ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಶದತ್ತ ಭಾಜಪ: ರೈತ ಮತಗಳ ಫಸಲು ಕೊಯಿಲಿಗಾಗಿ ಕಾದಿರುವ ಇತರೆ ಪಕ್ಷಗಳು

|
Google Oneindia Kannada News

ವಿನಾಶಕಾಲೇ ವಿಪರೀತ ಬುದ್ದಿ ಎಂಬ ಮಾತಿದೆ. ಭಾಜಪ ಸರ್ಕಾರಕ್ಕೆ ಈ ಮಾತು ಹೇಳಿಮಾಡಿಸಿದಂತಿದೆ. ಇವರು ಅಧಿಕಾರಕ್ಕೆ ಬಂದಾಗಿನಿಂದ "ವಿಪರೀತ ಬುದ್ಧಿ" ಯನ್ನು ಹೇಗೆ ಪ್ರದರ್ಶಿಸಿದ್ದಾರೆ ಎಂಬುದನ್ನು ನೋಡೋಣ.

ಮೊದಲ ಭಾರಿ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ನಡೆಸಿದ ಪ್ರಚಾರಾಂದೋಲನದಲ್ಲಿ ಅನೇಕ ಭರಸೆಗಳನ್ನು ನೀಡಿದ್ದರು. ಅದರಲ್ಲಿ ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ C2+50% ನೀಡುವುದಾಗಿ ಕೂಡಾ ಆಶ್ವಾಸನೆ ನೀಡಿದ್ದರು. Infact ಅದು ಭಾಜಪ ಪ್ರಣಾಳಿಕೆಯ ಭಾಗವಾಗಿತ್ತು.

 ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ

ರೈತ ನಾಯಕರೇ ಎಚ್ಚರದಿಂದಿರಿ

ರೈತ ನಾಯಕರೇ ಎಚ್ಚರದಿಂದಿರಿ

C2+50% ಅಂದರೆ ಬೆಳೆಯ ಸಮಗ್ರ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ ಐವತ್ತರಷ್ಟು ಲಾಭ ನೀಡುವುದು ಎಂದರ್ಥ. ರೈತರು ಆ ಮಾತನ್ನ ನಂಬಿದರು. ಮತ ಕೊಟ್ಟರು ಭಾಜಪ ಅಧಿಕಾರಕ್ಕೆ ಬಂತು. ಬಂದಾದ ಮೇಲೆ ಆ ಬಗ್ಗೆ ಮೋದಿ ಸರ್ಕಾರ ಚಕಾರವೇ ಎತ್ತಲಿಲ್ಲ. ಜುಲೈ 2018 ರಲ್ಲಿ ಕ್ಯಾಬಿನೆಟ್ ನಲ್ಲಿ MSP ಕುರಿತಾಗೆ ಒಂದಿಷ್ಟು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಸ್ವಾಮಿನಾಥನ್ ವರದಿಯಂತೆ ರೈತರಿಗೆ MSP ಕೊಟ್ಟಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡರು. ಆ ಬಗ್ಗೆ ಖುದ್ದು ಸ್ವಾಮಿನಾಥನ್ ಅವರನ್ನೇ ಸಂಪರ್ಕಿಸಿ ಸರ್ಕಾರದ ಸ್ಟೇಟ್ಮೆಂಟ್ ಕುರಿತಾಗಿ ಅವರ ಪ್ರತಿಕ್ರಿಯೆ ಕೇಳಿದ್ದೆ. ಆಗವರು ನೀಡಿದ ಅಂಕಿ ಅಂಶಗಳು ಹೀಗಿವೆ.(Extract of the press note released by M S Swaminathan in July 2018)


The MSP announced is higher in absolute terms but below the recommended level. For example, the MSP of common paddy has been hiked from Rs 1550 to Rs 1750 per quintal. Taking the C2 cost of last year (2017-18) and assuming a 3.6 per cent rise in input costs based on the input cost index used by CACP, the estimated C2 cost for this year (2018-19) is Rs 1524. So, the new MSP is C2+15%, not C2+50%. In the case of ragi, the new MSP is C2+20%. Similarly, for moong, the MSP has been raised from Rs 5575 to Rs 6975, so it is now C2+19%.

