• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ನೆರವು ನೀಡಲಿರುವ AI ಆಧಾರಿತ ಡಿಜಿಟಲ್ ಸಾಥಿ ಆರಂಭ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 23: ದೇಶದ ರೈತಾಪಿ ವರ್ಗವನ್ನು ಸಬಲಗೊಳಿಸುವ ಮತ್ತು ಆರ್ಥಿಕ ಜೀವನಮಟ್ಟವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಗಿಲ್(Cargill) ಇದೇ ಮೊದಲ ಬಾರಿಗೆ ಮೊಬೈಲ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಆಧಾರಿತ ''ಡಿಜಿಟಲ್ ಸಾಥಿ''ಯನ್ನು ಬಿಡುಗಡೆ ಮಾಡಿದೆ. ಇದೊಂದು ಸ್ಥಳೀಯ ಆನ್ ಲೈನ್ ಸೇವಾ ಪ್ಲಾಟ್‌ಫಾರ್ಮ್ ಆಗಿದೆ. ಈ ಡಿಜಿಟಲ್ ಸಾಥಿಯು ರೈತರಿಗೆ ಕೃಷಿಗೆ ಸಂಬಂಧಿತ ಸಲಹೆಗಳನ್ನು ನೀಡಲಿದೆ ಮತ್ತು ಅವರು ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಪ್ರವೇಶಿಸುವ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಲಿದೆ. ಡಿಜಿಟಲ್ ಸಾಥಿಯು ಬೇಸಿಕ್ ಆ್ಯಂಡ್ರಾಯ್ಡ್ ಫೋನ್‌ಗಳಲ್ಲೂ ಲಭ್ಯವಿದ್ದು, ಕನ್ನಡ ಭಾಷೆಯನ್ನು ಒಳಗೊಂಡಿದೆ.

ಕರ್ನಾಟಕದಲ್ಲಿ ದಾವಣಗೆರೆ, ಬಳ್ಳಾರಿ, ಹಾವೇರಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ಒದಗಿಸಲಿದೆ. ಈ ಮೊಬೈಲ್ ಆ್ಯಪ್ ಅನ್ನು ಬಳಸಿಕೊಂಡು ಸಣ್ಣ ಮತ್ತು ಅತಿ ಸಣ್ಣ ರೈತರು ದೊಡ್ಡ ರೈತರು, ಕೃಷಿ ಉತ್ಪನ್ನ ಕಂಪನಿಗಳು, ಕೃಷಿ ಉತ್ಪನ್ನಗಳ ಪೂರೈಕೆದಾರರು, ಖರೀದಿದಾರರು, ವಾಣಿಜ್ಯೋದ್ಯಮಿಗಳು ಮತ್ತು ಸಂಸ್ಕರಣೆ ಮಾಡುವ ಸಂಸ್ಥೆಗಳನ್ನು ಸುಲಭವಾಗಿ ಪತ್ತೆ ಮಾಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಮತ್ತು ಅವರಿಂದ ತಮಗೆ ಅಗತ್ಯವಿರುವ ಕೃಷಿ ಸಂಬಂಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಖರೀದಿಸಲು ನೆರವಾಗುತ್ತದೆ.

