ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನ ಬೆಳೆಗಾರರೆ ಸಿಹಿ ಸುದ್ದಿ ನಿರೀಕ್ಷಿಸಿ, ಭಾರತದ ತೆಂಗಿನೆಣ್ಣೆ ಖರೀದಿಸುವ ಚಿಂತನೆಯಲ್ಲಿ ಚೀನಾ

|
Google Oneindia Kannada News

ಬೆಂಗಳೂರು ಜೂ.16: ವಿವಿಧ ದೇಶಗಳಿಂದ ತೆಂಗಿನ ಎಣ್ಣೆ ಆಮದು ಮಾಡಿಕೊಳ್ಳುವ ರಾಷ್ಟ್ರ ಚೀನಾ ಭಾರತದಿಂದಲೂ ಸಹ ತೆಂಗಿನ ಎಣ್ಣೆ ಆಮದು ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ಇದು ನಿಜವೇ ಆದಲ್ಲಿ ಭವಿಷ್ಯದಲ್ಲಿ ಭಾರತ ತೆಂಗಿನ ಎಣ್ಣೆಗೆ ಬೇಡಿಕೆ ಹೆಚ್ಚಾಗುತ್ತದೆ. ಇಲ್ಲಿನ ತೆಂಗಿನಕಾಯಿ ಬೆಳೆಗಾರರಿಗೂ, ಈ ವಲಯಕ್ಕೂ ಸಾಕಷ್ಟು ಉತ್ತೇಜನ ದೊರೆಯುತ್ತದೆ.

ಮೂಲಗಳ ಪ್ರಕಾರ ಚೀನಾ ವ್ಯಕ್ತಪಡಿಸಿದ ಇಂಗಿತ ಒಪ್ಪಂದ ರೂಪ ಪಡೆದು, ಆಮದು-ರಫ್ತು ವಹೀವಾಟು ಆರಂಭವಾಗಲು ಸಾಕಷ್ಟು ಸಮಯಬೇಕಿದೆ. ಈ ಬಗ್ಗೆ ಯಾವುದು ಅಂತಿಮವಾಗಿಲ್ಲ. ಎಲ್ಲವು ಮಾತುಕತೆಯ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

ನವೋದ್ಯಮ ಹೂಡಿಕೆಯಲ್ಲಿ ಸಿಂಗಪುರ, ಪ್ಯಾರೀಸ್ ಮೀರಿಸಿದ ಬೆಂಗಳೂರುನವೋದ್ಯಮ ಹೂಡಿಕೆಯಲ್ಲಿ ಸಿಂಗಪುರ, ಪ್ಯಾರೀಸ್ ಮೀರಿಸಿದ ಬೆಂಗಳೂರು

ತೆಂಗಿನ ಎಣ್ಣೆ ಆಮದು ಮಾಡಿಕೊಳ್ಲುವ ದೊಡ್ಡ ರಾಷ್ಟ್ರ ‌ಪೈಕಿ ಅಗ್ರ ಸ್ಥಾನದಲ್ಲಿರುವ ಚೀನಾ ಪ್ರಸ್ತುತದಲ್ಲಿ ಇತರ ದೇಶಗಳಾದ ಇಂಡೋನೇಷಿಯಾ ಪಿಲಿಪೈನ್ಸ, ಶ್ರಿಲಂಕಾ ಮತ್ತು ಮಲೇಷಿಯಾಗಳಿಂದ ಟನ್ ಗಟ್ಟಲೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಿಂದ ಈವರೆಗೆ ಒಮ್ಮೆಯೂ ಚೀನಾಗೆ ತೆಂಗಿನ ಎಣ್ಣೆ ರಫ್ತಾಗಿಲ್ಲ ಎನ್ನಲಾಗಿದೆ.

China Thinks of Importing Coconut Oil from India

ಅಧಿಕ ಬೆಲೆ ಹಿನ್ನೆಲೆ ರಫ್ತಿಗೆ ಹಿನ್ನಡೆ!?

ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಗುಣಮಟ್ಟದ ತೆಂಗಿನ ಎಣ್ಣೆಯ ದರ ಹೆಚ್ವಿದೆ. ಒಂದು ಟನ್ ಎಣ್ಣೆಗೆ ಭಾರತದ ಹಾಲಿ ದರ 1,947 ಯುಎಸ್ ಡಾಲರ್ ಇದ್ದರೆ, ಇತರ ದೇಶಗಳಲ್ಲಿ ಅದೇ ಪ್ರತಿ ಟನ್ ಕೊಬ್ಬರಿ ಎಣ್ಣೆಗೆ 1,647 ಯುಎಸ್ ಡಾಲರ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಎಣ್ಣೆಯ ದರ ಇತರ ದೇಶಗಳಲ್ಲಿ ಟನ್ ಗೆ 1,631 ಯುಎಸ್ ಡಾಲರ್ ಇದ್ದರೆ, ಭಾರತದಲ್ಲಿ ಟಮ್ ಗೆ 2,501 ಯುಎಸ್ ಡಾಲರ್ ನಷ್ಟಿತ್ತು. ಈ ತುಟ್ಟಿ ದರದ ಕಾರಣಕ್ಕಾಗಿಯೇ ಚೀನಾ ಭಾರತದಿಂದ ತೆಂಗಿನ ಎಣ್ಣೆ ಖರೀದಿಸಿಲ್ಲ ಎನ್ನಲಾಗಿದೆ.

ಆಧುನೀಕರಣಕ್ಕೆ ಒತ್ತು, ಭಾರತೀಯ ರೈಲ್ವೆಯಿಂದ ಸ್ಟಾರ್ಟಪ್‌ಗಳ ಮೇಲೆ ವಾರ್ಷಿಕ 50 ಕೋಟಿ ಹೂಡಿಕೆಆಧುನೀಕರಣಕ್ಕೆ ಒತ್ತು, ಭಾರತೀಯ ರೈಲ್ವೆಯಿಂದ ಸ್ಟಾರ್ಟಪ್‌ಗಳ ಮೇಲೆ ವಾರ್ಷಿಕ 50 ಕೋಟಿ ಹೂಡಿಕೆ

ಚೀನಾಗೆ ರಫ್ತಾದರೆ ಬೇಡಿಕೆ ಅಧಿಕ, ರೈತರ ಸ್ಥಿತಿ ಸುಧಾರಣೆ

ತೆಂಗಿನ ಎಣ್ಣೆ ರಫ್ತು ಕುರಿತು ಪ್ರತಿಕ್ರಿಯಸಿದ ಉದ್ಯಮ ವ್ಯಾಪಾರ ಸಲಹೆಗಾರ ಕೆ.ಕೆ.ದೇವರಾಜ್ ಎಂಬುವರು, ಮಲೇಷಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಪಿಲಿಪೈನ್ಸ್, ಶ್ರೀಲಂಕಾ, ಇಂಡೋನೇಷಿಯಾ ದೇಶಗಳಂತೆ ಭಾರತ ಚೀನಾಗೆ ತೆಂಗಿನ ಎಣ್ಣೆ ರಫ್ತು ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ. ತೆಂಗಿನಕಾಯಿ ಬೆಳೆಯುವ ಬೆಳೆಗಾರರಿಗೆ ವ್ಯಾಪಾರ ಉತ್ತೇನ ಲಭ್ಯವಾಗಿ ಅವರ ಆದಾಯ ಹೆಚ್ಚುತ್ತದೆ. ಒಟ್ಟಾರೆ ಈ ವಲಯದ ಬೆಳವಣಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

China Thinks of Importing Coconut Oil from India

ಎಣ್ಣೆ ದರದಲ್ಲಿ ತುಸು ಬದಲಾವಣೆ ಅಗತ್ಯ:

ವಿದೇಶಗಳಿಗೆ ಭಾರತದ ತೆಂಗಿನ ಎಣ್ಣೆ ರಫ್ತಾದರೆ ಲಾಭವಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇತರ ದೇಶಗಳಂತೆ ನಾವು ಕಳುಹಿಸಬಹುದಾದ ಎಣ್ಣೆ ಪ್ರಮಾಣ, ಗುಣಮಟ್ಟದ ಮೇಲೆ ಮಾರುಕಟ್ಟೆಯ ಬೆಲೆ, ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟು ನಿರ್ಧರಿತವಾಗುತ್ತದೆ. ಭಾರತ ಈಗಾಗಲೇ ಕೆನಡಾ, ಇಂಗ್ಲೆಂಡ್, ಐಲೆಂಡ್ ಸ್ಕಾಟ್ಲೆಂಟ್ ಮತ್ತು ಅಮೆರಿಕಾ‌ ದೇಶಗಳಿಗೆ ತೆಂಗಿನೆಣ್ಣೆ ರಫ್ತು ಮಾಡುತ್ತಿದೆ. ಹಾಲಿ ದರದಲ್ಲಿ ತುಸು ಬದಲಾವಣೆ ತಂದರೆ ಚೀನಾದಂತ ದೈತ್ಯ ರಾಷ್ಟ್ರಗಳಿಗೆ ರಫ್ತು ಮಾಡಲು ಸಹಕಾರಿಯಾಗುತ್ತದೆ ಎಂದು ಕೊಚ್ಚಿಯ ಆಯಿಲ್ ಮರ್ಚಂಟ್ ಅಸೋಸಿಯೇಷನ್ ನಿರ್ದೇಶಕರೊಬ್ಬರು ಹೇಳಿದ್ದಾರೆ.

ಒಮ್ಮೆ ಖರೀದಿಸಿದ್ದ ಚೀನಾ

ಅನೇಕ ವರ್ಷಗಳ ಹಿಂದೆ ಚೀನಾ ಒಂದೊಮ್ಮೆ ಭಾರತದಿಂದ ತೆಂಗಿನ ಕಚ್ಚಾ ಸಾಮಗ್ರಿಗಳನ್ನು ಯಥೆಚ್ಚವಾಗಿ ಖರೀದಿಸಿತ್ತು. ಅದು ಆ ವಸ್ತುಗಳನ್ನು ಪಾನೀಯ, ಜೈವಿಕ ಇಂಧನ ತಯಾರಿಕೆಗೆ ಬಳಸಿಕೊಂಡಿತ್ತು. ಆಗ ಭಾರತದಲ್ಲಿ ಪ್ರತಿ ಕೇಜಿ ತೆಂಗಿನೆಣ್ಣೆ ಬೆಲೆ ಅಂದಾಜು 20-22 ಯುಎಸ್ ಡಾಲರ್ ಇತ್ತು ಎಂದು ತಿಳಿದುಬಂದಿದೆ.

ಆದಷ್ಟು ಶ್ರೀಘ್ರವೇ ಈ ಸಂಬಂಧ ಎರಡು ದೇಶಗಳ ನಡುವೆ ಒಪ್ಪಂದ ಏರ್ಪಟ್ಟರೆ ತೆಂಗಿನ ಕಾಯಿ ಬೆಳೆಗಾರಿಕೆಗೆ ಪ್ರೋತ್ಸಾಹ ಸಿಕ್ಕಂತಾಗಿ ಆರ್ಥಿಕತೆ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ವಿಳಂಬಿಸಿದೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

(ಒನ್ಇಂಡಿಯಾ ಸುದ್ದಿ)

English summary
In what could be a potential to be big booster to Indian coconut growers, China has expressed interest in importing coconut oil from India. Karnataka is one of the biggest coconut cultivating state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X