ಮತ್ತೊಂದು ಭಾರಿ ಬಹುಮತ ಪಡೆದು ಅಧಿಕಾರಕ್ಕೆ

ಮತ್ತೊಂದು ಭಾರಿ ಬಹುಮತ ಪಡೆದು ಅಧಿಕಾರಕ್ಕೆ

ಈಗ ವಿಷಯಕ್ಕೆ ಬರೋಣ. ಮೊದಲಿಗೆ ಭಾಜಪ ಸರ್ಕಾರ ತನ್ನ ಪ್ರಚಾರಾಂದೋಲನದಲ್ಲಿ ಆಶ್ವಾಸನೆ ನೀಡಿದ ಹಾಗೆ C2+50% ಕೊಡಲಿಲ್ಲ. ಮಾತಿಗೆ ತಪ್ಪಿ ರೈತರಿಗೆ ಮೋಸ ಮಾಡಿತು. ಮುಂದುವರೆದು C2+50% ಕೊಟ್ಟಿದ್ದೇವೆ ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಂಡಿತು.

ಜನಪದರದ್ದೊಂದು ಮಾತಿದೆ "ಮೋಸ ನಾಸ್ನ-ಸುಳ್ಳು ದರಿದ್ರ" ಅಂತಾ ನಾಸ್ನ ಅಂದ್ರೆ ನಾಶ ಎಂದರ್ಥ. ಆದರೆ ಭಾಜಪ ಎಷ್ಟೇ ಮೋಸದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೂ ಸುಳ್ಳುಗಳನ್ನು ಬಿತ್ತರಿಸಿದರೂ ಅದು ನಾಶವೂ ಆಗುತ್ತಿಲ್ಲ, ಮತ್ತದಕ್ಕೆ ದರಿದ್ರವೂ ಅಂಟಿಕೊಳ್ಳುತ್ತಿಲ್ಲ. ಮತ್ತೊಂದು ಭಾರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು.

ಸರ್ಕಾರ ಕೃಷಿ ಕಾನೂನುಗಳನ್ನು ರೂಪಿಸುವಂತಿಲ್ಲ

ಸರ್ಕಾರ ಕೃಷಿ ಕಾನೂನುಗಳನ್ನು ರೂಪಿಸುವಂತಿಲ್ಲ

ಕೇಂದ್ರ ತಂದಿರುವ ಮೂರು ಕೃಷಿ ಕಾಯಿದೆಗಳ ಬಗ್ಗೆ ಸಂವಿಧಾನ ತಜ್ಞರು ವ್ಯಾಖ್ಯಾನಿಸುವಂತೆ ಕೃಷಿ ಎಂದಿಗೂ ರಾಜ್ಯಗಳ ವಿಷಯ. ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ರೂಪಿಸುವಂತಿಲ್ಲ. ಹಾಗೆ ಮಾಡಿದಲ್ಲಿ ಅದು ಒಕ್ಕೂಟ ವ್ಯವಸ್ಥೆಗೆ ವಿರುದ್ಧದ ನಡೆ ಎಂಬುದಾಗಿಯೂ, ಮತ್ತೊಂದು ಕಡೆ ಈ ಕಾಯಿದೆಗಳನ್ನು ತರಲು ಕಾನೂನಿನಲ್ಲಿ ಅವಕಾಶವೇ ಇಲ್ಲ, ಇವುಗಳನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಬೇಕು ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ. ಆದಾಗ್ಯೂ ಕೇಂದ್ರ ಸರ್ಕಾರ ಏನೂ ಆಗಿಲ್ಲವೇನೋ ಎಂಬಂತೆ ನಿರುಮ್ಮಳವಾಗಿರುವುದಲ್ಲದೆ, ಚಳವಳಿ ನಿರತ ರೈತರ ಬಗ್ಗೆ ತನ್ನ ಶಕ್ತಿ ಮೀರಿ ಅಸಡ್ಡೆ ತೋರುತ್ತಿದೆ.

