್ಗೆ ಸ್ಪಷ್ಟ ನಿರ್ಣಯ ಪಡೆಯಲಾಗಲಿಲ್ಲ.

ಕುಮಾರಸ್ವಾಮಿ ಸಂಪುಟ ಸೇರುವ ಶಾಸಕರ ಹೆಸರು ಇನ್ನೂ ನಿಗೂಢ!ಕುಮಾರಸ್ವಾಮಿ ಸಂಪುಟ ಸೇರುವ ಶಾಸಕರ ಹೆಸರು ಇನ್ನೂ ನಿಗೂಢ!

ಕೆಲವು ದಿನಗಳ ಹಿಂದಷ್ಟೆ ಕಬ್ಬು ಬೆಳೆಗಾರರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಿದ್ದರು. ಕಬ್ಬು ಬೆಳೆಗಾರರ ಮುಖಂಡರು, ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡುವುದಾಗಿ ಅಂದು ಭರವಸೆ ನೀಡಿದ್ದರು.

English summary
CM Kumaraswamy did meeting with sugar factory owners. He warned sugar factory owners to pay balance money to sugar cane farmers immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X