ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಬಜೆಟ್ ಘೋಷಣೆಯೇನು?

|
Google Oneindia Kannada News

ನವದೆಹಲಿ, ಫೆಬ್ರುವರಿ 01: "ರೈತರ ಕಲ್ಯಾಣ, ಉನ್ನತಿಗಾಗಿ ಸರ್ಕಾರ ಬದ್ಧವಾಗಿದೆ" ಎಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಕುರಿತು ಕೆಲವು ಘೋಷಣೆಗಳನ್ನು ಮಾಡಿದ್ದಾರೆ.

ಹಲವು ಕಾರಣಗಳಿಂದಾಗಿ ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಗುವ ಅನುದಾನದ ಬಗ್ಗೆ ಹೆಚ್ಚೇ ಕುತೂಹಲವಿತ್ತು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಎರಡೂವರೆ ತಿಂಗಳಿನಿಂದಲೂ ರೈತರು ಹೋರಾಟ ಕೈಗೊಂಡಿದ್ದು, ಈ ಬಾರಿ ಕೃಷಿ ಕ್ಷೇತ್ರಕ್ಕೆ ಹಾಗೂ ರೈತರಿಗೆ ಕೇಂದ್ರ ಸರ್ಕಾರ ಏನು ಅನುದಾನ ಘೋಷಿಸಬಹುದು ಎಂಬ ಕುತೂಹಲವಿತ್ತು.

Union Budget 2021; ಸ್ವಚ್ಛ ಭಾರತ ಅಭಿಯಾನಕ್ಕೆ 1,41,000 ಕೋಟಿ ರೂUnion Budget 2021; ಸ್ವಚ್ಛ ಭಾರತ ಅಭಿಯಾನಕ್ಕೆ 1,41,000 ಕೋಟಿ ರೂ

ಕನಿಷ್ಠ ಬೆಂಬಲ ಬೆಲೆ, ಎಪಿಎಂಸಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ನಿರೀಕ್ಷೆ ವ್ಯಕ್ತಗೊಂಡಿದ್ದು, ಇದೀಗ ಬಜೆಟ್ ನಲ್ಲಿ ಹಣಕಾಸು ಸಚಿವೆ ಕೃಷಿ ಕ್ಷೇತ್ರಕ್ಕೆ ಕೆಲವು ಘೋಷಣೆಗಳನ್ನು ಮಾಡಿದ್ದಾರೆ.

2022ರ ಆರ್ಥಿಕ ವರ್ಷದ ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋಟಿ ರೂ. ಹೆಚ್ಚುವರಿ ನೀಡುವ ಗುರಿ ಇದೆ ಎಂದು ಹೇಳಿದ್ದಾರೆ.

Budget 2021 Allocations For Agriculture Sector

ಎಲ್ಲಾ ಸಾಮಗ್ರಿಗಳ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಹೆಚ್ಚು ಬೆಂಬಲ ಬೆಲೆ ಸಿಗುವಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸಲಾಗಿದೆ. ಖರೀದಿ ಪ್ರಕ್ರಿಯೆ ನಿಲ್ಲಿಸಿಲ್ಲ. ಕನಿಷ್ಠ ಬೆಂಬಲ ಬೆಲೆ ಫಲಾನುಭವಿ ರೈತರ ಸಂಖ್ಯೆ 2019-20ನೇ ಸಾಲಿನಲ್ಲಿ 1.24 ಕೋಟಿ ಇದ್ದದ್ದು 2020-21ನೇ ಸಾಲಿನಲ್ಲಿ 1.54 ಕೋಟಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

2020-21ನೇ ಸಾಲಿನಲ್ಲಿ ಗೋಧಿ ಖರೀದಿಗಾಗಿ ರೈತರಿಗೆ 75,060 ಕೋಟಿ ರೂ ಘೋಷಣೆ ಮಾಡಲಾಗಿತ್ತು. 2020- 21ನೇ ಸಾಲಿನಲ್ಲಿ ಧಾನ್ಯಗಳಿಗೆ 10,500 ಕೋಟಿ ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಲಾಗಿತ್ತು. 2014ನೇ ಸಾಲಿಗೆ ಹೋಲಿಸಿದರೆ ಈ ದರ 14 ಪಟ್ಟು ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.

ಗ್ರಾಮೀಣ ಮೂಲಸೌಲಭ್ಯಕ್ಕೆ ಆದ್ಯತೆ ನೀಡಿದ್ದು, ಅನುದಾನವನ್ನು 40,000 ಕೋಟಿ ರೂಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನೀರಾವರಿ ಯೋಜನೆಗೂ ಹೆಚ್ಚುವರಿ ಹಣ ಮೀಸಲಿರಿಸಲಾಗುವುದು. ಸಣ್ಣ ನೀರಾವರಿ ಕ್ಷೇತ್ರದಲ್ಲಿ ಅನುದಾನವು 10,000 ಕೋಟಿ ರೂಪಾಯಿಗೆ ದ್ವಿಗುಣಗೊಂಡಿದೆ ಎಂದಿದ್ದಾರೆ.

2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್ 2020ರಲ್ಲಿ ಕೊರೊನಾ ಸೋಲಿಸಲು 27.1 ಲಕ್ಷ ಕೋಟಿ ಮಿನಿ ಬಜೆಟ್

ಸಾವಿರ ಮಂಡಿಗಳ ಸಂಯೋಜನೆ: ಈ ಬಾರಿ ಸಾವಿರ ಹೆಚ್ಚುವರಿ ಮಂಡಿಗಳನ್ನು (ಎಪಿಎಂಸಿ) ಸಂಯೋಜಿಸಲಾಗುವುದು. ಐದು ಬೃಹತ್ ಮೀನುಗಾರಿಕಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

English summary
Finance Minister says the government is committed to the welfare of farmers. The MSP regime has changed and a portion of the agricultural fund will be allocated to APMC for furthering their infrastructure,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X