ಕೋರ್ಟ್ ಮಧ್ಯಪ್ರವೇಶಿಸಿ ಅಷ್ಟೇ ವೇಗವಾಗಿ ಸುಮ್ಮನಾಯಿತು

ಕೋರ್ಟ್ ಮಧ್ಯಪ್ರವೇಶಿಸಿ ಅಷ್ಟೇ ವೇಗವಾಗಿ ಸುಮ್ಮನಾಯಿತು

ಇನ್ನು ಈ ಮೂರು ಕೃಷಿ ಕಾಯಿದೆಗಳ ವಿರುದ್ಧ ಜನಪರ ಅರ್ಥಶಾಸ್ತ್ರಜ್ಞರು ಮಾತನಾಡಿದಾಗ ದಿವ್ಯ ಮೌನವಹಿಸಿದ್ದ ಕೇಂದ್ರ ಸರ್ಕಾರ, ರೈತರು "ದಿಲ್ಲಿ ಚಲೋ" ಮಾಡಿದಾಗ ಚರ್ಚೆಗೆ ಕರೆದು ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ಭರವಸೆ ನೀಡಿತು. ಎರಡನೆಯ ಭಾಗದಲ್ಲಿ ಈಗ ತಂದಿರುವ ಕಾನೂನುಗಳು ರೈತ ಪರವಾಗಿವೆ ಎಂದು ಹೇಳಿಕೊಂಡಿತು. ಮೂರನೆಯ ಭಾಗದಲ್ಲಿ ಈಗ ಚಳವಳಿ ನಿರತವಾಗಿರುವವರು ರೈತರೇ ಅಲ್ಲ ಎಂದು ಹೇಳಿತು. ಅದೂ ಸಾಲದೆಂಬದೆ ಖಲೀಸ್ತಾನಿಗಳು ಎಂದು ಹೇಳಿತು. ಇನ್ನೂ ಮುಂದುವರೆದು ಇದು ಕೇವಲ ಪಂಜಾಬ್ ರೈತರ ತಕರಾರಷ್ಟೇ ಎಂದಿತು. ಏತನ್ಮಧ್ಯೆ ತಮ್ಮ ಪಕ್ಷಕ್ಕೆ ನಡೆದುಕೊಳ್ಳುವ ಒಂದಿಷ್ಟು ರೈತರಿಂದ ಈಗ ತಂದಿರುವ ಕೃಷಿ ಕಾಯಿದೆಗಳು ಸರಿಯಾಗಿವೆ. ಇದರಿಂದ ರೈತರಿಗೆ ಲಾಭವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾವಿದನ್ನೇ ಕೇಳುತ್ತಿದ್ದದ್ದು ಎಂದೆಲ್ಲಾ ಹೇಳಿಕೆಗಳನ್ನು ಬಿಡುಗಡೆ ಮಾಡಿತು. ಏತನ್ಮಧ್ಯೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಷ್ಟೇ ವೇಗವಾಗಿ ಸುಮ್ಮನಾದ ಪ್ರಸಂಗವೂ ನಡೆಯಿತು. ಚಳುವಳಿ ಮುಂದುವರೆಯುತ್ತಿದೆ.

ಜನವರಿ 26ರ ಘಟನೆ

ಜನವರಿ 26ರ ಘಟನೆ

ಲಕ್ಷಾಂತರ ರೈತರು ದಿಲ್ಲಿಗೆ ಟ್ರಾಕ್ಟರ್ ಗಳನ್ನು ತಂದರು. ಪೊಲೀಸರು ಹಾಕಿದ್ದ ತಡೆಗೋಡೆಗಳನ್ನು ತೆರವು ಮಾಡಿ ದಿಲ್ಲಿಯೊಳಗೆ ಹೋದರು. ಲಾಠಿ ಚಾರ್ಚ್, ಅಶ್ರುವಾಯು ಸಿಡಿಸಿದ ಪೊಲೀಸರು ರೈತರ ಟ್ರಾಕ್ಟರ್ ರ್‍ಯಾಲಿಗೆ ಅಡಚಣೆ ಮಾಡಿದರು. ಏತನ್ಮಧ್ಯೆ ಕೆಂಪುಕೋಟೆಗೆ ನುಗ್ಗಿದವರಲ್ಲೊಬ್ಬ ಖಲೀಸ್ತಾನದ ಬಾವುಟ ಹಾರಿಸಿದ. ಮುಂದಿನ ದಿನಗಳಲ್ಲಿ ಆತನ ಹಿನ್ನೆಲೆ, ಏತಕ್ಕಾಗಿ ಅದೆಲ್ಲಾ ನಡೆಯಿತು ಎಂಬಿತ್ಯಾದಿ ಸತ್ಯ ಸಂಗತಿಗಳು ಜಗತ್ತಿನ ಮುಂದೆ ಅನಾವರಣಗೊಂಡವು.

