ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ರೋಸ್ ಈರುಳ್ಳಿ ,ಕೃಷ್ಣಪುರಂ ಈರುಳ್ಳಿ ರಫ್ತಿಗೆ ಕೇಂದ್ರ ಒಪ್ಪಿಗೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ಬೆಂಗಳೂರಿನ ರೋಸ್ ಈರುಳ್ಳಿ ಹಾಗೂ ಕೃಷ್ಣಪುರಂ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಬೆಲೆ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಎಲ್ಲಾ ವಿಧದ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು.

ನಷ್ಟಕ್ಕೆ ಬೇಸತ್ತು ಈರುಳ್ಳಿ ಬೆಳೆ ನಾಶಪಡಿಸುತ್ತಿರುವ ಚಿತ್ರದುರ್ಗದ ರೈತರುನಷ್ಟಕ್ಕೆ ಬೇಸತ್ತು ಈರುಳ್ಳಿ ಬೆಳೆ ನಾಶಪಡಿಸುತ್ತಿರುವ ಚಿತ್ರದುರ್ಗದ ರೈತರು

ರಫ್ತು ನಿಷೇಧವನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ.

Central Govt Allows Exports Of Bangalore Rose Onions, Krishnapuram Onions

ಎರಡು ತಳಿಗಳ ಈರುಳ್ಳಿ ಚೆನ್ನೈ ಬಂದರು ಮೂಲಕ ರಫ್ತಾಗುತ್ತದೆ. ಅದಕ್ಕೂ ಮುನ್ನ ಕರ್ನಾಟಕದ ತೋಟಗಾರಿಕಾ ಆಯುಕ್ತರಿಂದ ಬೆಂಗಳೂರು ರೋಸ್‌ ತಳಿಗೆ ಹಾಗೂ ಆಂಧ್ರಪ್ರದೇಶದ ಕಡಪದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ರಫ್ತು ಮಾಡುವುದಕ್ಕೆ ಅನುಮತಿ ಪತ್ರ ಪಡೆಯಬೇಕು.

ಈಗ ಬೆಂಗಳೂರು ರೋಸ್‌ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತಿಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮಾರ್ಚ್ 31, 2021ರ ವರೆಗೆ, ಗರಿಷ್ಠ 10 ಸಾವಿರ ಮೆಟ್ರಿಕ್‌ ಟನ್ ವರೆಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ.

Recommended Video

ಕಡೆಗೂ ಫಾರ್ಮ್ ಕಂಡುಕೊಂಡ Dinesh Karthik | Oneindia Kannada

ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ.

English summary
India on Friday eased the export norms for certain kinds of onions and allowed the export of Bangalore Rose Onions and Krishnapuram Onions of up to 10,000 MT each upto March 31, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X