ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾರಿಫ್ ಬೆಳೆಗಳ ಎಂಎಸ್‌ಪಿ ಹೆಚ್ಚಳಕ್ಕೆ ಸಂಪುಟ ಅನುಮೋದನೆ

|
Google Oneindia Kannada News

ನವದೆಹಲಿ, ಜೂ. 8: ಖಾರಿಫ್‌ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿಈ ನಿರ್ಧಾರ ತೆಗೆದುಕೊಂಡಿದ್ದು, 2022-23 ಸಾಲಿನ ಖಾರಿಫ್‌ ಬೆಳೆಗಳ ಬೆಂಬಲ ಬೆಲೆ ಹೆಚ್ಚಾಗಲಿದೆ.

ಕೇಂದ್ರ ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಖಾರಿಫ್‌ ಬೆಳೆಗಳಿಗೆ ಬೆಂಬಲ ಬೆಲೆ ಶೇಕಡಾ 5ರಿಂದ 20ರಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಸಂಪುಟದ ನಿರ್ಧಾರದ ನಂತರ ಖಾರಿಫ್ ಬೆಳೆ ಅಂದರೆ ಭತ್ತ ಮತ್ತು ಸೋಯಾಬೀನ್‌ನ ಎಂಎಸ್‌ಪಿಯಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಇದೇ ವೇಳೆ ಮೆಕ್ಕೆಜೋಳದ ಎಂಎಸ್‌ಪಿ ಹೆಚ್ಚಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.

ಕೃಷಿ ಪದವೀಧರರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿಕೃಷಿ ಪದವೀಧರರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿ

2022-23 ವರ್ಷದಲ್ಲಿ ಬೇಸಿಗೆ-ಬಿತ್ತನೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಸಾಮಾನ್ಯಕ್ಕಿಂತ ಹೆಚ್ಚಿನ ಹೆಚ್ಚಳವನ್ನು ಸರ್ಕಾರವು ಶೀಘ್ರದಲ್ಲೇ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರಂತೆಯೇ ಈಗ ಖಾರಿಫ್‌ ಬೆಲೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ.

Cabinet approves increase in MSP of Kharif crops

ಖಾರಿಫ್‌ ಬೆಳೆಗಳು ಜೂನ್‌- ಜುಲೈನಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್‌ ಅಂತ್ಯ ಹಾಗೂ ಅಕ್ಟೋಬರ್‌ವರೆಗೆ ಕೊಯ್ಲು ನಡೆಯುತ್ತದೆ. ಇದು ಉಷ್ಣ ವಾತಾವರಣದಲ್ಲಿ ಬಿತ್ತನೆ ಮಾಡಲಾಗುತ್ತದೆ. ಇದಕ್ಕಾಗಿಯೇ ಬೆಳೆಗಳನ್ನು ಉಷ್ಣ ವಲಯದ ಬೆಳೆಗಳೆಂದು ಕರೆಯಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಇದರಲ್ಲಿ ಭತ್ತ, ಮೆಕ್ಕೆ ಜೋಳ, ಸೆಣಬು, ಹೆಸರು ಬೇಳೆ, ಕಡಲೆಕಾಯಿ, ತಂಬಾಕು, ಹತ್ತಿ, ರಾಗಿ, ರಬ್ಬರ್‌, ಉದ್ದೀನ್‌ಬೇಳೆ ಸೋಯಾಬೀನ್‌ ಇವೇ ಮೊದಲಾದವು.

