ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್‌ಪಿ ದರದಲ್ಲಿ ದಾಖಲೆ ಪ್ರಮಾಣದ ಗೋಧಿ ಖರೀದಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಜೂನ್ 09: ಕೇಂದ್ರ ಸರ್ಕಾರವು ಈ ಬಾರಿ ದಾಖಲೆ ಪ್ರಮಾಣದಲ್ಲಿ ಎಂಎಸ್‌ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್‌ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ.

ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ ಆರ್ ಎಂಎಸ್ 2021-22 ರ ಗೋಧಿ ದಾಸ್ತಾನು ಸರಾಗವಾಗಿ ನಡೆಯುತ್ತಿದೆ ಎಂದು ಅಧಿಕೃತ ಪ್ರಕಟಣೆಯ ಮೂಲಕ ತಿಳಿದುಬಂದಿದೆ.

ಪ್ರತಿ ಕ್ವಿಂಟಾಲ್‌ ಭತ್ತದ ಕನಿಷ್ಠ ಬೆಂಬಲ ಬೆಲೆ 72 ರೂ. ಏರಿಕೆಪ್ರತಿ ಕ್ವಿಂಟಾಲ್‌ ಭತ್ತದ ಕನಿಷ್ಠ ಬೆಂಬಲ ಬೆಲೆ 72 ರೂ. ಏರಿಕೆ

ಜೂ.8 ವರೆಗೂ ಸರ್ಕಾರ 418.47 ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸರ್ಕಾರ 373.22 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿತ್ತು. ಇದರಿಂದಾಗಿ 46 ಲಕ್ಷ ರೈತರಿಗೆ ಲಾಭ ಗಳಿಸಿದೆ ಎಂದು ಸರ್ಕಾರ ಹೇಳಿದೆ.

Centre Buys Record 418.47 Lakh Tonnes Wheat For Rs 82,648 Cr In 2021

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹಾಗೂ ಎಂಎಸ್ ಪಿಗೆ ಲಿಖಿತ ಖಾತ್ರಿಯನ್ನು ನೀಡುವುದಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಏಪ್ರಿಲ್-ಮಾರ್ಚ್ ತಿಂಗಳಲ್ಲಿ ರಾಬಿ ಮಾರ್ಕೆಟಿಂಗ್ ಸೀಸನ್ (ಆರ್ ಎಂಎಸ್) ನಡೆಯಲಿದೆ. ಆದರೆ ಬೃಹತ್ ಪ್ರಮಾಣದ ಸಂಗ್ರಹ ಜೂನ್ ವೇಳೆಗೆ ಮುಕ್ತಾಯಗೊಳ್ಳಲಿದೆ.

ಪ್ರಸಕ್ತ ಮಾರ್ಕೆಟಿಂಗ್ ವರ್ಷದಲ್ಲಿ 418.47 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 82,648 ಕೋಟಿ ರೂಪಾಯಿಗಳಷ್ಟು ಖರ್ಚಾಗಿದೆ ಎಂದು ಹೇಳಿದೆ. ರೈತರ ಪ್ರತಿಭಟನೆಯ ನಡುವೆಯೂ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಗೋಧಿಯನ್ನು ಖರೀದಿಸಲಾಗಿದೆ.

English summary
The Centre on Wednesday said it has procured a record 418.47 lakh tonnes of wheat so far in the current marketing year that started in April, costing exchequer Rs 82,648 crore. The record procurement of wheat has been achieved amid farmers' protests at Delhi borders since late November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X