ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಫಾಸಿ ಕಾಯ್ದೆ ತಿದ್ದುಪಡಿ

|
Google Oneindia Kannada News

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಬೆಂಗಳೂರಿನ ಕಾಫಿ ಮಂಡಳಿ ಕೇಂದ್ರ ಕಚೇರಿಯಲ್ಲಿ ಕಾಫಿ ಬೆಳೆಗಾರರು, ಸಂಸ್ಕರಣಾಗಾರರು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸವಿವರವಾದ ಸಂವಾದ ನಡೆಸಿದರು. ಸಭೆಯ ಪ್ರಮುಖ ನಿರ್ಧಾರಗಳು ಹೀಗಿವೆ

I. ಕಾಫಿ ಕಾಯಿದೆಯ ಸರಳೀಕರಣ: ಪ್ರಸ್ತುತ ಇರುವ ಕಾಫಿ ಕಾಯಿದೆಯನ್ನು 1942 ರಲ್ಲಿ ಜಾರಿಗೆ ತರಲಾಗಿದೆ. ಇದು ಈಗ ಅನಗತ್ಯವೆನಿಸುವ ಮತ್ತು ಕಾಫಿ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. ಆದ್ದರಿಂದ, ಈ ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಹಾಗೂ ನಿರ್ಬಂಧಿತ ಮತ್ತು ನಿಯಂತ್ರಕ ನಿಬಂಧನೆಗಳನ್ನು ತೆಗೆದುಹಾಕಲು ಮತ್ತು ಕಾಫಿ ವಲಯದ ಪ್ರಸ್ತುತ ಅಗತ್ಯಗಳಿಗೆ ಸರಿಹೊಂದುವ ಮತ್ತು ಬೆಳವಣಿಗೆಗೆ ಪೂರಕವಾಗುವ ಸರಳ ಕಾಯಿದೆಯನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾಫಿ ಬೋರ್ಡಿಗೆ ಅಧ್ಯಕ್ಷನಾದ ಬೆಳೆಗಾರ: ಸಂಸದೆ ಶೋಭಾ ಸಂತಸಕಾಫಿ ಬೋರ್ಡಿಗೆ ಅಧ್ಯಕ್ಷನಾದ ಬೆಳೆಗಾರ: ಸಂಸದೆ ಶೋಭಾ ಸಂತಸ

II ಸರ್ಫಾಸಿ ಕಾಯ್ದೆ: ಸರ್ಫಾಸಿ (SARFAESI) ಕಾಯಿದೆಯಡಿ ಬ್ಯಾಂಕುಗಳು ನೀಡಿರುವ ನೋಟಿಸ್‌ಗಳಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕವನ್ನು ಕಾಫಿ ಬೆಳೆಗಾರರು ವ್ಯಕ್ತಪಡಿಸಿದರು. ವಿವರವಾದ ಸಂವಾದದ ನಂತರ, ಈ ಸಮಸ್ಯೆಯನ್ನು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಚರ್ಚಿಸಲಾಗುವುದು ಮತ್ತು ಸದ್ಯದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಗೌರವಾನ್ವಿತ ಸಚಿವರು ಬೆಳೆಗಾರರಿಗೆ ಭರವಸೆ ನೀಡಿದರು.