ದಾಳಿಂಬೆ ಹಾಗೂ ಇತರ ತೋಟಗಾರಿಕಾ ಬೆಳೆವಿಮೆ ಮಂಜೂರಾತಿಗೆ ತೀರ್ಮಾನದಾಳಿಂಬೆ ಹಾಗೂ ಇತರ ತೋಟಗಾರಿಕಾ ಬೆಳೆವಿಮೆ ಮಂಜೂರಾತಿಗೆ ತೀರ್ಮಾನ

ಅಂತೆಯೇ ರಾಬಿ ಬೆಳೆಗಳನ್ನು ಅಕ್ಟೋಬರ್‌ನಿಂದ ನವೆಂಬರ್‌ನಲ್ಲಿ ಬಿತ್ತನೆ ಮಾಡಿ ಮಾರ್ಚ್‌ ಏಪ್ರಿಲ್‌ನಲ್ಲಿ ಕೊಯ್ಲು ಮಾಡುತ್ತಾರೆ. ಇದನ್ನು ಸಮಶೀತೋಷ್ಣ ವಲಯದ ಬೆಳೆಗಳು ಎಂದು ಕರೆಯಲಾಗುತ್ತದೆ. ಇವು ಕಡಿಮೆ ತಾಪಮಾನದಲ್ಲಿ ಬೆಳೆಯಬಲ್ಲವು. ಈ ಬೆಳೆಗಳಿಗೆ ಹೆಚ್ಚು ನೀರು ಬೇಕಾಗಿರುತ್ತದೆ. ಅವುಗಳೆಂದರೆ ಗೋಧಿ, ಜೋಳ, ಕಡ್ಲೆಕಾಳು, ಸಾಸಿವೆ, ಮ್ಯಂತ್ಯ, ಜೀರಿಗೆ ಇವೇ ಮೊದಲಾದವು.

ಖಾರಿಫ್‌ ಬೆಳೆಗಳಿಗೆ 2022-23ನೇ ಸಾಲಿನಲ್ಲಿ ಶೇ.5 ರಿಂದ 20ರಷ್ಟು ಎಂಎಸ್ ಪಿ ಅನ್ನು ಹೆಚ್ಚಿಸಲಾಗುತ್ತಿದೆ. ಇದು 2018- 19ನೇ ಸಾಲಿನ ನಂತರದಲ್ಲಿ ಅತಿ ಹೆಚ್ಚಿನ ಏರಿಕೆಯಾಗಿದೆ. ಈ ಮೊದಲಿನ ಮೂರು ವರ್ಷಗಳಲ್ಲಿ ಎಂಎಸ್ ಪಿ ಅನ್ನು ಶೇ. 1 ರಿಂದ 5ರಷ್ಟು ಏರಿಕೆ ಮಾಡಲಾಗಿತ್ತು. ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇ. 50ರಷ್ಟು ಲಾಭ ಗಳಿಸುವ ನೀತಿಯ ಆಧಾರದ ಮೇಲೆ ಈ ಏರಿಕೆಯನ್ನು ಮಾಡಲಾಗುತ್ತಿದೆ. ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳಾದ ಜೋಳ, ಜೋಳ, ರಾಗಿ ಮತ್ತು ಹತ್ತಿಯಂತಹ ಸರಕುಗಳ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಏರಿಕೆಯು ಭತ್ತಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ನೀರು-ಅವಶ್ಯಕವಾಗಿರುವ ಬೆಳೆಗಳ ಉತ್ಪಾದನೆಯನ್ನು ತಗ್ಗಿಸುವ ಮತ್ತು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ.

Cabinet approves increase in MSP of Kharif crops

"ಎಂಎಸ್‌ಪಿ ಆಡಳಿತದ ಒತ್ತಡವು ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು. ಇದರಿಂದಾಗಿ ಆಮದು ಅವಲಂಬನೆ ಕಡಿಮೆಯಾಗುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ" ಎಂದು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ (ದಕ್ಷಿಣ ಏಷ್ಯಾ) ಪಿ. ಕೆ. ಜೋಶಿ ಹೇಳಿದ್ದರು.

(ಒನ್ಇಂಡಿಯಾ ಸುದ್ದಿ)

English summary
The central government has approved raising the price of support for Kharif crops. The decision was taken at the Cabinet meeting on Wednesday, which will increase the price of support for Kharif crops for 2022-23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X