• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

“CALM BEFORE STORM” ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ

|

ಮರುಭೂಮಿ ಮಿಡತೆಗಳ ದಾಳಿಯ ಸುದ್ದಿ ಕೊಂಚ ಮರೆಯಾದಂತೆ ಕಾಣುತ್ತಿದೆ. ಇತ್ತೀಚೆಗೆ ಗುಜರಾತ್, ರಾಜಾಸ್ಥಾನ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಗಳ ಮೇಲೆ ದಾಳಿ ಇಟ್ಟಿದ್ದ ಮಿಡತೆಗಳು ಎತ್ತ ಹೋದವು?

   ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

   ಪಾಕೀಸ್ತಾನ ಮತ್ತು ಇರಾನ್ ನಿಂದ ಬಂದಿದ್ದ ಈ ಮಿಡತೆಗಳ ಕೆಲ ಸಮೂಹ ಕೀಟ ನಾಶಕ ಸಿಂಪರಣೆಗಳಿಂದ ಸತ್ತಿದ್ದರೆ, ಮತ್ತಷ್ಟು ಆಯಸ್ಸು ಮುಗಿದು ತೀರಿ ಹೋಗಿವೆ. ಇವುಗಳ ಜೀವಿತಾವಧಿ ಐದು ತಿಂಗಳು. ವಾತಾವರಣವನ್ನಾಧರಿಸಿ ಮೂರರಿಂದ ಐದು ತಿಂಗಳವರೆಗೆ ಬದುಕಿರುತ್ತವೆ. ಅಂದ ಮಾತ್ರಕ್ಕೆ ಮರುಭೂಮಿ ಮಿಡತೆಗಳ ಹಾವಳಿ ಮುಗಿದು ಹೋಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತಷ್ಟು ಮಿಡತೆಗಳ ಸಮೂಹ ಭಾರತಕ್ಕೆ ದಾಳಿ ಇಡುವ ಸಂಭವವಿದೆ. ಈ ಬಾರಿ ಮುಂಗಾರು ಮಾರುತಗಳನ್ನು ಅನುಸರಿಸಿ ಆಫ್ರಿಕಾ ದೇಶದಿಂದ ಬರುತ್ತವೆ ಎಂದು ಫರೀದಾಬಾದ್ ನ LWO (Locust Warning Organization) ಊಹಿಸಿದೆ.

   ಬದಲಾದ ಗಾಳಿಯ ದಿಕ್ಕು, ಲಾಕೋಸ್ಟ್ ಮಿಡತೆ ಹಾವಳಿಯಿಂದ ಬಚಾವಾದ ರಾಜ್ಯ!

    ಮಿಡತೆಗಳ ನಿಯಂತ್ರಣ ಕೆಲಸ ನಡೆಯುತ್ತಲೇ ಇರುತ್ತದೆ

   ಮಿಡತೆಗಳ ನಿಯಂತ್ರಣ ಕೆಲಸ ನಡೆಯುತ್ತಲೇ ಇರುತ್ತದೆ

   ಬಿಸಿಲು ಮತ್ತು ಮಳೆಯ ವಾತಾವರಣ ಮರುಭೂಮಿ ಮಿಡತೆಗಳಿಗೆ ಬಹಳ ಆನಂದ. ಸಂತಾನ ವೃದ್ಧಿಗೂ ಇದು ಸುಸಮಯ. ಇದೀಗ ಉತ್ತರ ಭಾರತದಲ್ಲಿ ಮುಂಗಾರು ಮಳೆ ಆರಂಭವಾದಾಗ ಮರಳು ಪ್ರದೇಶಗಳಲ್ಲಿ ಮಿಡತೆಗಳು ಮೊಟ್ಟೆಗಳನ್ನಿಡುತ್ತವೆ. ಮತ್ತೆ ಸಂತಾನ ವೃದ್ಧಿಯಾಗುತ್ತದೆ. ಅವುಗಳ ನಿಯಂತ್ರಣ ಕೆಲಸ ಎಂದಿನಂತೆ ನಡೆಯುತ್ತಲೇ ಇರುತ್ತದೆ.

