ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕ್ಷೇತ್ರ, ರೈತ ಕಲ್ಯಾಣಕ್ಕಾಗಿ ಬಜೆಟ್ ಘೋಷಿಸಿದ 9 ಕ್ರಮಗಳು

|
Google Oneindia Kannada News

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ಆದರೆ, ರೈತ ಕಲ್ಯಾಣ, ಕೃಷಿ ಮತ್ತು ಸಂಬಂಧಿತ ವಲಯಗಳು ಹಾಗು ಮಹತ್ವಾಕಾಂಕ್ಷೆಯ ಗ್ರಾಮೀಣ ಭಾರತದ ಅಭಿವೃದ್ಧಿಗೆ ಒಂಬತ್ತು ಪೂರಕ ಕ್ರಮಗಳನ್ನು ಘೋಷಿಸಿದರು.

ಮಹತ್ವಾಕಾಂಕ್ಷೆಯ ಭಾರತದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಕೃಷಿ ಕ್ಷೇತ್ರಕ್ಕೆ 9 ಕ್ರಮಗಳನ್ನು ಘೋಷಿಸಲಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದರು. ಆದರೆ, ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ವಿವಾದವನ್ನು ಪರಿಹರಿಸುವ ಯಾವುದೇ ಪ್ರಸ್ತಾಪವನ್ನು ಬಜೆಟ್ ನಲ್ಲಿ ಘೋಷಿಸಿಲ್ಲ. 2021-22ನೇ ಹಣಕಾಸು ವರ್ಷದಲ್ಲಿ 16.5 ಲಕ್ಷ ಕೋಟಿ ಕೃಷಿ ಸಾಲದ ಗುರಿಯನ್ನು ಹೆಚ್ಚಿಸಲಾಗಿದೆ. ಜತೆಗೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖರೀದಿ ಖಾತರಿ ಮುಂದುವರಿಯಲಿದೆ ಎಂಬ ಭರವಸೆ ನೀಡಲಾಗಿದೆ. ಜೊತೆಗೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಿರ್ದಿಷ್ಟ ಆಮದು ಸರಕುಗಳ ಮೇಲೆ ಹೊಸ ಸೆಸ್‌ಗಳನ್ನು ವಿಧಿಸಲಾಗಿದೆ.

ಪಿಎಂ ಸ್ವಾಮಿತ್ವಾ ಯೋಜನೆಯ ಲಾಭಗಳು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?ಪಿಎಂ ಸ್ವಾಮಿತ್ವಾ ಯೋಜನೆಯ ಲಾಭಗಳು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?

ಸ್ವಾಮಿತ್ವ ಯೋಜನೆ ವಿಸ್ತರಣೆ

ಸ್ವಾಮಿತ್ವ ಯೋಜನೆ ವಿಸ್ತರಣೆ

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾಮಿತ್ವ ಯೋಜನೆಯನ್ನು ವಿಸ್ತರಿಸುವ ಕುರಿತು ಪ್ರಸ್ತಾಪಿಸಿದರು. ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಳ್ಳಿಗಳಲ್ಲಿ ಆಸ್ತಿ ಮಾಲೀಕತ್ವದಲ್ಲಿ ಪಾರದರ್ಶಕತೆ ತರಲು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದ್ದರು. ಯೋಜನೆಯಡಿ, ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಹಕ್ಕುಗಳ ದಾಖಲೆಯನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ, 1,241 ಹಳ್ಳಿಗಳಲ್ಲಿ ಸುಮಾರು 1.80 ಲಕ್ಷ ಆಸ್ತಿ ಮಾಲೀಕರಿಗೆ ಕಾರ್ಡ್‌ಗಳನ್ನು ನೀಡಲಾಗಿದೆ.

<br />ಬಜೆಟ್ 2021: ಲಾಭ ಸಿಕ್ಕಿದ್ದು ಯಾರಿಗೆ? ಕಳೆದುಕೊಂಡವರು ಯಾರು?
ಬಜೆಟ್ 2021: ಲಾಭ ಸಿಕ್ಕಿದ್ದು ಯಾರಿಗೆ? ಕಳೆದುಕೊಂಡವರು ಯಾರು?

