ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ ಡಿಐನಿಂದ 80 ಲಕ್ಷ ಉದ್ಯೋಗ ಗ್ಯಾರಂಟಿ!

By Mahesh
|
Google Oneindia Kannada News

FDI in retails Jobs in India
ಮುಂಬೈ, ಡಿ.5: ಬಹು ಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಸುಮಾರು 80 ಲಕ್ಷ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಭಾರಿ ಬಂಡವಾಳ ಹೂಡಿಕೆ ಅಗತ್ಯವಿದೆ. ಇದರಿಂದ ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು.

ವಿದೇಶಿ ನೇರ ಬಂಡವಾಳ ಹೂಡಿಕೆ ಇದಿಲ್ಲದಿದ್ದರೆ ನಾಳೆಯಾದರೂ ಒಪ್ಪಿಕೊಳ್ಳಬೇಕಾಗುತ್ತದೆ. ಯುಪಿಎ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಗ್ಲೋಬಲ್ ಹಂಟ್ ಸಂಸ್ಥೆ ನಿರ್ದೇಶಕ ಸುನೀಲ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಜೀವ ಉಳಿಸುವ ಔಷಧಿ ಉದ್ಯಮಕ್ಕೆ ಬಂಡವಾಳ ಹೂಡಿಕೆ ಹೆಚ್ಚಾದರೆ, ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ. ಕೆಲಸಗಳು ಹೆಚ್ಚು ಕ್ರಿಯಾಶೀಲವಾಗಿ ನಡೆಯುತ್ತದೆ.

ಅಂದಾಜಿನ ಪ್ರಕಾರ ಸುಮಾರು 60 ರಿಂದ 80 ಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಸುನೀಲ್ ಹೇಳಿದ್ದಾರೆ.

ವಾಲ್ ಮಾರ್ಟ್ ಸಂಸ್ಥೆಯೊಂದೆ ಸುಮಾರು 1.8 ದಶಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇದೇ ರೀತಿ ಇತರೆ ವಿದೇಶಿ ಸಂಸ್ಥೆಗಳು ಬಂದರೆ ನಮ್ಮಲ್ಲಿ ಹೆಚ್ಚಿನ ವೃತ್ತಿಪರತೆ, ಕಾರ್ಯಕ್ಷಮತೆ ಕಾಣಬಹುದು ಎಂದು ಟೀಮ್ ಲೀಸ್ ಸರ್ವೀಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

English summary
With the allow of Foreign Direct Investment in Multi brand retail market India;s economic growth will be doubled. Over 80 lakhs jobs opportunity will be created says Global Hunt ceo Sunil Goel. Walmart alone is creating 1.8 million jobs in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X