    ಆಫ್ರಿಕಾ ಮಿಡತೆಗಳನ್ನು ಎದುರಿಸಲು ತಯಾರಿ

   ಆಫ್ರಿಕಾ ಮಿಡತೆಗಳನ್ನು ಎದುರಿಸಲು ತಯಾರಿ

   ಅದು ಬಿಟ್ಟು ಇದೀಗ ಆಫ್ರಿಕಾದಿಂದ ಬರಲಿರುವ ಮಿಡತೆಗಳ ಸಮೂಹವನ್ನು ಎದುರಿಸಲು ಎಲ್ಲಾ ತಯಾರಿ ನಡೆಸಿಕೊಂಡಿರುವುದಾಗಿ LWO ತಿಳಿಸಿದೆ. 25 ಡ್ರೋನ್ ಗಳು 60 ವಾಹನ ಚಾಲಿತ ಸಿಂಪರಣಾ ಘಟಕಗಳನ್ನು ಈ ತಿಂಗಳೊಳಗಾಗಿ ಸಿದ್ಧವಾಗಿಟ್ಟುಕೊಳ್ಳುವುದಾಗಿಯೂ ಸಂಸ್ಥೆ ಹೇಳಿದೆ.

   ಮಿಡತೆ ದಾಳಿ; "ತಿನ್ನೋ ಅನ್ನಕ್ಕೆ ಮಣ್ಣಾಕಿ" ಬೆಳೆ ಉಳಿಸಿಕೊಳ್ಳಬಹುದಂತೆ...!

    ಗುತ್ತಿಗೆ ಆಧಾರದ ಮೇಲೆ 175 ಮಂದಿ ಕ್ಷೇತ್ರಾಧಿಕಾರಿಗಳ ನೇಮಕ

   ಗುತ್ತಿಗೆ ಆಧಾರದ ಮೇಲೆ 175 ಮಂದಿ ಕ್ಷೇತ್ರಾಧಿಕಾರಿಗಳ ನೇಮಕ

   ಕೇಂದ್ರ ಸರ್ಕಾರದ Directorate of Plant Protection, Quarantine and Storage - Faridabad ಫೋನ್. 0129-2418506 ಸಂಸ್ಥೆಯು ಮರುಭೂಮಿ ಮಿಡತೆಗಳ ನಿಯಂತ್ರಣ ಕಾರ್ಯಕ್ಕೆ ಗುತ್ತಿಗೆ ಆಧಾರದ ಮೇಲೆ 175 ಮಂದಿ ಕ್ಷೇತ್ರಾಧಿಕಾರಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಇದೇ ತಿಂಗಳು 12 ರಂದು ನಡೆವ ಸಂದರ್ಶನದಲ್ಲಿ ಆಯ್ಕೆಯಾಗುವ ಸಿಬ್ಬಂದಿ ಮುಂದಿನ ಮಾರ್ಚ್ 2021 ರವರೆಗೆ ಕೆಲಸ ನಿರ್ವಹಿಸಲಿದ್ದಾರೆ.

    ಮಿಡತೆ ನಿಯಂತ್ರಣಕ್ಕೆ 30 ಮಂದಿ ತಜ್ಞರ ನಿಯೋಜನೆ

   ಮಿಡತೆ ನಿಯಂತ್ರಣಕ್ಕೆ 30 ಮಂದಿ ತಜ್ಞರ ನಿಯೋಜನೆ

   ಬೆಂಗಳೂರು, ಮುಂಬೈ, ದೆಹಲಿ, ಪಾಟ್ನಾ, ಇಂಫಾಲ್, ಕಲ್ಕತ್ತಾ ಸೇರಿದಂತೆ ಅನೇಕ ಪ್ರದೇಶಗಳಿಂದ 30 ಮಂದಿ ತಜ್ಞರನ್ನು ಮಿಡತೆಗಳ ನಿಯಂತ್ರಣಕ್ಕೆ ನಿಯೋಜಿಸಿ ನಿನ್ನೆ ಆದೇಶ ಹೊರಬಿದ್ದಿದೆ.

   ಈ ಎಲ್ಲಾ ತಯಾರಿಗಳನ್ನು ಗಮನಿಸಿದಾಗ "CALM BEFORE THE STORM" ಎಂಬಂತೆ ಮರುಭೂಮಿ ಮಿಡತೆಗಳ ದಾಳಿ ಕೊಂಚ ಶಮನವಾದಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳಿಂದ ಬಹುದೊಡ್ಡ ವಿಪತ್ತು ಕಾದಿದೆ.

   English summary
   The attack of locust is not over. In the next few days, further swarms of locusts will attack India,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more