ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಕೆ.ಜಿ ಹಾಪ್‌ ಶೂಟ್‌ಗೆ 1 ಲಕ್ಷ ರೂ; ನಿಜಾಂಶ ಇದ್ದಿದ್ದೇ ಬೇರೆ...

|
Google Oneindia Kannada News

ನವದೆಹಲಿ, ಏಪ್ರಿಲ್ 3: ಈಚೆಗಷ್ಟೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ, ವಿಶ್ವದ ಅತಿ ದುಬಾರಿ ತರಕಾರಿ ಹಾಪ್‌ಶೂಟ್ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಬಿಹಾರದ ರೈತರೊಬ್ಬರು ಈ ದುಬಾರಿ ತರಕಾರಿ ಬೆಳೆಯುತ್ತಿದ್ದು, ಒಂದು ಕೆ.ಜಿ.ಗೆ ಒಂದು ಲಕ್ಷ ರೂಪಾಯಿ ಬೆಲೆ ಎಂಬುದೇ ಚರ್ಚೆಯ ಕೇಂದ್ರಬಿಂದುವಾಗಿತ್ತು. ಆದರೆ ಇವೆಲ್ಲ ಸುಳ್ಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬಿಹಾರದ ಔರಂಗಾಬಾದ್‌ನಲ್ಲಿ ಅಮರೇಶ್ ಸಿಂಗ್ ಎಂಬುವರು ಈ ಬೆಳೆಯನ್ನು ಬೆಳೆಯುತ್ತಿರುವುದಾಗಿ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎಂಬುವರು ಎರಡು ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ಭಾರತದ ಕೃಷಿ ದಿಕ್ಕನ್ನು ಬದಲಾಯಿಸಬಹುದು ಎಂದು ಬರೆದುಕೊಂಡಿದ್ದರು. ಆನಂತರ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತರಕಾರಿ ಬಗ್ಗೆ ಚರ್ಚೆ ಶುರುವಾಗಿತ್ತು. ಈ ಟ್ವೀಟ್ ‌ಗೆ 24 ಸಾವಿರ ಲೈಕ್‌ಗಳು ಬಂದಿದ್ದು, 5000 ಬಾರಿ ರಿಟ್ವೀಟ್ ಮಾಡಲಾಗಿತ್ತು.

1 ಕೆ.ಜಿಗೆ 1 ಲಕ್ಷ ರೂ; ಪ್ರಪಂಚದ ಅತಿ ದುಬಾರಿ ತರಕಾರಿ ಬೆಳೆದ ಈ ರೈತ1 ಕೆ.ಜಿಗೆ 1 ಲಕ್ಷ ರೂ; ಪ್ರಪಂಚದ ಅತಿ ದುಬಾರಿ ತರಕಾರಿ ಬೆಳೆದ ಈ ರೈತ

ತರಕಾರಿ ಕುರಿತು ಹೆಚ್ಚಿನ ವರದಿ ಮಾಡಲು "ದೈನಿಕ್ ಜಾಗರಣ" ಹಿಂದಿ ಪತ್ರಿಕೆಯ ತಂಡವೊಂದು ಬಿಹಾರಕ್ಕೆ ಭೇಟಿ ನೀಡಿ ಬೆಳೆಯನ್ನು ನೋಡಲು ಹೋಗಿದೆ. ಆದರೆ ಅಲ್ಲಿ ಯಾವುದೇ ಅಂಥ ಬೆಳೆ ಕಂಡುಬಂದಿಲ್ಲ. ಸ್ಥಳೀಯರನ್ನು ವಿಚಾರಿಸಿದಾಗ, ಅಲ್ಲಿ ಅಂಥ ತರಕಾರಿ ಹೆಸರನ್ನು ಕೇಳೇ ಇಲ್ಲ ಎಂದು ಹೇಳಿದರು ಎಂದು ಪತ್ರಿಕೆ ವರದಿ ಮಾಡಿದೆ.

Bihars 1 Lakh Per KG Hopshoot Vegetable Is False News Says Report

ಅಮರೇಶ್ ಅವರನ್ನು ಫೋನ್ ಮೂಲಕ ಸಂಪರ್ಕ ಸಾಧಿಸಿದ್ದು, ನಳಂದಾ ಜಿಲ್ಲೆಯಲ್ಲಿ ಹಾಪ್‌ ಶೂಟ್ ಬೆಳೆ ಬೆಳೆಯಲಾಗಿದೆ ಎಂದಿದ್ದಾರೆ. ನಳಂದಾಗೂ ಪತ್ರಿಕಾ ತಂಡ ಹೋದಾಗ ಔರಂಗಾಬಾದ್‌ನಲ್ಲಿ ಇದೆ ಎಂದು ದಿಕ್ಕು ತಪ್ಪಿಸಿದ್ದಾರೆ. ಈ ಕುರಿತು ಔರಂಗಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಚಾರಿಸಿದಾಗ, ಅವರು ಇಲ್ಲಿ ಯಾವುದೇ ಅಂಥ ಬೆಳೆ ಬೆಳೆದಿಲ್ಲ ಎಂದಿದ್ದಾರೆ.
ಅಮರೇಶ್ ಕೆಂಪು ಅಕ್ಕಿ ಹಾಗೂ ಗೋಧಿಯನ್ನು ಬೆಳೆದಿದ್ದಾರೆ ಎಂದು ತಿಳಿಸಿದೆ.

ಐಎಎಸ್ ಅಧಿಕಾರಿಯ ಟ್ವೀಟ್ ಆಧರಿಸಿ ಹಲವು ಮಾಧ್ಯಮಗಳು ಈ ವಿಶೇಷ ತರಕಾರಿ ಕುರಿತು ವರದಿ ಮಾಡಿದ್ದವು.

English summary
A news which says vegetable called hop shoots is being cultivated by a farmer in Bihar's Aurangabad district and sold for ₹ 1 lakh per kilogram have reportedly emerged as false,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X