ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖರ್ಚು ಮಾಡಿದ್ದು 2 ಲಕ್ಷ, ಸಿಕ್ಕಿದ್ದು 10 ರೂಪಾಯಿ; ಟೊಮೆಟೊ ಬೆಳೆದ ಚಿತ್ರದುರ್ಗ ರೈತನ ಕಥೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮಾರ್ಚ್ 20: ರೈತನೊಬ್ಬ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದು ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾನೆ. ಆದರೆ ಆತನಿಗೆ ಕೇವಲ ಹತ್ತು ರೂಪಾಯಿ ಲಾಭ ಸಿಕ್ಕಿದೆ. ಇದನ್ನು ನೋಡಿದ ರೈತ ಆಶ್ಚರ್ಯ ಪಟ್ಟಿದ್ದಾನೆ.

ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರೈತ ಲಕ್ಷ್ಮಣ್ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದನು. ಬೆಳೆ ಉತ್ತಮ ಇಳುವರಿ ಕೂಡ ಬಂದಿತ್ತು.

ಮೈಸೂರು: ಕಡಿಮೆ ಬೆಲೆಗೆ ತಂಬಾಕು ಮಾರಿ ಕೈ ಸುಟ್ಟುಕೊಂಡ ರೈತರು ಮೈಸೂರು: ಕಡಿಮೆ ಬೆಲೆಗೆ ತಂಬಾಕು ಮಾರಿ ಕೈ ಸುಟ್ಟುಕೊಂಡ ರೈತರು

118 ಬಾಕ್ಸ್ ಟೊಮೆಟೊ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸಾಗಿಸಿದ್ದರು. ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತ ಎಪಿಎಂಸಿ ಅಧಿಕಾರಿಗಳು ನೀಡಿದ ಬಿಲ್ ನೋಡಿ ದಂಗಾಗಿದ್ದಾನೆ. ಬೀಜ, ಗೊಬ್ಬರ, ಕಳೆ, ಕೂಲಿ, ಸಾಕಷ್ಟು ಖರ್ಚು ಮಾಡಿದ್ದರು.

Chitradurga: Farmer Spent Rs 2 Lakh To Grow Tomatoes And Got Rs 10 Profit Only

ಕೋಲಾರ ಮಾರುಕಟ್ಟೆಗೆ ಟೊಮೆಟೊ ಹಣ್ಣನ್ನು ಕಳಿಸಲು ಟೆಂಪೋ ಬಾಡಿಗೆ, ಕಮಿಷನ್, ಕೂಲಿ ಎಲ್ಲ ಖರ್ಚು ಕಳೆದು ಕೇವಲ 10 ರೂಪಾಯಿ ಲಾಭ ನೀಡಿದ್ದಾರೆ.

ರೈತನ ಟೊಮೆಟೊ ಸಾಗಾಟ ವೆಚ್ಚ 5130, ರೂಪಾಯಿ, ಕೂಲಿ ಖರ್ಚು 118 ರೂಪಾಯಿ ಕಳೆದು ನಂತರ ಎಪಿಎಂಸಿ ಅಧಿಕಾರಿಗಳು 10 ರೂಪಾಯಿ ಬಿಲ್ಲನ್ನು ರೈತನ ಕೈಗೆ ನೀಡಿದ್ದಾರೆ.

Chitradurga: Farmer Spent Rs 2 Lakh To Grow Tomatoes And Got Rs 10 Profit Only

10 ರೂಪಾಯಿ ಬಿಲ್ಲನ್ನು ರೈತ ಲಕ್ಷ್ಮಣ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳುಹಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

English summary
A Chitradurga farmer has spent 2 lakh rupees on growing tomatoes, selling them at Kolar's APMC market. But he got was just ten rupees profit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X