ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾಯ್ದೆ: ರೈತರಿಗೆ ಕೇಂದ್ರ ಸರ್ಕಾರದ ಲಿಖಿತ ಭರವಸೆ

|
Google Oneindia Kannada News

ನವದೆಹಲಿ, ಡಿಸೆಂಬರ್ 9: ಕೃಷಿ ಕಾಯ್ದೆಗಳಲ್ಲಿ ಕೆಲವು ತಿದ್ದುಪಡಿ ಮಾಡಲು ಸಿದ್ಧವಿರುವುದಾಗಿ ಇದುವರೆಗಿನ ಸಭೆಗಳಲ್ಲಿ ರೈತರಿಗೆ ಮೌಖಿಕ ಭರವಸೆ ನೀಡುತ್ತಿದ್ದ ಕೇಂದ್ರ ಸರ್ಕಾರ ಈಗ ಲಿಖಿತ ಪ್ರಸ್ತಾವ ಸಲ್ಲಿಸಿದೆ. ತನ್ನ ಲಿಖಿತ ಪ್ರಸ್ತಾವದಲ್ಲಿ ಅದು ಮೂರು ವಿಭಾಗಗಳಲ್ಲಿ ವಿನಾಯಿತಿ ನೀಡುವ ಆಫರ್ ನೀಡಿದೆ. ಈ ಮಂಚಿನ ಸಭೆಗಳಲ್ಲಿ ಈ ಮೌಖಿಕ ಆಶ್ವಾಸನೆಗಳನ್ನು ರೈತರು ತಿರಸ್ಕರಿಸಿದ್ದರು.

ಬೆಳೆಗಳಿಗೆ ನೀಡುವ ಬೆಂಬಲ ದರವು ಹಾಗೆಯೇ ಇರಲಿದೆ, ವಿವಾದಗಳಿದ್ದ ಸಂದರ್ಭದಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬದಲು ರೈತರು ನ್ಯಾಯಾಲಯಕ್ಕೆ ಹೋಗಬಹುದು ಮತ್ತು ರೈತರು ವಿರೋಧ ವ್ಯಕ್ತಪಡಿಸಿರುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಲಾಗುವುದು ಎಂದು ಲಿಖಿತ ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಕೃಷಿ ಕಾಯ್ದೆ: ರೈತರೊಂದಿಗಿನ ಅಮಿತ್ ಶಾ ಸಭೆ ವಿಫಲಕೃಷಿ ಕಾಯ್ದೆ: ರೈತರೊಂದಿಗಿನ ಅಮಿತ್ ಶಾ ಸಭೆ ವಿಫಲ

ಸರ್ಕಾರ ನೀಡಿದ ಪ್ರಸ್ತಾವಗಳ ಬಗ್ಗೆ ಬುಧವಾರ ಬೆಳಿಗ್ಗೆ ಸಭೆ ನಡೆಸಿ ಚರ್ಚಿಸಿದ ರೈತರು, ಕಠಿಣವಾದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೆ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

Centre Offers Written Assurance To Farmers Over Farm Laws

ಹೊಸ ಕೃಷಿ ಕಾಯ್ದೆಗಳ ಕುರಿತು ರೈತರಲ್ಲಿ ಇರುವ ಎಲ್ಲ ಅನುಮಾನ, ಆತಂಕಗಳಿಗೂ ಅಗತ್ಯ ಸ್ಪಷ್ಟೀಕರಣ ನೀಡಲಾಗುವುದು. ರೈತರು ಕಳವಳ ವ್ಯಕ್ತಪಡಿಸಿರುವ ವಲಯಗಳಲ್ಲಿ ಕಾಯ್ದೆಗಳಲ್ಲಿ ಸೂಕ್ತ ತಿದ್ದುಪಡಿ ಮಾಡಲು ಕೂಡ ಸಿದ್ಧ ಎಂದು 13 ರೈತ ಒಕ್ಕೂಟಗಳಿಗೆ ಸಲ್ಲಿಸಲಾಗಿರುವ ಕರಡು ಪ್ರಸ್ತಾವದಲ್ಲಿ ಸರ್ಕಾರ ತಿಳಿಸಿದೆ.

ಕೃಷಿಭೂಮಿಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಆತಂಕವನ್ನು ರೈತ ಒಕ್ಕೂಟಗಳು ವ್ಯಕ್ತಪಡಿಸಿವೆ. ಕಾಯ್ದೆಗಳಲ್ಲಿ ಅದನ್ನು ಉಲ್ಲೇಖಿಸಿದ್ದರೂ, ಕೃಷಿ ಭೂಮಿಯ ಮೇಲೆ ಯಾವ ಖರೀದಿದಾರರೂ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಂತಹ ಷರತ್ತುಗಳನ್ನು ರೈತರಿಗೆ ವಿಧಿಸುವುದೂ ಇಲ್ಲ ಎಂದು ಸರ್ಕಾರ ಹೇಳಿದೆ.

'ರೈತರೇನು ಮಹಾ' ಎನ್ನುವವರ ನಡುವೆಯೂ ಯಶಸ್ವಿಯಾದ ಭಾರತ್ ಬಂದ್'ರೈತರೇನು ಮಹಾ' ಎನ್ನುವವರ ನಡುವೆಯೂ ಯಶಸ್ವಿಯಾದ ಭಾರತ್ ಬಂದ್

ಮಂಡಿಗಳಾಚೆ ಕಾರ್ಯನಿರ್ವಹಿಸುವ ವ್ಯಾಪಾರಿಗಳನ್ನು ರಾಜ್ಯ ಸರ್ಕಾರಗಳು ನೋಂದಣಿ ಮಾಡಿಕೊಳ್ಳಬಹುದು. ಎಪಿಎಂಸಿ ಮಂಡಿಗಳನ್ನು ಬಳಸಿಕೊಳ್ಳುವ ವರ್ತಕರಿಗೆ ರಾಜ್ಯ ಸರ್ಕಾರಗಳು ತೆರಿಗೆ ಮತ್ತು ಸೆಸ್ ಕೂಡ ವಿಧಿಸುವಂತೆ ತಿದ್ದುಪಡಿ ತರಬಹುದು ಎಂದು ತಿಳಿಸಿದೆ.

ಸರ್ಕಾರದ ಲಿಖಿತ ಪ್ರಸ್ತಾವ ಬರುವುದಕ್ಕೂ ಮುನ್ನ ಸಿಂಘು ಗಡಿಯಲ್ಲಿ ರೈತ ಒಕ್ಕೂಟಗಳು ನಡೆಸಿದ ಸಭೆಯಲ್ಲಿ, ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಯಿತು. 'ನಾವು ಯಾವುದೇ ತಿದ್ದುಪಡಿಗಳನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ಸಂಪೂರ್ಣ ರದ್ದತಿ ಬೇಕು' ಎಂದು ರೈತರ ಪ್ರತಿನಿಧಿಗಳು ಹೇಳಿದ್ದಾರೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಡಿಸೆಂಬರ್ 12ರಂದು ನಾವು ದೆಹಲಿ-ಜೈಪುರ ಮತ್ತು ದೆಹಲಿ-ಆಗ್ರಾ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ ಎಂದು ಸಿಂಘು ಗಡಿಯಲ್ಲಿ ರೈತ ಮುಖಂಡರು ತಿಳಿಸಿದ್ದಾರೆ.

English summary
Centre has sent written assurance to farmers unions with offers of some amendments. Farmers decided to protest until laws withdrawn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X