ಟಿಎಂಎ ಅಡಿಯಲ್ಲಿ ಹೆಚ್ಚಿನ ಸಹಾಯ

ಟಿಎಂಎ ಅಡಿಯಲ್ಲಿ ಹೆಚ್ಚಿನ ಸಹಾಯ

III ಸಾರಿಗೆ ಮತ್ತು ಮಾರುಕಟ್ಟೆ ನೆರವು ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ಸಹಾಯ:
ಅಂತಾರಾಷ್ಟ್ರೀಯ ಸರಕು ದರಗಳ ಹೆಚ್ಚಳದಿಂದಾಗಿ, ಭಾರತೀಯ ಕೃಷಿ-ರಫ್ತುಗಳು ಹಲವಾರು ಸ್ಥಳಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಫ್ತುದಾರರು ಕಳವಳ ವ್ಯಕ್ತಪಡಿಸಿದರು. ಸಾರಿಗೆ ಮತ್ತು ಮಾರುಕಟ್ಟೆ ನೆರವು ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ನೆರವಿನೊಂದಿಗೆ ಸರ್ಕಾರವು ಕೃಷಿ-ರಫ್ತುದಾರರಿಗೆ ಸಹಾಯ ನೀಡದಿದ್ದರೆ, ಭಾರತವು ಇತರ ಸ್ಪರ್ಧಾತ್ಮಕ ಮೂಲಗಳಿಗೆ ಶಾಶ್ವತವಾಗಿ ಕೃಷಿ ರಫ್ತುಗಳ ಹಲವು ಮಾರುಕಟ್ಟೆಗಳನ್ನು ಕಳೆದುಕೊಳ್ಳಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದರು. ಕೃಷಿ ರಫ್ತಿಗೆ ಸಹಾಯ ಮಾಡಲು ಹಾಗೂ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಟಿಎಂಎ ಯೋಜನೆಯಡಿ ವಿಶೇಷ ಪ್ಯಾಕೇಜ್ ಅನ್ನು ಕನಿಷ್ಠ ಒಂದು ವರ್ಷದವರೆಗೆ ಪರಿಗಣಿಸಲಾಗುವುದು ಎಂದು ಗೌರವಾನ್ವಿತ ಸಚಿವರು ರಫ್ತುದಾರರಿಗೆ ಎಂದು ಭರವಸೆ ನೀಡಿದರು.

ಬಿಳಿ ಕಾಂಡ ಕೊರಕ ಕೀಟದ ಸಮಸ್ಯೆ

ಬಿಳಿ ಕಾಂಡ ಕೊರಕ ಕೀಟದ ಸಮಸ್ಯೆ

IV. ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದ ಸಮಸ್ಯೆ:
ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದಿಂದ ಉಂಟಾಗಿರುವ ಹಾನಿಯ ಗಂಭೀರತೆ ಮತ್ತು ಕಾಫಿ ಮಂಡಳಿಯ ಅಡಿಯಲ್ಲಿರುವ ಸಂಶೋಧನಾ ವಿಭಾಗವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ ಎಂಬ ಅಂಶವನ್ನು ಮನಗಂಡ ಸಚಿವರು, ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದ ಬಗ್ಗೆ ಸುಧಾರಿತ ಸಂಶೋಧನೆಯನ್ನು ಆರಂಭಿಸಲು ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಗೆ ಮನವಿ ಮಾಡಲಾಗುವುದು ಎಂದು ಬೆಳೆಗಾರರಿಗೆ ಭರವಸೆ ನೀಡಿದರು.

ಬ್ರೆಜಿಲ್‌ನಲ್ಲಿ ಹಿಮಪಾತ; ಕಾಫಿಯ ದರ ಸಾರ್ವಕಾಲಿಕ ಏರಿಕೆಬ್ರೆಜಿಲ್‌ನಲ್ಲಿ ಹಿಮಪಾತ; ಕಾಫಿಯ ದರ ಸಾರ್ವಕಾಲಿಕ ಏರಿಕೆ

 ಬಡ್ಡಿ ವಿನಾಯಿತಿಗಾಗಿ ವಿಶೇಷ ಪ್ಯಾಕೇಜ್

ಬಡ್ಡಿ ವಿನಾಯಿತಿಗಾಗಿ ವಿಶೇಷ ಪ್ಯಾಕೇಜ್

V. ಕಾಫಿ ಸಾಲಗಳ ಪುನರ್ರಚನೆ ಮತ್ತು ಬಡ್ಡಿ ವಿನಾಯಿತಿಗಾಗಿ ವಿಶೇಷ ಪ್ಯಾಕೇಜ್:
ಅಸ್ತಿತ್ವದಲ್ಲಿರುವ ಎಲ್ಲಾ ಸಾಲಗಳನ್ನು ದೀರ್ಘಾವಧಿಯ ಮರುಪಾವತಿ ಅವಧಿಯೊಂದಿಗೆ ಮರುರಚಿಸಿ ಏಕ ಅವಧಿಯ ಸಾಲವಾಗಿ ಘೋಷಿಸಬೇಕು ಮತ್ತು ಕಡಿಮೆ ಬಡ್ಡಿಯೊಂದಿಗೆ ಹೊಸ ಕೆಲಸದ ಬಂಡವಾಳವನ್ನು ವಿಸ್ತರಿಸಬೇಕು ಎಂದು ಕಾಫಿ ಮಂಡಳಿಯ ಅಧ್ಯಕ್ಷರು ಸಚಿವರಿಗೆ ಮನವಿ ಮಾಡಿದರು.