ರಾಕೇಶ್ ಟಿಕಾಯತ್ ಕಣ್ಣೀರು

ರಾಕೇಶ್ ಟಿಕಾಯತ್ ಕಣ್ಣೀರು

ಕೇಂದ್ರ ಸರ್ಕಾರ ರೈತ ಚಳುವಳಿಗೆ "ರಾಷ್ಟ್ರ ದ್ರೋಹ"ದ ಪಟ್ಟವನ್ನು ಕಟ್ಟಿದ್ದು, ರೈತ ಚಳವಳಿಯನ್ನು ಒಕ್ಕಲೆಬ್ಬಿಸಲು ಇನ್ನಿಲ್ಲದ ಕಿರುಕುಳ ಕೊಟ್ಟ ಹಿನ್ನೆಲೆಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದರು. ಮರುಕ್ಷಣ ದೇಶದ ದಿಕ್ಕು ದಿಕ್ಕುಗಳಿಂದ ಸಾಗರೋಪಾದಿಯಲ್ಲಿ ರೈತರು ದಿಲ್ಲಿಯತ್ತ ಹೊರಟರು. ಮುಖ್ಯವಾಗಿ ಉತ್ತರ ಪ್ರದೇಶ, ರಾಜಾಸ್ಥಾನ, ಪಂಜಾಬ್ ಹರಿಯಾಣ ರಾಜ್ಯಗಳಿಂದ ಅಕ್ಷರಶಃ ರೈತರು ರಾತ್ರೋರಾತ್ರಿ ದಿಲ್ಲಿಯತ್ತ ಪ್ರಯಾಣ ಬೆಳಿಸಿದರು. ಚಳುವಳಿ ಮರುಹುಟ್ಟು ಪಡೆಯಿತು. ಗಟ್ಟಿಯಾಯಿತು.

ಸಂಘಟಿತ ರೈತ ಹೋರಾಟದ ಹಿನ್ನೆಲೆ

ಸಂಘಟಿತ ರೈತ ಹೋರಾಟದ ಹಿನ್ನೆಲೆ

ಇದೀಗ ದಿಲ್ಲಿಯಲ್ಲಿ ಸಂಘಟಿತವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಏಕಾಏಕಿ ಸಂಘಟಿತವಾಗಿರುವುದೇನಲ್ಲ. 1995 ರಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟಗಳು ಸಂಘಟಿತವಾಗಿವೆ. ಅವೆಲ್ಲಾ ಈಗ ರೂಪುಗೊಂಡಿರುವ ಸಂಘಟಿತ ಹೋರಾಟಕ್ಕೆ ಭದ್ರ ಬುನಾದಿ ಹಾಕಿವೆ. ಹಿಂದೆ ಇಂಡಿಯನ್ ಕೋ-ಆರ್ಡಿನೇಶನ್ ಕಮಿಟಿ ಫಾರ್ ಫಾರ್ಮಸ್ ಹೆಸರಿನ ವೇದಿಕೆಯನ್ನು ಪ್ರೊ.ಎಂಡಿಎನ್ ಹಾಗೂ ಮಹೇಂದ್ರ ಸಿಂಗ್ ಟಿಕಾಯತ್ ಇರುವಾಗಲೇ ಮಾಡಿದ್ದರು. ಅದೇ ರೀತಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ವೇದಿಕೆಗಳೂ ಇದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾ ವಯಾಕ್ಯಾಂಪೆಸಿನಾ ಹೆಸರಿನ ರೈತ ಚಳುವಳಿಗಳ ವೇದಿಕೆಯಿದೆ. ಇವೆಲ್ಲವೂ ಈಗಲೂ ಕ್ರಿಯಾಶೀಲವಾಗಿವೆ. ಇದೇ ಮಾದರಿಯಲ್ಲಿ ಈಗ ಸಂಯುಕ್ತ ಕಿಸಾನ್ ಮೋರ್ಚಾ ಜನ್ಮತಾಳಿದೆ.

