ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಇಡೀ ಕರ್ನಾಟಕವನ್ನು ಅಗ್ರಿ ಸ್ಟಾರ್ಟಪ್ ಹಬ್ ಆಗಿಸುವ ಗುರಿ''

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ವೃದ್ಧಿಸಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಎಫ್​​ಐಸಿಸಿ ಶೃಂಗಸಭೆಯಲ್ಲಿ ಪಾಲ್ಗೊಂಡು ಕೃಷಿ ನವೋದ್ಯಮಿಗಳಿಗೆ ವರ್ಚುವಲ್​ ಮೂಲಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವರು, ರಾಜಧಾನಿ ಬೆಂಗಳೂರಲ್ಲಿ 6 ಸಾವಿರ ಸ್ಟಾರ್ಟಪ್​​ಗಳಿದ್ದರೂ ಸಹ ಬಹಳ ಕಡಿಮೆ ಸಂಖ್ಯೆಯಲ್ಲಿ ಅಗ್ರಿ ಸ್ಟಾರ್ಟಪ್​​​ಗಳಿವೆ. ಕೃಷಿಗೆ ಮತ್ತು ಅನ್ನದಾತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಸ್ಟಾರ್ಟಪ್ ಹಬ್​​ಗಳನ್ನು ಸ್ಥಾಪಿಸಿ ಬೆಂಗಳೂರನ್ನು ಅಗ್ರಿ ಸ್ಟಾರ್ಟಪ್ ಹಬ್ ಆಗಿಸುವ ಗುರಿ ಹೊಂದಿರುವುದಾಗಿ ಹೇಳಿದರು.

ಬೆಂಗಳೂರು: ಉಚಿತ ಪಾರ್ಕಿಂಗ್ ರದ್ದು, ಇನ್ಮುಂದೆ ಶುಲ್ಕ ಪಾವತಿಸಲೇಬೇಕುಬೆಂಗಳೂರು: ಉಚಿತ ಪಾರ್ಕಿಂಗ್ ರದ್ದು, ಇನ್ಮುಂದೆ ಶುಲ್ಕ ಪಾವತಿಸಲೇಬೇಕು

ಅಗ್ರಿ ಸ್ಟಾರ್ಟಪ್​​​ಗಳು ಕೃಷಿಯಲ್ಲಿ ಸರಪಳಿಯಂತೆ ಕೆಲಸ ಮಾಡುತ್ತಿದ್ದು, ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ದಕ್ಷ ಮತ್ತು ನವೀನ ಉತ್ಪನ್ನಗಳು ತಂತ್ರಜ್ಞಾನ ಸೇವೆಗಳು ಲಭ್ಯವಾಗಲಿದೆ. ಬೆಂಗಳೂರನ್ನು ಸ್ಟಾರ್ಟಪ್​ಗಳ ಕೇಂದ್ರವಾಗಿ ಪರಿಗಣಿಸಿ ಮತ್ತು ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟಪ್​​ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೃಷಿ ಇಲಾಖೆಯಿಂದ ಬೆಂಗಳೂರಿನಲ್ಲಿ ಅಗ್ರಿ ಸ್ಟಾರ್ಟಪ್​ಗಳ ಕುರಿತು ಕಾರ್ಯಾಗಾರ ನಡೆಸಲಾಗಿತ್ತು.

Bengaluru: Agri Startup Hub For Entire Karnataka: BC Patil

ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಯನ್ನು ಕೃಷಿ ಉದ್ಯಮವನ್ನು ವೃದ್ಧಿಸಬೇಕಿದೆ. ಕೃಷಿ ಕ್ಷೇತ್ರವನ್ನು ಉದ್ಯಮವನ್ನಾಗಿಸಲು ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ಆರಂಭಿಸುವುದಕ್ಕಾಗಿ ಕೃಷಿ ನವೋದ್ಯಮ ನೀತಿಗಳನ್ನು ರೂಪಿಸಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದೆ. ಅಗ್ರಿ ಸ್ಟಾರ್ಟಪ್ ಸಮಿತಿಯು ನೀಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಇತರೆ ಸ್ಟಾರ್ಟಪ್​​ಗಳ ಮಾದರಿಯಲ್ಲಿಯೇ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ವನ್ನು ಸಹ ಹೆಚ್ಚಿಸಬೇಕಿದೆ. ಭಾರತೀಯ ಕೃಷಿಯಲ್ಲಿ ಸುಸ್ಥಿರ ಮತ್ತು ನವೀನತೆ ಕಲ್ಪಿಸಲು ಎಫ್ಐಸಿಸಿಐ ವಿವಿಧ ವಿಭಾಗಗಳಿಂದ ಕೃಷಿ ಸ್ಟಾರ್ಟ್ ಸ್ಟಾರ್ಟಪ್​ಗಳನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ ಎದರು.

ಎಫ್​​ಐಸಿಸಿ ಕರ್ನಾಟಕ ರಾಜ್ಯ ಕೌನ್ಸಿಲ್ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟಪ್​​ಗಳನ್ನು ಉತ್ತೇಜಿಸುವ ಸಂಬಂಧ ಚರ್ಚಿಸಿದ್ದು, ಅದರಂತೆ ಕರ್ನಾಟಕದಲ್ಲಿ ಸೂಕ್ತವಾದ ಕೃಷಿ ಪರಿಸರ ವ್ಯವಸ್ಥೆ ಮತ್ತು ಅಗ್ರಿ ಸ್ಟಾರ್ಟಪ್​​​ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಗ್ರಿ ಸ್ಟಾರ್ಟಪ್ ವೃದ್ಧಿಗೆ ಸರ್ಕಾರದ ಜೊತೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿರುವುದಾಗಿ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಫ್​​ಐಸಿಸಿಐ ಪ್ರಧಾನ ಕಾರ್ಯದರ್ಶಿ ದಿಲೀಪ್ ಚೆನೋಯ್, ಮುಖ್ಯಸ್ಥ ಪ್ರವೇಶ್ ಶರ್ಮಾ, ರಾಷ್ಟ್ರೀಯ ಕೃಷಿ ಸಮಿತಿ ಮತ್ತು ಸಮೂಹ ಸಂಸ್ಥೆ ಅಧ್ಯಕ್ಷ ಟಿ.ಆರ್.ಕೇಶವನ್, ಅಗ್ರಿ ಸ್ಟಾರ್ಟಪ್ ಕಾರ್ಯಪಡೆ ಮುಖ್ಯಸ್ಥ ರವೀಂದ್ರ ಅಗರ್ವಾಲ್ ಸೇರಿದಂತೆ ಮತ್ತಿತ್ತರು ಪಾಲ್ಗೊಂಡಿದ್ದರು.

English summary
The agricultural sector needs to be augmented Agriculture Minister BC Patil Said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X