ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ದಿನ ಭರ್ಜರಿ ಏರಿಳಿತ ಕಾಣಬಹುದಾದ ಷೇರುಗಳು!

By Mahesh
|
Google Oneindia Kannada News

ಬೆಂಗಳೂರು, ಜನವರಿ 30: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 01ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಗುರುವಾರ (ಫೆಬ್ರವರಿ 01)ದಂದು ಯಾವೆಲ್ಲ ಕ್ಷೇತ್ರಗಳ ಷೇರುಗಳು ಏರಿಳಿತ ಕಾಣಬಹುದು ಎಂಬುದರ ಬಗ್ಗೆ ಇಲ್ಲಿದೆ ವರದಿ.

ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಆರ್ಥಿಕ ಸಮೀಕ್ಷೆಯಲ್ಲಿ ಕಳೆದ 12 ತಿಂಗಳಿನಲ್ಲಿ ಸರ್ಕಾರ ಕೈಗೊಂಡ ಯೋಜನೆಗಳು, ಆರ್ಥಿಕ ಸುಧಾರಣೆ ಹಾಗೂ ಪ್ರಗತಿಯ ಬಗ್ಗೆ ವರದಿ ಮಂಡಿಸಲಾಗಿದೆ.

ಜೇಟ್ಲಿ ಮಂಡಿಸಿದ ಸಮೀಕ್ಷೆಯಲ್ಲಿ ಕೃಷಿ ಕ್ಷೇತ್ರಕ್ಕೆ ಆಶಾದಾಯಕ ನಿರೀಕ್ಷೆಗಳಿಲ್ಲ. ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.

ವಿತ್ತೀಯ ಕೊರತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 3.5ರಷ್ಟು ಇಳೀಕೆಯಾಗುವ ಸಾಧ್ಯತೆಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಶೇ 3.3 ಹಾಗೂ ಶೇ 3.4ಕ್ಕೆ ಕುಸಿಯಲಿದೆ. ಬಜೆಟ್ ದಿನದಂದು ಯಾವ ಯಾವ ಕ್ಷೇತ್ರಗಳ ಯಾವ ಯಾವ ಸಂಸ್ಥೆಯ ಷೇರುಗಳು ಸದ್ದು ಮಾಡಬಹುದು ಎಂಬುದನ್ನು ಮುಂದೆ ತಿಳಿಯಿರಿ...

ಬ್ಯಾಂಕಿಂಗ್ ವಲಯ

ಬ್ಯಾಂಕಿಂಗ್ ವಲಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಪಿಎನ್ ಬಿ ಹೌಸಿಂಗ್, ಕ್ಯಾನ್ ಫಿನ್ ಹೋಮ್ಸ್, ಜಿಐಸಿ ಹೌಸಿಂಗ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಷೇರುಗಳ ಮೇಲೆ ಗಮನವಿರಲಿ ಎಂದು ಷೇರ್ ಖಾನ್ ಸಂಸ್ಥೆ ಹೇಳಿದೆ.

ವಸತಿ ಯೋಜನೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇರುವುದರಿಂದ ಹೌಸಿಂಗ್ ವಲಯಕ್ಕೆ ಸಂಬಂಧಿಸಿದ ಸಂಸ್ಥೆಗಳ ಷೇರುಗಳು ಹೆಚ್ಚಿನ ಸದ್ದು ಮಾಡುವ ಸಾಧ್ಯತೆಯಿದೆ.
ಕೃಷಿ ವಲಯ

ಕೃಷಿ ವಲಯ

ಧನುಕಾ ಆಗ್ರಿಟೆಕ್, ಪಿಐ ಇಂಡಸ್ಟ್ರೀಸ್, ಕಾವೇರಿ ಸೀಡ್ಸ್, ಚಂಬಲ್ ಫರ್ಟಿಲೈಜರ್ಸ್, ಕೊರಮಂಡಲ್ ಇಂಟರ್ ನ್ಯಾಷನಲ್ ಷೇರುಗಳು ಹೆಚ್ಚು ಏರಳಿತ ಕಾಣಬಹುದಾಗಿದೆ.

ರಸಗೊಬ್ಬರ, ಅಡುಗೆ ಅನಿಲಕ್ಕೆ ಸಂಬಂಧಿಸಿದ ಷೇರುಗಳನ್ನು ಹೆಚ್ಚಾಗಿ ಗಮನಿಸಬೇಕಿದೆ.

ಆಟೋಮೊಬೈಲ್

ಆಟೋಮೊಬೈಲ್

ಹೀರೋ ಮೋಟೋ ಕಾರ್ಪ್, ಎಂ ಅಂಡ್ ಎಂ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಐಷರ್ ಮೋಟರ್ಸ್,ಟಾಟಾ ಮೋಟರ್ಸ್

ಅಶೋಕ್ ಲೇಲ್ಯಾಂಡ್, ಟಾಟಾ ಮೋಟರ್ಸ್, ಐಷರ್ ಮೋಟರ್ಸ್ ಷೇರುಗಳನ್ನು ಗಮನಿಸಿ ಎಂದು ಷೇರ್ ಖಾನ್ ಸಂಸ್ಥೆ ಹೇಳಿದೆ.

ಸರಕು ಸಾಗಣೆ ಹಾಗೂ ರಕ್ಷಣಾ ಕ್ಷೇತ್ರ

ಸರಕು ಸಾಗಣೆ ಹಾಗೂ ರಕ್ಷಣಾ ಕ್ಷೇತ್ರ

ಎಲ್ ಅಂಡ್ ಟಿ, ಕಲ್ಪತರು ಪವರ್ ಹಾಗೂ ಕೆಇಸಿ ಇಂಟರ್ ನ್ಯಾಷನಲ್ ಷೇರುಗಳನ್ನು ಗಮನಿಸಿ.

English summary
Moneycontrol has collated a list of 20 stocks across 4 sectors which are likely to remain in limelight around Budget 2018. Here are the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X