ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

MSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘ

|
Google Oneindia Kannada News

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವ್ಯಾಪಕ ಪ್ರಚಾರದೊಂದಿಗೆ 2020 - 21 ರ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ಈಗ ಘೋಷಿಸಿರುವ ಬೆಂಬಲ ಬೆಲೆಯು ಕೆಲವು ಬೆಳೆಗಳಿಗೆ ಉತ್ಪಾದನಾ ವೆಚ್ಚದ ಮೇಲೆ 50% ದಿಂದ 83% ವರೆಗೆ ಅಧಿಕ ಆದಾಯವನ್ನು ತರುತ್ತದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಇದು ಕೇವಲ ಸುಳ್ಳುಗಳನ್ನು ಆಕರ್ಷಕವಾಗಿ ಕಂತೆ ಕಟ್ಟಿ ಕೊಡುವ ನಾಟಕವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಆರೋಪಿಸಿದೆ.

ವ್ಯವಸಾಯದ ವೆಚ್ಚವು ವಿಪರೀತ ಹೆಚ್ಚಳವಾಗಿರುವಾಗ ಭತ್ತಕ್ಕೆ ಘೋಷಿಸಿರುವ ಬೆಂಬಲ ಬೆಲೆಯು ಕಳೆದ ವರ್ಷಕ್ಕಿಂತ ಕೇವಲ ಶೇ. 3 ರಷ್ಟು ಹೆಚ್ಚಳವಾಗಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ಕೃಷಿ ವೆಚ್ಚವನ್ನು ಲೆಕ್ಕಾಚಾರ ಮಾಡಿರುವುದೇ ಪ್ರಶ್ನಾರ್ಹವಾಗಿದೆ.

BJP govt is cheating Farmers with MSP offer: Raita Sangha

ವೆಚ್ಚಗಳನ್ನು ಕೀಳಂದಾಜು ಮಾಡಿ ವಾಸ್ತವಿಕ ವೆಚ್ಚವನ್ನು ಕಡಿಮೆ ತೋರಿಸಲಾಗಿದೆ. ಇದು ನಿಜವಾಗಿಯೂ ರೈತರ ವ್ಯವಸಾಯದ ಖರ್ಚಿನ ಹತ್ತಿರಕ್ಕೂ ಇಲ್ಲವಾಗಿದೆ. ಸಾಂಕ್ರಾಮಿಕ ಪಿಡುಗು ಮತ್ತು ಯೋಜನಾ ರಹಿತ ಲಾಕ್‌ಡೌನ್ ಪರಿಣಾಮವಾಗಿ ಈಗಾಗಲೇ ಸಂಕಷ್ಟದ ಸ್ಥಿತಿಯಲ್ಲಿರುವ ರೈತರಿಗೆ ಈ ರೀತಿ ವಂಚನೆ ಮಾಡಿರುವ ಕೇಂದ್ರ ಸರ್ಕಾರದ ಉದಾಸೀನ ನಡೆಯನ್ನು KPRS ಬಲವಾಗಿ ಖಂಡಿಸುತ್ತದೆ.

ಭತ್ತ ಬೆಳೆಯಲು ತಗಲುವ ಖರ್ಚು ಎಷ್ಟು?

2020 - 21ರ ಮುಂಗಾರು ಭತ್ತದ ಬೆಳೆಯ ಅಂದಾಜು ಬೆಲೆಯನ್ನು ಕ್ವಿಂಟಾಲಿಗೆ ₹1245 ಎಂದು ತೋರಿಸಲಾಗಿದೆ. ಆದರೆ 2019 - 20 ನೇ ಸಾಲಿನ ಮುಂಗಾರು ಭತ್ತ ಬೆಳೆಯಲು ತಗಲುವ ಖರ್ಚು ಕ್ವಿಂಟಾಲಿಗೆ ₹1619 ಎಂದು ಲೆಕ್ಕ ಮಾಡಲಾಗಿತ್ತು. ಈ ಲೆಕ್ಕವನ್ನು ಗಮನಕ್ಕೆ ತೆಗೆದುಕೊಂಡು ಬೆಳೆ ಬೆಳೆಯಲು ತಗಲುವ ವೆಚ್ಚ ಮತ್ತು ಅದಕ್ಕೆ ಶೇ. 50 ಆದಾಯ ಸೇರಿಸಿ ಬೆಂಬಲ ಬೆಲೆ ಘೋಷಿಸಿದ್ದರೆ ಕ್ವಿಂಟಾಲಿಗೆ ₹2428 ಆಗಬೇಕಿತ್ತು.

