ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾ ಟೊಮ್ಯಾಟಿನಾ ನಿಷೇಧಕ್ಕೆ ಆನ್ ಲೈನ್ ಅರ್ಜಿ

By Mahesh
|
Google Oneindia Kannada News

Ban La Tomatina petition
ಬೆಂಗಳೂರು, ಸೆ.11: ಜಿಂದಗಿ ನಾ ಮಿಲೇ ದುಬಾರಾ ಚಿತ್ರದಲ್ಲಿ ಲಾ ಟೊಮ್ಯಾಟಿನಾ ಕೊಳೆತ ಟೊಮ್ಯಾಟೋ ಎರೆಚಾಡುವ ಸ್ಪ್ಯಾನಿಷ್ ಹಬ್ಬ ಎಲ್ಲರೂ ನೋಡಿ ಆನಂದಿಸಿದ್ದಾರೆ. ಆದರೆ, ಇದನ್ನು ಬೆಂಗಳೂರಿನಲ್ಲಿ ಆಚರಿಸಲು ಮುಂದಾಗಿರುವವರ ವಿರುದ್ಧ ಸಿಎಂ ಸದಾನಂದ ಗೌಡರಿಗೆ ದೂರು ಸಲ್ಲಿಸಲಾಗುತ್ತಿದೆ.

ಜೈ ಜವಾನ್ ಜೈ ಕಿಸಾನ್ ನಂತರ ಜೈ ಬೂಕಾ ಇನ್ಸಾನ್ ಎಂದು ಘೋಷಿಸುವ ಆನ್ ಲೈನ್ ಪಿಟೀಷನ್ ನಲ್ಲಿ ನಮ್ಮ ಸಂಸ್ಕೃತಿ ಮಾರಕವಾಗಿರುವ ಲಾ ಟೊಮ್ಯಾಟಿನಾ ಹಬ್ಬವನ್ನು ನಿಷೇಧಿಸುವಂತೆ ಡಿವಿ ಸದಾನಂದ ಗೌಡರಿಗೆ ಆನ್ ಲೈನ್ ಮೂಲಕ ಮನವಿ ಸಲ್ಲಿಸಲಾಗುತ್ತಿದೆ.

ದೇಶದಲ್ಲಿ ಹಸಿವಿನಿಂದ ಬರಗೆಟ್ಟಿರುವ 17 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಂದು ಮೋಜು ಮಸ್ತಿ ಮಾಡುವಷ್ಟರ ಮಟ್ಟಿಗೆ ಕರ್ನಾಟಕ ಸಂಪದ್ಭರಿತವಾಗಿಲ್ಲ. ಸ್ಪೇನ್ ನಲ್ಲಿ ಈ ಹಬ್ಬಕ್ಕೆ ಅದರದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಆದರೆ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ಹಬ್ಬ ಆಚರಿಸಲು ಯಾವ ಸಂಬಂಧವೂ ಇಲ್ಲ. ಅವಶ್ಯಕತೆಯೂ ಇಲ್ಲ.

ಈ ಹಬ್ಬದಿಂದ ರೈತರಿಗೆ ನೆರವಾಗುತ್ತದೆ. ಬೆಳೆಗೆ ತಕ್ಕ ಬೆಲೆ ನೀಡಿ ಖರೀದಿಸುತ್ತಿದ್ದೇವೆ ಎನ್ನುವ ಆಯೋಜಕರ ಮಾತು ಸತ್ಯಕ್ಕೆ ದೂರವಾಗಿದ್ದು, ತಿನ್ನುವ ಆಹಾರವನ್ನು ಈ ರೀತಿ ಬಳಸುವುದು ಅಪರಾಧ ಎಂದು ಮನವಿಯಲ್ಲಿ ಹೇಳಲಾಗಿದೆ. ಓದುಗರು ಕೂಡಾ ಈ ಮನವಿಗೆ ಒಪ್ಪುವುದಾದರೆ ಈ

English summary
We must stop the La Tomatina festivals in Bangalore and Mysore. They have been banned in Delhi due to public protest and we can ban it Karnataka says online petition against La Tomatina event(Sept 18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X