ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಕೆಂಪು ಬೆಂಡೆ ಬೆಳೆದ ಭೋಪಾಲದ ರೈತ; ಹುಬ್ಬೇರಿಸಲಿದೆ ಇದರ ಬೆಲೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಭೋಪಾಲ್, ಸೆಪ್ಟೆಂಬರ್ 7: ದೇಶದಲ್ಲಿ ಸಾಮಾನ್ಯವಾಗಿ ಹಸಿರು ಬಣ್ಣದ ಬೆಂಡೆಕಾಯಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಹಾಗೂ ಮಾರಾಟ ಮಾಡಲಾಗುತ್ತದೆ. ಆದರೆ ಅತಿ ಅಪರೂಪದ ಕೆಂಪು ಬೆಂಡೆ ಕಾಯಿಯನ್ನು ಮಧ್ಯಪ್ರದೇಶದ ರೈತರೊಬ್ಬರು ಬೆಳೆದು ಗಮನ ಸೆಳೆಯುತ್ತಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ಮಿಸ್ರಿಲಾಲ್ ರಜಪೂತ್ ಎಂಬ ರೈತರೊಬ್ಬರು ತಮ್ಮ ತೋಟದಲ್ಲಿ ಕೆಂಪು, ತಿಳಿ ನೇರಳೆ ಬಣ್ಣದ ಬೆಂಡೆಕಾಯಿಯನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಭೋಪಾಲ್‌ನ ಖಜೂರಿ ಕಲಾನ್ ಪ್ರದೇಶದ ಮಿಸ್ರಿಲಾಲ್ ರಜಪೂತ್ ತೋಟವೀಗ ಕೆಂಪು ಬೆಂಡೆಯಿಂದ ತುಂಬಿಕೊಂಡು ಆಕರ್ಷಿತವಾಗಿ ಕಾಣುತ್ತಿದೆ.

ವಿಶ್ವದ ಅತಿ ದುಬಾರಿ ಮಾವಿನ ತಳಿ ಭಾರತದಲ್ಲಿ; ಎಷ್ಟಿದರ ಬೆಲೆ?ವಿಶ್ವದ ಅತಿ ದುಬಾರಿ ಮಾವಿನ ತಳಿ ಭಾರತದಲ್ಲಿ; ಎಷ್ಟಿದರ ಬೆಲೆ?

ಅಂದ ಹಾಗೆ ರಜಪೂತ್, ಈ ಕೆಂಪು ಬೆಂಡೆ ಬೀಜಗಳನ್ನು ತಂದಿದ್ದು ವಾರಾಣಸಿಯ ಕೃಷಿ ಸಂಶೋಧನಾ ಸಂಸ್ಥೆಯಿಂದ. ಒಂದು ಕೆ.ಜಿ.ಯಷ್ಟು ಕೆಂಪು ಬೆಂಡೆ ಬೀಜವನ್ನು ತಂದಿದ್ದ ರಜಪೂತ್ ತಮ್ಮ ತೋಟದಲ್ಲಿ ಇದನ್ನು ಬೆಳೆಯಲು ಮುಂದಾದರು. ಕೇವಲ ನಲವತ್ತು ದಿನಗಳಲ್ಲಿ ಗಿಡ ಬೆಳೆದು ಕಾಯಿ ಬಿಟ್ಟು ಇದೀಗ ಮಾರಾಟಕ್ಕೂ ಅಣಿಯಾಗಿವೆ.

Bhopal Farmer Grows Special Red Lady Finger Costs Rs 800 Per Kg

ಈ ಕೆಂಪು ಬೆಂಡೆ ಬೆಳೆಸಲು ಕ್ರಿಮಿನಾಶಕ ಬಳಸಿಲ್ಲವಂತೆ ರಜಪೂತ್, ಒಂದು ಎಕರೆ ಜಾಗದಲ್ಲಿ ಕನಿಷ್ಠ 40-50 ಕ್ವಿಂಟಾಲ್ ಹಾಗೂ ಗರಿಷ್ಠ 80 ಕ್ವಿಂಟಾಲ್ ಬೆಂಡೆ ಬೆಳೆಯಬಹುದು ಎಂದು ಮಾಹಿತಿ ನೀಡುತ್ತಾರೆ.

ಕೆಂಪು ಬೆಂಡೆಯ ನೋಟಕ್ಕಿಂತ ಹುಬ್ಬೇರಿಸುವಂತೆ ಮಾಡುವ ಇನ್ನೂ ಒಂದು ಸಂಗತಿ ಎಂದರೆ, ಈ ತರಕಾರಿ ಬೆಲೆ. ಹಸಿರು ಬೆಂಡೆಕಾಯಿ ಹೆಚ್ಚೆಂದರೆ ಕೆ.ಜಿಗೆ 40 ರೂ ಇರುತ್ತದೆ. ಆದರೆ ಈ ಕೆಂಪು ಬೆಂಡೆಕಾಯಿ ಮಾಮೂಲಿ ಬೆಂಡೆಗಿಂತ ಏಳು ಪಟ್ಟು ಹೆಚ್ಚು ಬೆಲೆಯದ್ದಾಗಿರುತ್ತದೆ.