ಈ ಸಂಕಷ್ಟದ ಸಮಯದಲ್ಲಿ ಕಾಫಿ ಬೆಳೆಗಾರರಿಗೆ ಸಚಿವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಸಂಬಂಧಿತ ಸಚಿವಾಲಯಗಳ ಜೊತೆ ಚರ್ಚಿಸಿ ಕಾರ್ಯಸಾಧ್ಯವಾದ ಪ್ಯಾಕೇಜ್ ರೂಪಿಸುವ ಬಗ್ಗೆ ಭರವಸೆ ನೀಡಿದರು.

ಕಾಫಿ ಮಂಡಳಿಯ ವಿಸ್ತರಣಾ ಚಟುವಟಿಕೆ

ಕಾಫಿ ಮಂಡಳಿಯ ವಿಸ್ತರಣಾ ಚಟುವಟಿಕೆ

VI ಕಾಫಿ ಮಂಡಳಿಯ ವಿಸ್ತರಣಾ ಚಟುವಟಿಕೆಗಳನ್ನು ಬಲಪಡಿಸುವುದು:
ಕಾಫಿ ತೋಟಗಳಲ್ಲಿ ವಿಸ್ತರಣಾ ಸಿಬ್ಬಂದಿಯು ಕೈಗೊಳ್ಳಬೇಕಾದ ಕ್ಷೇತ್ರ ಭೇಟಿಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಸೆಮಿನಾರ್‌ಗಳು ಇತ್ಯಾದಿ ವಿಸ್ತರಣಾ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೈಜ ಸಮಯದಲ್ಲಿ ನೀಡಲು ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸುವಂತೆ ಸಚಿವರು ಕಾಫಿ ಮಂಡಳಿಗೆ ನಿರ್ದೇಶನ ನೀಡಿದರು.

ಕಾಫಿ ಮಂಡಳಿಯನ್ನು ಮುಚ್ಚುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದ ಸಚಿವರು, ಈ ಕುರಿತ ಪಾಲುದಾರರ ಆತಂಕವನ್ನು ನಿವಾರಿಸಿದರು. ಆದಾಗ್ಯೂ, ಕಾಫಿ ಬೆಳೆಗಾರರಿಗೆ ವಿಶೇಷವಾಗಿ ಸಣ್ಣ ಬೆಳೆಗಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು, ಕಾಫಿ ಮಂಡಳಿಯನ್ನು ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ವರ್ಗಾಯಿಸಲು ಉದ್ದೇಶಿಸಲಾಗಿದೆ. ಇದು ಕೃಷಿಯ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಕಾಫಿ ಬೆಳೆಗಾರರಿಗೆ ವಿಸ್ತರಿಸುವುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ತಿಳಿಸಿದರು.

ಒಟ್ಟಾರೆಯಾಗಿ, ತಮ್ಮ ಸಮಸ್ಯೆಗಳ ಬಗ್ಗೆ ಸಹಾನುಭೂತಿಯಿಂದ ಪ್ರತಿಕ್ರಿಯಿಸಿದ್ದಕ್ಕಾಗಿ ಎಲ್ಲಾ ಕಾಫಿ ಪಾಲುದಾರರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾಫಿಯ ಉತ್ಪಾದನೆ, ರಫ್ತು ಮತ್ತು ಕಾಫಿ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸುವುದಾಗಿಯೂ ಅವರು ಸಚಿವರಿಗೆ ಭರವಸೆ ನೀಡಿದರು.

English summary
Centre to Simplify Coffee Act and promote ease of doing business, ICAR to do research on Coffee, Tea and Spices said Union Minister Piyush Goyal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X