ಕರ್ನಾಟಕದ ಸಣ್ಣ ರೈತರು ನೋಂದಣಿ

ಕರ್ನಾಟಕದ ಸಣ್ಣ ರೈತರು ನೋಂದಣಿ

ಈಗಾಗಲೇ ಈ ರೈತ ಮೊಬೈಲ್ ಆ್ಯಪ್‌ನಲ್ಲಿ 6000 ಕ್ಕೂ ಅಧಿಕ ಕರ್ನಾಟಕದ ಸಣ್ಣ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಮತ್ತು 2022 ರ ಮೇ ವೇಳೆಗೆ 30,000 ಕ್ಕೂ ಅಧಿಕ ರೈತರು ನೋಂದಣಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರ್ಗಿಲ್ 2030 ರ ವೇಳೆಗೆ ಜಾಗತಿಕ ಮಟ್ಟದಲ್ಲಿ 10 ಮಿಲಿಯನ್ ನಷ್ಟು ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ತರಬೇತಿ ನೀಡಲು ಮತ್ತು ಮಾರುಕಟ್ಟೆಗಳನ್ನು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಡಿಜಿಟಲ್ ಸಾಥಿಯು ಆ ದಿಕ್ಕಿನಲ್ಲಿ ಸಾಗುತ್ತಿದೆ. ಈ ಹೈಪರ್ ಲೋಕಲೈಸ್ಡ್ ಸೇವಾ ಪ್ಲಾಟ್‌ಫಾರ್ಮ್ ಮೂಲಕ ಕಾರ್ಗಿಲ್ ಮುಂದಿನ 5 ವರ್ಷಗಳಲ್ಲಿ 3 ಮಿಲಿಯನ್ ರೈತರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಮಾರುಕಟ್ಟೆ ದರದ ಕುರಿತಾದ ಮಾಹಿತಿಗಳು

ಮಾರುಕಟ್ಟೆ ದರದ ಕುರಿತಾದ ಮಾಹಿತಿಗಳು

ಚರ್ಚಾ ವೇದಿಕೆಗಳು ಮತ್ತು ಮಾರುಕಟ್ಟೆ ದರದ ಕುರಿತಾದ ಮಾಹಿತಿಗಳು, ಹವಾಮಾನ ಮುನ್ಸೂಚನೆಗಳು, ಬಿತ್ತನೆಯಿಂದ ಕೊಯ್ಲಿನವರೆಗೆ ಮತ್ತು ಕೃಷಿಗೆ ಸಂಬಂಧಿತ ಇತರೆ ಮಾಹಿತಿಗಳನ್ನು ಮತ್ತು ಡಿಜಿಟಲ್ ಪರಿಹಾರಗಳನ್ನು ಈ ಡಿಜಿಟಲ್ ಸಾಥಿ ಮೂಲಕ ರೈತರಿಗೆ ಒದಗಿಸಲಾಗುತ್ತದೆ. ಅಕ್ಟೋಬರ್ 2021 ರಿಂದ ಆರಂಭವಾಗಲಿರುವ ಈ ಆ್ಯಪ್ ಕ್ರಾಪ್ ಇನ್‌ಪುಟ್ ಇ-ಕಾಮರ್ಸ್ ಮತ್ತು ಕ್ರಾಪ್‌ಸೆಲ್ ಆಫರ್‌ಗಳ ಬಗ್ಗೆಯೂ ಮಾಹಿತಿ ನೀಡಲಿದ್ದು, ಇದರ ಮೂಲಕ ರೈತರು ಉತ್ತಮ ಗುಣಮಟ್ಟದ ಬೆಳೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ, ಡಿಜಿಟಲ್ ಸಕ್ರಿಯಗೊಳಿಸಿದ ಮಾರುಕಟ್ಟೆ ಮೂಲಕ ರೈತರು ಮತ್ತು ಸಂಗ್ರಹಕಾರರ ನಡುವೆ ಮಾರುಕಟ್ಟೆಯ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.