ಕೃಷಿ ಸಾಲದ ಗುರಿಯನ್ನು 16.5 ಲಕ್ಷ ರೂ.ಗೆ ಹೆಚ್ಚಳ

ಕೃಷಿ ಸಾಲದ ಗುರಿಯನ್ನು 16.5 ಲಕ್ಷ ರೂ.ಗೆ ಹೆಚ್ಚಳ

ಹಣಕಾಸು ವರ್ಷ 2022 ರಲ್ಲಿ ಕೃಷಿ ಸಾಲದ ಗುರಿಯನ್ನು 16.5 ಲಕ್ಷ ರೂ.ಗೆ ಹೆಚ್ಚಿಸಲಾಗುವುದು, ರೈತರಿಗೆ ಸಮರ್ಪಕ ರೀತಿಯಲ್ಲಿ ಸಾಲ ನೀಡಲು ಹಣಕಾಸು ಸಚಿವರು ಕೃಷಿ ಸಾಲ ಗುರಿಯನ್ನು ಹಣಕಾಸು ವರ್ಷ 22 ರಲ್ಲಿ 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಗೆ ಹೆಚ್ಚಿನ ಸಾಲದ ಹರಿವನ್ನು ಖಾತ್ರಿಪಡಿಸುವತ್ತ ಸರ್ಕಾರ ಗಮನ ಹರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ ಏರಿಕೆ

ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ ಏರಿಕೆ

ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಗೆ ಹಂಚಿಕೆಯನ್ನು ಶೇ.33ಕ್ಕೆ ಏರಿಕೆ ಮಾಡಲಾಗಿದೆ. ರೂ 30,000 ಕೋಟಿಯಿಂದ ರೂ 40,000 ಕೋಟಿಗೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದರು.

ಹನಿ ನೀರಾವರಿ ನಿಧಿ ದುಪ್ಪಟ್ಟು: ನಬಾರ್ಡ್ ಅಡಿಯಲ್ಲಿ ರೂ.5,000 ಕೋಟಿಗಳ ಮೂಲ ಬಂಡವಾಳದೊಂದಿಗೆ ಪ್ರಾರಂಭವಾದ ಮೈಕ್ರೋ ನೀರಾವರಿ ನಿಧಿಯನ್ನು ಇನ್ನೂ ರೂ. 5,000 ಕೋಟಿ ಸೇರ್ಪಡೆಗೊಳಿಸುವ ಮೂಲಕ ದ್ವಿಗುಣಗೊಳಿಸುವ ಕುರಿತು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?Budget 2021: ಯಾವ ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್?

ಆಪರೇಶನ್ ಗ್ರೀನ್ ಯೋಜನೆ

ಆಪರೇಶನ್ ಗ್ರೀನ್ ಯೋಜನೆ

ಆಪರೇಶನ್ ಗ್ರೀನ್ ಯೋಜನೆ : ಇನ್ನೂ 22 ಹೆಚ್ಚಿನ ಹಾಳಾಗದಂತಹ ಪದಾರ್ಥಗಳ ಸೇರ್ಪಡೆಗೆ ಉತ್ತೇಜನ. ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳಲ್ಲಿ ಮೌಲ್ಯವರ್ಧನೆ ಮತ್ತು ಅವುಗಳ ರಫ್ತು ಹೆಚ್ಚಿಸಲು, ಹಾಳಾಗದಂತಹ 22 ಉತ್ಪನ್ನಗಳನ್ನು ಸೇರಿಸಿ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ (ಟಾಪ್ಸ್) ಗೆ ಪ್ರಸ್ತುತ ಅನ್ವಯವಾಗುವ 'ಆಪರೇಷನ್ ಗ್ರೀನ್ ಸ್ಕೀಮ್' ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ಇ ನಾಮ್ ನಲ್ಲಿ1000 ಹೆಚ್ಚುವರಿ ಮಂಡಿಗಳ ಸೇರ್ಪಡೆ

