ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಕೆ.ಜಿ ಸಗಣಿಗೆ 2ರೂ, ಸರ್ಕಾರದಿಂದ ಯೋಜನೆ ಜಾರಿಗೆ

|
Google Oneindia Kannada News

ರಾಯ್ ಪುರ್, ಜುಲೈ 20: ಗ್ರಾಮೀಣ ಜನ, ಹೈನುಗಾರಿಕೆ, ರೈತರಿಗೆ ಆರ್ಥಿಕ ಉತ್ತೇಜನ ನೀಡುವ ಸಲುವಾಗಿ ಛತ್ತೀಸ್ ಗಢ ಸರ್ಕಾರವು ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಸೋಮವಾರದಂದು ಯೋಜನೆಗೆ ಚಾಲನೆ ನೀಡಿದರು. ಸಾವಯವ, ಎರೆ ಹುಳು ಗೊಬ್ಬರ ಉತ್ಪಾದನೆಗೆ ಮುಂದಾಗಿರುವ ಸರ್ಕಾರ, ದನಗಾಹಿಗಳಿಂದ ಸಗಣಿ ಸಂಗ್ರಹಿಸತೊಡಗಿದೆ.

ಒಂದು ಕೆ.ಜಿ ಸಗಣಿಗೆ 2 ರೂ.ನಂತೆ ಖರೀದಿರಲು ಛತ್ತೀಸ್ ಘಢ ಸರ್ಕಾರ ಬೆಲೆ ನಿಗದಿ ಮಾಡಿದೆ. ಜುಲೆೈ 20ರಿಂದ ಹರೇಲಿ ಹಬ್ಬದ ಅಂಗವಾಗಿ ಗೋಧನ್ ನ್ಯಾಯ ಯೋಜನೆ ಅನ್ವಯ ಸಗಣಿ ಖರೀದಿಗೆ ಚಾಲನೆ ನೀಡಲಾಗಿದೆ. ಸಗಣಿ ಸಂಗ್ರಹಕ್ಕೆ ಮಹಿಳಾ ಸ್ವಯ ಸಹಾಯ ಸಂಘದವರನ್ನು ಬಳಸಿಕೊಳ್ಳಲಾಗುತ್ತಿದೆ. 11360 ಗ್ರಾಮ ಪಂಚಾಯಿತಿ, 20, 000 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 5000ಕ್ಕೂ ಅಧಿಕ ಗೊಬ್ಬರ ಉತ್ಪಾದನೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳಿಂದ ಉತ್ಪಾದನೆಯಾಗುವ ಸಾವಯವ ಗೊಬ್ಬರವನ್ನು 8 ರು ಪ್ರತಿ ಕೆಜಿಯಂತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಲಾಕ್‌ ಡೌನ್‌: ಸರಕಾರದ ಪರವಾಗಿ ಗೋವು ಸಾಕುತ್ತಿರುವ ಗೋಶಾಲೆಗಳ ಆರ್ಥಿಕ ಸಮಸ್ಯೆಲಾಕ್‌ ಡೌನ್‌: ಸರಕಾರದ ಪರವಾಗಿ ಗೋವು ಸಾಕುತ್ತಿರುವ ಗೋಶಾಲೆಗಳ ಆರ್ಥಿಕ ಸಮಸ್ಯೆ

Chhattisgarh govt launches Godhan Nyay Yojna

ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವ ಉಪ ಸಮಿತಿ ನೀಡಿದ ವರದಿ ಆಧಾರದ ಮೇಲೆ ಈ ಯೋಜನೆ ಕಾರ್ಯಗತವಾಗುತ್ತಿದೆ. ಹರೇಲಿ ಹಬ್ಬದಿಂದ ಆರಂಭಗೊಂಡು ಸಗಣಿ ಸಂಗ್ರಹ ಬೃಹತ್ ಪ್ರಮಾಣದಲ್ಲಿ ಆಗಲಿದ್ದು, ಸಾವಿರಾರು ಟನ್ ಸಗಣಿ ಸಂಗ್ರಹಿಸಿ, ಸಾವಯವ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

English summary
Chhattisgarh Chief Minister Bhupesh Baghel on Monday launched Godhan Nyay Yojna under which the state government will procure cow dung from cattle rearers at Rs 2 per kg for production of organic fertilizers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X