ಒಂದು ಹಣ್ಣಿಗೆ 1000 ರೂ; ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಈ ಮಾವಿನ ತಳಿ ಎಲ್ಲಿದೆ?ಒಂದು ಹಣ್ಣಿಗೆ 1000 ರೂ; ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಈ ಮಾವಿನ ತಳಿ ಎಲ್ಲಿದೆ?

ಅರ್ಧ ಕೆ.ಜಿಗೆ 75 ರೂ ಇಂದ ಆರಂಭವಾಗಿ 400ರೂವರೆಗೂ ಇದರ ಬೆಲೆ ಇರುತ್ತದೆ. ಅಂದರೆ ಕೆ.ಜಿ. ಕೆಂಪು ಬೆಂಡೆಗೆ 800ರೂವರೆಗೂ ಬೆಲೆ ಎಂದು ರಜಪೂತ್ ವಿವರಿಸುತ್ತಾರೆ.

Bhopal Farmer Grows Special Red Lady Finger Costs Rs 800 Per Kg

ಏಕೆ ಇಷ್ಟು ಬೆಲೆ?
ಹಸಿರು ಬೆಂಡೆಗಿಂತ ಕೆಂಪು ಬೆಂಡೆ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಹೃದಯ ಸಮಸ್ಯೆ ಹಾಗೂ ರಕ್ತದೊತ್ತಡದ ಸಮಸ್ಯೆಯಿರುವವರಿಗೆ, ಮಧುಮೇಹಿಗಳಿಗೆ, ಹೆಚ್ಚಿನ ಕೊಲೆಸ್ಟ್ರಾಲ್ ಇರುವವರಿಗೆ ಇದು ಹೆಚ್ಚು ಉಪಯುಕ್ತ ಎಂದು ರಜಪೂತ ಮಾಹಿತಿ ನೀಡುತ್ತಾರೆ. ಇದಕ್ಕೆ ಕಾಶಿ ಲಲಿಮಾ ಎಂದು ನಾಮಕರಣ ಮಾಡಲಾಗಿದೆ.

ಕೆಂಪು ಬೆಂಡೆ ಕುರಿತು ಸಂಶೋಧನೆ: ವಿದೇಶದಲ್ಲಿ ಈ ಕೆಂಪು ಬೆಂಡೆ ಕಾಣಲು ಸಿಗುತ್ತಿತ್ತು. ಭಾರತೀಯ ಕೃಷಿ ವಿಜ್ಞಾನಿಗಳು ಸುಮಾರು 23 ವರ್ಷಗಳ ಕಾಲ ಈ ಬೆಂಡೆ ತಳಿ ಬಗ್ಗೆ ಸಂಶೋಧನೆ ನಡೆಸಿ ಕಾರ್ಯಗತಗೊಳಿಸಿದ್ದಾರೆ. 1995-96ರಲ್ಲೇ ಈ ತರಕಾರಿ ತಳಿ ಅಭಿವೃದ್ಧಿ ಆರಂಭವಾಗಿತ್ತು. ಸಂಸ್ಥೆ ಮಾಜಿ ನಿರ್ದೇಶಕ ಡಾ. ಬಿಜೇಂದ್ರ ಅವರ ನೇತೃತ್ವದಲ್ಲಿ ಸಂಶೋಧನೆ ಆರಂಭಿಸಲಾಗಿತ್ತು. ಇದೇ ಡಿಸೆಂಬರ್ ವೇಳೆಗೆ ಇವು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಹಲವೆಡೆ ಬೆಳೆಯುವ ಪ್ರಯತ್ನಗಳು ಆಗುತ್ತಿವೆ.

ಕೆಂಪು ಬೆಂಡೆ ವಿಶೇಷತೆಗಳು: ಕೆಂಪು ಬೆಂಡೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಆ್ಯಂಟಿಯಾಕ್ಸಿಡೆಂಟ್‌ಗಳು ಇರುತ್ತವೆ. ಕಬ್ಬಿಣಂಶ ಹಾಗೂ ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳು ಲಭ್ಯವಿವೆ. ಪೋಷಕಾಂಶದಿಂದ ತುಂಬಿರುವ ಈ ತರಕಾರಿ ರೈತರಿಗೆ ಆದಾಯ ತರುವ ನಿರೀಕ್ಷೆಯೂ ಇದೆ.

English summary
Misrilal Rajput from Madhya Pradesh’s Bhopal is growing red lady finger and claims it is healthier than the existing natural variety
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X