MSP ಘೋಷಿಸಿದ ಕೇಂದ್ರ-MSP ಘೋಷಿಸಿದ ಕೇಂದ್ರ-"ಕಾಣ್ತಾ ಇದೆ ಕಾಣ್ತಾ ಇಲ್ಲಾ ಸ್ವಾಮಿ"

ಅಂದರೆ ಈಗ ಘೋಷಿಸಿರುವ ಬೆಲೆಗಿಂತ ಕ್ವಿಂಟಾಲಿಗೆ ₹560 ಹೆಚ್ಚು ಸಿಗಬೇಕಿತ್ತು. ಇದೇ ಅವಧಿಯಲ್ಲಿ ಕೇರಳ ಸರ್ಕಾರವು ಭತ್ತವನ್ನು ಕ್ವಿಂಟಾಲಿಗೆ ₹2690 ರಂತೆ ಖರೀದಿಸುತ್ತಿದೆ ಎಂಬುದನ್ನು ಗಮನಿಸಬೇಕು.

ಇದೇ ಅವಧಿಯಲ್ಲಿ ಪಂಜಾಬ್ ಸರ್ಕಾರದ ಕೃಷಿ ಇಲಾಖೆ 2019 - 20 ನೇ ಸಾಲಿನ ಭತ್ತಕ್ಕೆ ವ್ಯವಸಾಯದ ಖರ್ಚನ್ನು ₹2744 ಎಂದು ಅಂದಾಜು ಮಾಡಿದೆ. ಈ ಲೆಕ್ಕದಲ್ಲಿ ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಕ್ವಿಂಟಾಲಿಗೆ ಕೇವಲ ₹1204 ಎಂದು ಲೆಕ್ಕ ಹಾಕಿದ್ದು ಪಂಜಾಬಿನ ಲೆಕ್ಕಕ್ಕೆ ಹೋಲಿಸಿದರೆ ಶೇ.44 ಮಾತ್ರ ಆಗುತ್ತದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಡುತ್ತಿರುವ ರೈತರ ಜೊತೆಗಿನ ಚೆಲ್ಲಾಟವನ್ನು ಕರ್ನಾಟಕ ಪ್ರಾಂತ ರೈತ ಸಂಘ( KPRS) ಬಲವಾಗಿ ಖಂಡಿಸುತ್ತದೆ ಮತ್ತು ಇಂತಹ ಸಂವೇದನಾ ರಹಿತ ನಡವಳಿಕೆಯನ್ನು ಪ್ರತಿಭಟಿಸಬೇಕೆಂದು ರೈತರಿಗೆ ಮತ್ತು ರೈತ ಸಂಘದ ಸಮಿತಿಗಳಿಗೆ ಕರೆ ನೀಡುತ್ತದೆ ಸಂಘದ ಅಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿ ಹೇಳಿದ್ದಾರೆ.

ಇದೇ ರೀತಿಯಲ್ಲಿ ಎಲ್ಲಾ ಬೆಳೆಗಳ ವ್ಯವಸಾಯದ ವೆಚ್ಚವನ್ನು ನಿಜ ವೆಚ್ಚಕ್ಕಿಂತ ಶೇ.30 ರಷ್ಟು ತಗ್ಗಿಸಿ ಲೆಕ್ಕ ಹಾಕಲಾಗಿದೆ. ಕೆಳಗಿನ ಅಂಕಿಅಂಶಗಳಿಂದ ಬಿಜೆಪಿ ಸರ್ಕಾರದ ಸುಳ್ಳುಗಳು ಅನಾವರಣಗೊಳಿಸುತ್ತವೆ.

ಬೆಳೆ CACP C2 Cost projections-2019-20 KMS A2+FL Cost projections-2020-21 C2+50% projections for 2019-20 KMS MSP for KMS 2020-21 difference betn. C2+50%(19-29)and MSP(20-21)
ಭತ್ತ 1619 1245 2428.5 1868 560
ಜೋಳ 2324 1746 3486 2620 866
ನವಣೆ 1463 1175 2194.5 2150 44.5
ಮೆಕ್ಕೆಜೋಳ 1570 1213 2355 1850 505
ರಾಗಿ 2672 2194 4008 3295 713
ತೊಗರಿ 5417 3796 8125.5 6000 2125.5
ಹೆಸರು ಕಾಳು 6359 4797 9538.5 7196 2342.5
ಕಡಲೆ 5460 3660 8190 6000 2190
ಕಡಲೆಕಾಯಿ 4352 3515 6528 5275 983
ಸೋಯಾಬಿನ್ 3422 2587 5133 3880 1253
ಎಳ್ಳು 6125 4570 9187.5 6855 2332.5
ಸೂರ್ಯಕಾಂತಿ 4957 3921 7435.5 5885 1550.5
ಹತ್ತಿ 4678 3676 7017 5515 1502
ಉಚ್ಚೆಳ್ಳು 5193 4462 8869.5 6695 2174.5
English summary
Karnataka regional Farmers association(KPRS) has condemned BJP government and alleged that Minimum Support Price (MSP) offered to various agro products is just a eyewash and govt is cheating farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X