ಕಾರ್ಗಿಲ್ ಸಂಸ್ಥೆಯ ಅಧ್ಯಕ್ಷ ಸಿಮೋನ್ ಜಾರ್ಜ್

ಕಾರ್ಗಿಲ್ ಸಂಸ್ಥೆಯ ಅಧ್ಯಕ್ಷ ಸಿಮೋನ್ ಜಾರ್ಜ್

ಈ ಆನ್ ಲೈನ್ ಪ್ಲಾಟ್ ಫಾರ್ಮ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಭಾರತದಲ್ಲಿನ ಕಾರ್ಗಿಲ್ ಸಂಸ್ಥೆಯ ಅಧ್ಯಕ್ಷ ಸಿಮೋನ್ ಜಾರ್ಜ್ ಅವರು,''ಸಣ್ಣ ಹಿಡುವಳಿದಾರ ರೈತರ ಆರ್ಥಿಕ ಜೀವನೋಪಾಯವನ್ನು ಹೆಚ್ಚಿಸುವುದು ಹಾಗೂ ಡಿಜಿಟಲ್ ಆರ್ಥಿಕತೆಯ ಆಧುನಿಕ ಯುಗದಲ್ಲಿ ತೊಡಗಿಕೊಳ್ಳುವಂತೆ ಮಾಡಲು ಕಾರ್ಗಿಲ್ ತನ್ನ ಪರಿಣತಿಯೊಂದಿಗೆ ಡಿಜಿಟಲ್ ಸಾಥಿಯನ್ನು ರೂಪಿಸಿದೆ. ಇದು ರೈತರ ಪರಿಸರ ವ್ಯವಸ್ಥೆಯನ್ನು ಸಾಧಿಸುವ ಮತ್ತು ಅವರನ್ನು ಬೆಂಬಲಿಸುವ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು ಲಾಭದಾಯಕತೆಯನ್ನು ಹೆಚ್ಚಿಸಿಕೊಡುವ ಒಂದು ಮಹತ್ತರ ಹೆಜ್ಜೆಯಾಗಿದೆ. ನಾವು ಭಾರತೀಯ ಮತ್ತು ಜಾಗತಿಕ ಗ್ರಾಹಕರಿಗೆ ಸದಾ ಹೊಸತನವನ್ನು ನೀಡುತ್ತಲೇ ಇರುತ್ತೇವೆ ಮತ್ತು ಭಾರತೀಯ ರೈತರು ಮಾರುಕಟ್ಟೆಯೊಂದಿಗೆ ತಮ್ಮನ್ನು ತಾವು ಉತ್ತಮ ರೀತಿಯಲ್ಲಿ ಸೇರಿಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದೇವೆ'' ಎಂದು ಹೇಳಿದರು.

ಡಿಜಿಟಲ್ ಸಾಥಿಯ ಸಂಸ್ಥಾಪಕ ರಮಣ್ ಸಕ್ಸೇನಾ

ಡಿಜಿಟಲ್ ಸಾಥಿಯ ಸಂಸ್ಥಾಪಕ ರಮಣ್ ಸಕ್ಸೇನಾ

ಈ ಬಗ್ಗೆ ಮಾತನಾಡಿದ ಡಿಜಿಟಲ್ ಸಾಥಿಯ ಸಂಸ್ಥಾಪಕ ರಮಣ್ ಸಕ್ಸೇನಾ ಅವರು, ''ಕೃಷಿ ಮೌಲ್ಯ ಜಾಲದಾದ್ಯಂತ ನಾವು ಡಿಜಿಟಲ್ ಪರಿಹಾರವನ್ನು ಕಟ್ಟ ಕಡೆಯ ಮೈಲಿ ಸಂಪರ್ಕಗಳನ್ನು ತಲುಪುವ ಮೂಲಕ ರೈತರಿಗೆ ಮತ್ತು ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗಲು ನಾವು ಬದ್ಧರಾಗಿದ್ದೇವೆ. ಡಿಜಿಟಲ್ ಸಾಥಿ ಈ ಭಾಗದ ರೈತರ ಅಗತ್ಯತೆಗಳೊಂದಿಗೆ ಕೆಲಸ ಮಾಡುವುದುನ್ನು ಮುಂದುವರಿಸುತ್ತದೆ ಮತ್ತು ಕೃಷಿ ಉದ್ಯಮಕ್ಕೆ ಉತ್ತಮವಾದ ಆವಿಷ್ಕಾರಗಳನ್ನು ಹಾಗೂ ಪರಿಹಾರಗಳನ್ನು ತರಲು ವಿವಿಧ ಪಾಲುದಾರರ ಜೊತೆ ಕೈಜೋಡಿಸಿದ್ದೇವೆ'' ಎಂದು ತಿಳಿಸಿದರು.

English summary
In a major boost to empower farmer communities, and enhance farmer economic livelihood, Cargill has launched 'Digital Saathi’ – a mobile-first, artificial-intelligence (AI)- based local online service platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X