ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಪ್ಕೋದಿಂದ ಅಮೆಜಾನ್ ಮೂಲಕ ಅಡಿಕೆ, ಕಾಳುಮೆಣಸು ಮಾರಾಟ

|
Google Oneindia Kannada News

ಮಂಗಳೂರು, ನವೆಂಬರ್ 26 : ಆನ್‌ಲೈನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಲು ಕ್ಯಾಂಪ್ಕೋ ಸಿದ್ಧವಾಗಿದೆ. ಮುಂದಿನ ತಿಂಗಳು ಅಡಿಕೆ ಮತ್ತು ಕಾಳುಮೆಣಸನ್ನು ಮಾರಾಟ ಆರಂಭವಾಗಲಿದೆ.

ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಈ ಕುರಿತು ಗುರುವಾರ ಮಾಹಿತಿ ನೀಡಿದ್ದಾರೆ. "ಸಣ್ಣ ಸಣ್ಣ ಪ್ಯಾಕೆಟ್‌ಗಳ ಮೂಲಕ ಅಡಿಕೆ ಮತ್ತು ಕಾಳು ಮೆಣಸು ಅಮೆಜಾನ್‌ನಲ್ಲಿ ಜನರಿಗೆ ಸಿಗಲಿದೆ" ಎಂದು ಹೇಳಿದರು.

 ಕೃಷಿ ವಿವಿ ಸಮೀಪ ಬಾರ್ ನಿರ್ಮಾಣ; ಪ್ರತಿಭಟನೆಗಿಳಿದ ರೈತ ಸಂಘ ಕೃಷಿ ವಿವಿ ಸಮೀಪ ಬಾರ್ ನಿರ್ಮಾಣ; ಪ್ರತಿಭಟನೆಗಿಳಿದ ರೈತ ಸಂಘ

ಈಗಾಗಲೇ ಕ್ಯಾಂಪ್ಕೋ ಚಾಕಲೇಟ್‌ಗಳು ಅಮೆಜಾನ್‌ನಲ್ಲಿ ಲಭ್ಯವಿದೆ. ಅಡಿಕೆ ಮತ್ತು ಕಾಳುಮೆಣಸನ್ನು ಚಿಲ್ಲರೆ ಮಾರಾಟ ಮಾಡಲು ಕ್ಯಾಂಪ್ಕೋ ತೀರ್ಮಾನಿಸಿದೆ. ಮುಂದಿನ ತಿಂಗಳು ಗ್ರಾಹಕರಿಗೆ ಇದು ಲಭ್ಯವಾಗಲಿದೆ.

ಹಲಸಿನ ಹಣ್ಣಿನ ಚಾಕೋಲೇಟ್: ಕೊಕೊ ನಂತರ ಕ್ಯಾಂಪ್ಕೋ ಹೊಸ ಸಾಹಸಹಲಸಿನ ಹಣ್ಣಿನ ಚಾಕೋಲೇಟ್: ಕೊಕೊ ನಂತರ ಕ್ಯಾಂಪ್ಕೋ ಹೊಸ ಸಾಹಸ

CAMPCO To Sell Arecanut And Pepper Through Aamazon

ಕ್ಯಾಂಪ್ಕೋ ಆನ್ ವೀಲ್; 2021ರ ಜನವರಿಯಿಂದ ಕ್ಯಾಂಪ್ಕೋ ಆನ್ ವೀಲ್ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಿದೆ. ಇದರ ಭಾಗವಾಗಿ ಕೃಷಿಕರ ಮನೆ ಬಾಗಿಲಿಗೆ ಹೋಗಿ ಅಡಿಕೆಯನ್ನು ಖರೀದಿ ಮಾಡಲಾಗುತ್ತದೆ.

ಅಡಿಕೆ ಬೆಳೆಯಲ್ಲಿ ಹಿಂಗಾರ ಒಣಗುವಿಕೆ; ಹತೋಟಿ ಕ್ರಮಗಳು ಅಡಿಕೆ ಬೆಳೆಯಲ್ಲಿ ಹಿಂಗಾರ ಒಣಗುವಿಕೆ; ಹತೋಟಿ ಕ್ರಮಗಳು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರಾಯೋಗಿಕವಾಗಿ ಕ್ಯಾಂಪ್ಕೋ ಆನ್ ವೀಲ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಹಲವಾರು ಕೃಷಿಕರಿಗೆ ಕ್ಯಾಪ್ಕೋಗೆ ಅಡಿಕೆ ಸಾಗಣೆ ಮಾಡುವುದು ಕಷ್ಟವಾಗಿದ್ದು, ಅವರಿಗಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಕೃಷಿಕರು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕ್ಯಾಂಪ್ಕೋ ಆನ್ ವೀಲ್ ಕಾರ್ಯಕ್ರಮದಿಂದ ಕೃಷಿಕರಿಗೆ ಕಾರ್ಮಿಕರಿಗಾಗಿ ಹುಡುಕಾಟ ನಡೆಸುವುದು ತಪ್ಪಲಿದೆ ಎಂದು ನಿರೀಕ್ಷಿಸಲಾಗಿದೆ.

2019-20ನೇ ಸಾಲಿನಲ್ಲಿ ಕ್ಯಾಂಪ್ಕೋ ಸಂಸ್ಥೆ 1848 ಕೋಟಿ ರೂ. ವಹಿವಾಟು ನಡೆಸಿದ್ದು, 32.10 ಕೋಟಿ ಲಾಭಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ 26 ಕೋಟಿ ನಿವ್ವಳ ಲಾಭವನ್ನುಗಳಿಸಿತ್ತು.

ಕೋವಿಡ್ ಕಾಲದಲ್ಲಿಯೂ ಅಡಿಕೆ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಉತ್ತಮ ಲಾಭ ಸಿಗುತ್ತಿದೆ ಎಂದು ಕ್ಯಾಂಪ್ಕೋ ಹೇಳಿದೆ. ಈಗ ಅಡಿಕೆ ಧಾರಣೆ ಕೆಜಿಗೆ 400 ರೂ. ಸನಿಹದಲ್ಲಿದ್ದು, ಗ್ರಾಹಕರಿಗೆ ಸಹ ಸಂತಸವಾಗಿದೆ ಎಂದು ಹೇಳಿದೆ.

English summary
CAMPCO decided to sell areca nut and pepper through Aamazon. People will get this facility in one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X