ರೈತ ನಾಯಕರಿಗೆ ಇರಬೇಕಾದ ಎಚ್ಚರ

ರೈತ ನಾಯಕರಿಗೆ ಇರಬೇಕಾದ ಎಚ್ಚರ

ಪ್ರಸ್ತುತ ದಿಲ್ಲಿ ಚಳುವಳಿಗೆ ಅನೇಕ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಆ ಬಗ್ಗೆ ರೈತ ನಾಯಕರು ಸಂಭ್ರಮಪಡುವುದನ್ನು ಬಿಟ್ಟು ಎಚ್ಚರದಿಂದ ಇರುವುದು ಒಳ್ಳೆಯದು. ರೈತ ಚಳುವಳಿಯ ಫಸಲನ್ನು ಮತಗಳಲ್ಲಿ ಕೊಯಿಲು ಮಾಡಿಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ಬಲು ಚಾಲಾಕಿ. ಹಿಂದೆ ಕರ್ನಾಟಕದಲ್ಲಿ (1983-89 ಮತ್ತು 1994 ರಲ್ಲಿ) ರೈತ ಸಂಘದ ಮತಗಳನ್ನು ಜನತಾ ಪಕ್ಷ ಕೊಯಿಲು ಮಾಡಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಎಡ ಪಕ್ಷಗಳು ಅಥವಾ ಕಾಂಗ್ರೆಸ್ ರೈತ ಮತಗಳನ್ನು ಕೊಯಿಲು ಮಾಡಿಕೊಳ್ಳಲು ಹವಣಿಸುತ್ತಿರಬಹುದು.

ದಟ್ಟ ದರಿದ್ರ ಸ್ಥಿತಿಯಲ್ಲಿಟ್ಟದ್ದು ಕಾಂಗ್ರೆಸ್

ದಟ್ಟ ದರಿದ್ರ ಸ್ಥಿತಿಯಲ್ಲಿಟ್ಟದ್ದು ಕಾಂಗ್ರೆಸ್

ರೈತ ನಾಯಕರಿಗೆ ಒಂದು ವಿಷಯದ ಬಗ್ಗೆ ಯಾವಗಲೂ ಎಚ್ಚರವಿರಬೇಕು. ಇವ್ಯಾವ ರಾಜಕೀಯ ಪಕ್ಷಗಳೂ ರೈತರ ಹಿತ ಕಾಯುವುದಿಲ್ಲ. ಸ್ವಾತಂತ್ರ್ಯಾ ನಂತರ ಇಷ್ಟೂ ಕಾಲ ರೈತರನ್ನು ದಟ್ಟ ದರಿದ್ರ ಸ್ಥಿತಿಯಲ್ಲಿಟ್ಟದ್ದು ಕಾಂಗ್ರೆಸ್ ಪಕ್ಷವೇ ಎಂಬುದನ್ನು ಮರೆಯದಿರಿ. ಈಗ ನಾವು ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವಷ್ಟೇ. So, ಚಳವಳಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ರೈತ ಕುಲಕ್ಕೆ ಅಗತ್ಯವಾಗಿ ಬೇಕಾದ ಸಲವತ್ತುಗಳನ್ನು ಪಡೆದುಕೊಳ್ಳಲು ಸರ್ಕಾರಗಳ ಮೇಲೆ ಒತ್ತಡ ತರುವುದು ಬಿಟ್ಟರೆ ರೈತರ ಹಿತವನ್ನು ಯಾವುದೋ ರಾಜಕೀಯ ಪಕ್ಷ ಕಾಯುತ್ತದೆ ಅಂದುಕೊಂಡರೆ ಅದು ಮೂರ್ಖತನವಲ್ಲದೆ ಬೇರೇನೂ ಅಲ್ಲ.

English summary
BJP also promised to give C2 + 50% as recommended in the Swaminathan report for agricultural products. Infact it was part of the BJP manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X