ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HistoryTV18ನಲ್ಲಿ ಬೀಜ ಸಂರಕ್ಷಕ ಡಾ.ಪ್ರಭಾಕರ್ ರಾವ್ ಕಥೆ

|
Google Oneindia Kannada News

ಬೆಂಗಳೂರು, ಮೇ 30: ಕೆಲವು ದಶಕಗಳ ಹಿಂದಿನವರೆಗೂ, ಹೆಚ್ಚಿನವರು ತಮ್ಮದೇ ಉತ್ಪನ್ನಗಳನ್ನು ಬೆಳೆದುಕೊಳ್ಳುತಿದ್ದಾಗ, ಬೀಜಗಳ ಸಂರಕ್ಷಣೆ ಸಾಮಾನ್ಯವಾಗಿತ್ತು. ಎಲ್ಲವೂ ಸಾವಯವವಾಗಿತ್ತು, ಮತ್ತು ಬೀಜಗಳು ಈಗಿರುವಂತೆ ಸಂರಕ್ಷಿಸಬೇಕಾದ ಚರಾಸ್ತಿಗಳಾಗಿರಲಿಲ್ಲ.

ದೇಶಾದ್ಯಂತ ಇರುವ ಭಾರತೀಯರ ಅದ್ಭುತ ಪ್ರತಿಭೆಗಳು ಮತ್ತು ನಂಬಲಾಗದ ಸಾಧನೆಗಳನ್ನು ಪ್ರಸ್ತುಪಡಿಸುವ HistoryTV18 ರ ಕಾರ್ಯಕ್ರಮವಾದ 'OMG! Yeh Mera India' ದ ಮುಂದಿನ ಸಂಚಿಕೆಯಲ್ಲಿ ವೀಕ್ಷಕರು ಭಾರತದ ಬೀಜ ರಕ್ಷಕರಾದ ಡಾ.ಪ್ರಭಾಕರ್ ರಾವ್ ಅವರನ್ನು ಭೇಟಿ ಮಾಡಲಿದ್ದಾರೆ. ಕೃಷಿಕರು ಮತ್ತು ವಾಸ್ತುಶಿಲ್ಪಿಗಳಾದ ಇವರು ನಮ್ಮ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಬೀಜಗಳು ನಾಶವಾಗದಂತೆ ಕಾಪಾಡುವ ಹೊಣೆ ಹೊತ್ತಿದ್ದಾರೆ.

ಭಾರತದ ಹಸಿರು ಕ್ರಾಂತಿಯು ನಮಗೆ ಸ್ವಾವಲಂಬಿಯಾಗಲು ಮತ್ತು ರಫ್ತು ಮಾಡಲು ಸಾಕಷ್ಟು ಉತ್ಪಾದಿಸುವ ನಮ್ಮ ಸಾಮರ್ಥ್ಯವನ್ನು ಅದ್ಭುತವಾಗಿ ವೃದ್ಧಿಸಿದೆ. ಆದಾಗ್ಯೂ, ಕೆಲವು ಅಂದಾಜಿನ ಪ್ರಕಾರ, ಭಾರತದ 99% ಸಸ್ಯ ಜೀವವೈವಿಧ್ಯತೆಯು ವಿವಿಧ ಕಾರಣಗಳಿಂದಾಗಿ ಈಗ ಕಣ್ಮರೆಯಾಗಿದೆ, ಈಗ ಸಾಂಪ್ರದಾಯಿಕ ಕೃಷಿಕರೂ ಸಹ ಹೆಚ್ಚಿನ ಇಳುವರಿಯನ್ನು ನೀಡುವ ಹೈಬ್ರಿಡ್ ಬೀಜಗಳನ್ನು ಬಳಸುತ್ತಾರೆ.

ಡಾ. ರಾವ್ ಇಂದು ಸ್ಥಳೀಯ ಜಾತಿಯ ತರಕಾರಿಗಳನ್ನು ಉಳಿಸುವುದು ಮತ್ತು ನಮ್ಮ ಜೀವವೈವಿಧ್ಯತೆಯನ್ನು ಕಾಪಾಡುವ ಜೊತೆಗೆ ಭಾರತದ ಜೀವವೈವಿಧ್ಯತೆಯನ್ನು ಕಾಪಾಡಲು ರೈತರಿಗೆ ಮತ್ತು ನಗರಗಳಲ್ಲಿನ ಉದ್ಯಾನ ಬೆಳೆಗಾರರಿಗೆ ಸಹಾಯ ಮಾಡುವ ತರಬೇತಿಯನ್ನು ನೀಡುತ್ತಿದ್ದಾರೆ.

Bengaluru’s Dr.Prabhakar Rao on HistoryTV18’s OMG! Yeh Mera India

ಇಂದಿನವರೆಗೂ ಅವರು ಅಳಿವಿನಂಚಿನಲ್ಲಿರುವ 500 ಕ್ಕೂ ಹೆಚ್ಚು ಬೀಜಗಳನ್ನು ಸಂಗ್ರಹಿಸಿದ್ದಾರೆ ಹಾಗೂ 100 ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.

Recommended Video

Online Class ಬಗ್ಗೆ Modiಗೆ ನೇರ ದೂರು ನೀಡಿದ ಹುಡುಗಿ | Oneindia Kannada

ಈ ಅದ್ಭುತ ಭಾರತೀಯರು ಮತ್ತು ಇತರರನ್ನು 'OMG! Yeh Mera India' ಮುಂದಿನ ಸಂಚಿಕೆಯಲ್ಲಿ ಈ ಸೋಮವಾರ ರಾತ್ರಿ 8 ಗಂಟೆಗೆ HistoryTV18 ನಲ್ಲಿ ಭೇಟಿ ಮಾಡಿ. HistoryTV18 ನ 'OMG!Yeh Mera India'ದಲ್ಲಿ ಮಾತ್ರವೇ 'ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ ಅದ್ಭುತವಾದ ಭಾರತೀಯರ ಅದ್ಭುತ ಕಥೆಗಳನ್ನು ವೀಕ್ಷಿಸಲು ಪ್ರತಿ ವಾರ ಟ್ಯೂನ್ ಮಾಡಿ!

English summary
Bengaluru’s Dr.Prabhakar Rao, the hero on a mission to preserve India’s biodiversity only on HistoryTV18’s ‘OMG! Yeh Mera India’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X