ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ASSOCHAM ವೆಬಿನಾರ್; ಕರ್ನಾಟಕದ ಕೃಷಿ ಬಗ್ಗೆ ಬಿ.ಸಿ.ಪಾಟೀಲ್ ಮಾಹಿತಿ

|
Google Oneindia Kannada News

ASSOCHAMನಿಂದ ಇಂದು "Impact of Agro and Food Processing Industries in our state of Karnataka, Gaps, Challenges, Opportunities and Way Forward for Better Future in collaboration with NABARD and Karnataka Bank" ವೆಬಿನಾರ್ ಆಯೋಜನೆಗೊಂಡಿದ್ದು, ಕರ್ನಾಟಕದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಈ ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

Recommended Video

IPL 2020 moving to Dubai | Oneindia Kannada

ಈ ಸಂದರ್ಭ ಪ್ರಸ್ತುತ ಕರ್ನಾಟಕದ ಕೃಷಿ ಹಾಗೂ ಕೃಷಿ ಸಂಬಂಧಿತ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.

ಕರ್ನಾಟಕದ ಕೃಷಿ ಹಾಗೂ ಕೃಷಿ ಸಂಬಂಧಿತ ಉತ್ಪನ್ನಗಳಲ್ಲಿ ಶೇಕಡಾ 3-5ರಷ್ಟು ಮಾತ್ರ ಸಂಸ್ಕರಣೆಯಾಗುತ್ತಿದೆ. 2025ರಷ್ಟರಲ್ಲಿ ಇದನ್ನು ಶೇಕಡಾ 25 ರಷ್ಟು ಹೆಚ್ಚಿಸುವ ಚಿಂತನೆ ಇದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿಗಳು ಕೃಷಿ ಮೂಲ ಸೌಕರ್ಯಗಳಿಗೆ ಒಂದು ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಔಷಧೀಯ ಸಸ್ಯಗಳ ಅಭಿವೃದ್ಧಿಗಾಗಿ 4000 ಕೋಟಿ ಮೀಸಲಿಟ್ಟಿದ್ದು, ಆತ್ಮ ನಿರ್ಭರ್ ಅಭಿಯಾನದಡಿ ಜೇನು ಸಾಕಣೆಗೆ 500 ಕೋಟಿ ಮೀಸಲಿಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿ, ಆಹಾರ ಸಂಸ್ಕರಣೆಗೆ 10,000 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಂತೋಷ ವ್ಯಕ್ತಪಡಿಸಿದರು.

ರೈತರಿಗೆ ಬಿ ಸಿ ಪಾಟೀಲ್ ಮನವಿ: ಆತಂಕ ಬೇಡ ಎಂದ ಸಚಿವರೈತರಿಗೆ ಬಿ ಸಿ ಪಾಟೀಲ್ ಮನವಿ: ಆತಂಕ ಬೇಡ ಎಂದ ಸಚಿವ

ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿಡುವಲ್ಲಿ ಕರ್ನಾಟಕ ಎಂದಿಗೂ ಮೊದಲು. ಎ.ಪಿ.ಎಂ.ಸಿಗಳಲ್ಲಿ ಮೊದಲಿಗೆ e-trading ತಂದದ್ದು ಕರ್ನಾಟಕವೇ ಎಂದು ತಿಳಿಸಿದರು.

BC Patil Spoke About Karnataka Agriculture Scenario In Webinar By ASSOCHAM

ಕೊರೊನಾ ಲಾಕ್ ಡೌನ್ ಸಂದರ್ಭ ರಾಜ್ಯದ 30 ಜಿಲ್ಲೆಗಳಲ್ಲಿ ಸುಮಾರು 6000 ಕಿ.ಮೀ ರಸ್ತೆ ಮಾರ್ಗವಾಗಿ ಸಂಚರಿಸಿ ರೈತರ ಸಮಸ್ಯೆಗಳನ್ನು ಕಂಡು ವರದಿ ಸಲ್ಲಿಸಿದ್ದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಮೆಕ್ಕೆ ಜೋಳ ಬೆಳೆಗಾರರಿಗೆ 500 ಕೋಟಿ ರೂಪಾಯಿಗಳು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 137 ಕೋಟಿ ರೂ.ಗಳು, ಆಲಿಕಲ್ಲು ಮಳೆಗೆ ಬೆಳೆ ಕಳೆದುಕೊಂಡ ಭತ್ತದ ಬೆಳೆಗಾರರಿಗೆ 45 ಕೋಟಿ ರೂ.ಗಳು, ಹೂ ಬೆಳೆಗಾರರಿಗೆ 33 ಕೋಟಿ ರೂ.ಗಳು, ಕರ್ನಾಟಕ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿಗೆ 50 ಕೋಟಿ ನೀಡಿದರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಿದರು.

ಭಾರತ ಸರ್ಕಾರದ ಕೃಷಿ ಇಲಾಖೆಯ ರಾಷ್ಟ್ರೀಯ ಮಳೆ ಆಧಾರಿತ ಪ್ರದೇಶ ಪ್ರಾಧಿಕಾರ (NRAA)ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ದಳವಾಯಿ ರೈತರ ಆದಾಯ ಹೆಚ್ಚು ಮಾಡುವಲ್ಲಿ ಹೆಚ್ಚು ಮೌಲ್ಯಯುತ ಮತ್ತು ಹೆಚ್ಚು ಆದಾಯ ತಂದುಕೊಡಬಲ್ಲ ಬೆಳೆಗಳ ಬಗ್ಗೆ ಮಾತನಾಡಿದರು. ರೈತರು ತಮಗೆ ಬೇಕಾದ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು free market access ಬಗ್ಗೆ ಬೆಳಕು ಚೆಲ್ಲಿದರು.

BC Patil Spoke About Karnataka Agriculture Scenario In Webinar By ASSOCHAM

NABARDನ ಕರ್ನಾಟಕದ ಪ್ರಾಂತೀಯ ಕಚೇರಿಯ CGM ನೀರಜ್ ಕುಮಾರ್ ವರ್ಮಾ ಮಾತನಾಡಿ, 10,000 ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಸ್ಥಾಪಿಸಲು ಉದ್ದೇಶಿಸಲಾಗಿದೆ. ಭಾರತ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಸುಗ್ರೀವಾಜ್ಞೆಗಳು ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರವಾಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಇದು ಕೃಷಿ ಚಿತ್ರಣವನ್ನೇ ಬದಲಿಸಲಿದೆ ಎಂದು ಅಭಿಪ್ರಾಯಪಟ್ಟರು.

English summary
Agriculture minister BC Patil has participated in webinar conducted by ASSOCHAM and spoke about present karnataka's agriculture scenario,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X