ಇ ನಾಮ್ ನಲ್ಲಿ1000 ಹೆಚ್ಚುವರಿ ಮಂಡಿಗಳ ಸೇರ್ಪಡೆ

ಸುಮಾರು 1.68 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ ಮತ್ತು ಇ-ನಾಮ್‌ಗಳ ಮೂಲಕ ರೂ. 1.14 ಲಕ್ಷ ಕೋಟಿಗಳ ಮೌಲ್ಯದ ವ್ಯಾಪಾರವನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇ- ನಾಮ್‌ ನಿಂದಾಗಿ ಕೃಷಿ ಮಾರುಕಟ್ಟೆಯಲ್ಲಿ ಸಾಧಿಸಲಾದ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು, ಇಂಥ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ತರಲು ಇ- ನಾಮ್‌ ನಲ್ಲಿ ಇನ್ನೂ 1,000 ಮಂಡಿಗಳ ಸೇರ್ಪಡೆಗೆ ಹಣಕಾಸು ಸಚಿವೆ ಪ್ರಸ್ತಾಪಿಸಿದರು.

ಇದಲ್ಲದೆ, ಕೃಷಿ ಮೂಲಭೂತ ಸೌಕರ್ಯ ನಿಧಿ ಪಡೆಯಲು ಎಪಿಎಂಸಿ ಗಳಿಗೆ ಅವಕಾಶ, ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಎಪಿಎಂಸಿಗಳಿಗೆ ಕೃಷಿ ಮೂಲಸೌಕರ್ಯ ನಿಧಿ ಲಭ್ಯವಾಗುವಂತೆ ನಿರ್ಮಲಾ ಪ್ರಸ್ತಾಪಿಸಿದರು.

ಬಂದರುಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ

ಬಂದರುಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ

5 ಪ್ರಮುಖ ಮೀನುಗಾರಿಕಾ ಬಂದರುಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾಪ

ಆಧುನಿಕ ಮೀನುಗಾರಿಕೆ ಬಂದರುಗಳು ಮತ್ತು ಸಂಗ್ರಹಿಸಿದ ಮೀನು ಇಳಿಸುವ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಕುರಿತು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪ್ಯಾರಾದೀಪ್, ಮತ್ತು ಪೆತುಆಘಾಟ್ ಎಂಬ 5 ಪ್ರಮುಖ ಮೀನುಗಾರಿಕಾ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಸಚಿವೆ ಹೇಳಿದರು. ನದಿಗಳು ಮತ್ತು ಜಲಮಾರ್ಗಗಳ ತೀರದಲ್ಲಿ ಒಳನಾಡು ಮೀನುಗಾರಿಕೆ ಬಂದರುಗಳು ಮತ್ತು ಮೀನು- ಸಂಗ್ರಹಿಸಿದ ಮೀನು ಇಳಿಸುವ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಕುರಿತು ಕೂಡಾ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ತಮಿಳುನಾಡಿನಲ್ಲಿ ಬಹುಉದ್ದೇಶಿತ ಸೀವೀಡ್ ಪಾರ್ಕ್

ತಮಿಳುನಾಡಿನಲ್ಲಿ ಬಹುಉದ್ದೇಶಿತ ಸೀವೀಡ್ ಪಾರ್ಕ್

ಸೀವೀಡ್ ಕೃಷಿಯಲ್ಲಿನ ಸಾಮರ್ಥ್ಯವನ್ನು ಗುರುತಿಸುವುದರ ಮೂಲಕ, ಇದು ಕರಾವಳಿ ಸಮುದಾಯಗಳ ಜೀವನವನ್ನೇ ಪರಿವರ್ತಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಉದಯೋನ್ಮುಖ ವಲಯವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು - ಇದು ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಕಡಲಕಳೆ ಕೃಷಿಯನ್ನು ಉತ್ತೇಜಿಸಲು, ತಮಿಳುನಾಡಿನಲ್ಲಿ ವಿವಿಧೋದ್ದೇಶ ಕಡಲಕಳೆ ಉದ್ಯಾನವನವನ್ನು ಸ್ಥಾಪಿಸಲು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆ

ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆ

ಹಿಂದಿನ ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ರೈತರಿಂದ ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳ ಸಂಗ್ರಹವನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಎಲ್ಲಾ ಸರಕುಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಬೆಲೆಯನ್ನು ಖಚಿತಪಡಿಸಲು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿರ್ವಹಣೆ ಸಮುಗ್ರ ಬದಲಾವಣೆಗೆ ಒಳಗಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಹಿಂದಿನ ವರ್ಷಗಳಲ್ಲಿ ರೈತರಿಗೆ ಸಂಗ್ರಹಣೆ ಮತ್ತು ಪಾವತಿಸಿದ ಮೊತ್ತದ ವಿವರಗಳನ್ನು ಒದಗಿಸುವುದು, 2013-2014ರಲ್ಲಿ ಗೋಧಿಯ ಖರೀದಿಯಲ್ಲಿ, ರೈತರಿಗೆ ಪಾವತಿಸಿದ ಒಟ್ಟು ಮೊತ್ತ ರೂ 33,874 ಕೋಟಿ. 2019-2020ರಲ್ಲಿ ರೂ 62,802 ಕೋಟಿ., ಮತ್ತು ಇನ್ನೂ ಹೆಚ್ಚು, 2020-2021ರಲ್ಲಿ ರೈತರಿಗೆ ಪಾವತಿಸಿದ ಈ ಮೊತ್ತವು ರೂ 75,060 ಕೋಟಿ. 2019-20ರ 35.57 ಲಕ್ಷಕ್ಕೆ ಹೋಲಿಸಿದರೆ 2020-21ರಲ್ಲಿ ಲಾಭ ಪಡೆದ ಗೋಧಿ ಬೆಳೆಯುವ ರೈತರ ಸಂಖ್ಯೆ 43.36 ಲಕ್ಷಕ್ಕೆ ಏರಿದೆ.

ಭತ್ತದ ಬೆಳೆಗೆ ಪಾವತಿಸಿದ ಮೊತ್ತ ರೂ 63,928 ಕೋಟಿ

ಭತ್ತದ ಬೆಳೆಗೆ ಪಾವತಿಸಿದ ಮೊತ್ತ ರೂ 63,928 ಕೋಟಿ

ಭತ್ತಕ್ಕೆ 2013-14 ರಲ್ಲಿ ಪಾವತಿಸಿದ ಮೊತ್ತ ರೂ 63,928 ಕೋಟಿ. 2019-2020 ರಲ್ಲಿ ರೂ 1,41,930 ಕೋಟಿ ಮತ್ತು ಅದಕ್ಕೂ ಹೆಚ್ಚು 2020-2021 ರಲ್ಲಿ ಇದು ರೂ 172,752 ಕೋಟಿಗೆ ವೃದ್ಧಿಸಲಿದೆ ಎಂದು ಅಂದಾಜಿಸಲಾಗಿದೆ. ರೈತರ ಲಾಭ 2019-20 ರಲ್ಲಿ 1.24 ಕೋಟಿಯಿಂದ 2020-21 ರಲ್ಲಿ 1.54 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ , ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ, 2013-14 ರಿಂದ 40 ಪಟ್ಟು ಹೆಚ್ಚಾಗಿದ್ದು, 2013-2014 ರಲ್ಲಿ ಪಾವತಿಸಿದ ಮೊತ್ತ ರೂ 236 ಕೋಟಿ. 2019-20 ರಲ್ಲಿ ಇದು ರೂ 8,285 ಕೋಟಿ. ಈಗ, 2020-2021 ರಲ್ಲಿ ಇದು ರೂ 10,530 ಕೋಟಿಗಳಾಗಿದೆ. ಹತ್ತಿ ರೈತರಿಗೆ ನೀಡಿದ ರಶೀದಿಗಳಲ್ಲಿ 2013-14 ರಲ್ಲಿ ರೂ 90 ಕೋಟಿಗಳಿಂದ ರೂ 25,974 ಕೋಟಿ ಏರಿಕೆ ಕಂಡಿದೆ (27 ಜನವರಿ 2021 ರಂತೆ)(ವಿತ್ತ ಸಚಿವಾಲಯದ ಮಾಹಿತಿ)

ಕೇಂದ್ರ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಬಜೆಟ್ ಘೋಷಣೆಯೇನು?ಕೇಂದ್ರ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಬಜೆಟ್ ಘೋಷಣೆಯೇನು?

English summary
Finance Minister Nirmala Sitharaman in her Budget 2021 proposes 9 measures for Agriculture and Allied Sectors, Farmers’ Welfare and Rural India as part of inclusive development for aspirational Indi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X