ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆಗೆ ಬಂತು ಏಷ್ಯಾದ ಅತೀ ದೊಡ್ಡ ಹನಿ ನೀರಾವರಿ ಯೋಜನೆ

By Sachhidananda Acharya
|
Google Oneindia Kannada News

ಬಾಗಲಕೋಟೆ, ಜನವರಿ 31: ಏಷ್ಯಾದಲ್ಲೇ ಅತೀ ದೊಡ್ಡ ಹನಿ ನೀರಾವರಿ ಯೋಜನೆ ಕರ್ನಾಟಕದ ಬಾಗಲಕೋಟೆಯಲ್ಲಿ ಜಾರಿಗೆ ಬರಲಿದೆ. ಇಸ್ರೇಲ್ ಈ ಯೋಜನೆಗೆ ತಾಂತ್ರಿಕ ನೆರವು ನೀಡುತ್ತಿದೆ. ಈ ಯೋಜನೆಗೆ ರಾಮಥಾಲ್ ಯೋಜನೆ ಎಂದು ಹೆಸರಿಡಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಈ ರಾಮಥಾಲ್ ಹನಿ ನೀರಾವರಿ ಯೋಜನೆ ಆರಂಭವಾಗಿದೆ. ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಟರ್ ಲಿ. (MEIL) ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಇಸ್ರೇಲ್ ಸಂಸ್ಥೆ ನೆಟಾಫಿಮ್ ಇದಕ್ಕೆ ತಾಂತ್ರಿಕ ನೆರವು ನೀಡುತ್ತಿದೆ.

ನೀರಾವರಿ ಯೋಜನೆಗೆ 1 ಲಕ್ಷ ಕೋಟಿ: ಬಿಎಸ್ ವೈ ಭರವಸೆನೀರಾವರಿ ಯೋಜನೆಗೆ 1 ಲಕ್ಷ ಕೋಟಿ: ಬಿಎಸ್ ವೈ ಭರವಸೆ

ಕೃಷ್ಣ ಭಾಗ್ಯ ಜಲನಿಗಮ ಲಿಮಿಟೆಡ್ ಅಡಿಯಲ್ಲಿ ಈ ರಾಮಥಾಲ್ ಮರೋಳ ಯೋಜನೆ ಜಾರಿಗೆ ಬರುತ್ತಿದ್ದು ಈ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯ ಹೊಣೆಯನ್ನು ಎಂಇಐಎಲ್ ಗೆ ನೀಡಲಾಗಿದೆ.

12,300 ಎಕರೆಗೆ ನೀರು

12,300 ಎಕರೆಗೆ ನೀರು

ಹನಿ ನೀರಾವರಿಗಾಗಿ 2,150 ಕಿಲೋಮೀಟರ್ ಉದ್ದದ ಪೈಪ್ ಲೈನ್ ಅಳವಡಿಸಲಾಗುತ್ತದೆ. ಈ ಯೋಜನೆಯಿಂದ 12,300 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದ್ದು 6,000 ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

 ಹನಿ ನೀರಾವರಿ ವರದಾನ

ಹನಿ ನೀರಾವರಿ ವರದಾನ

ರಾಮಥಾಲ್ ಮರೋಳ ಭಾಗದಲ್ಲಿ ರೈತರು ಭಾರಿ ನೀರಾವರಿ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಅಂತ್ಯದಲ್ಲಿರುವವರಿಗೆ ಎರಡು ಬೆಳೆಯ ಬದಲು ಒಂದು ಬೆಳೆಯನ್ನೂ ತೆಗೆಯಲು ಸಾಧ್ಯವಾಗುತ್ತಿಲ್ಲ. ಇವರಿಗೆ ಈ ಹನಿ ನೀರಾವರಿ ಯೋಜನೆ ವರದಾನವಾಗಲಿದೆ.

 ಬಳಕೆ ಸುಲಭ

ಬಳಕೆ ಸುಲಭ

ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಎಂಇಐಎಲ್ ಆಂಧ್ರ ಪ್ರದೇಶದಲ್ಲಿ ಆಲಮಟ್ಟಿಯ ಹಿನ್ನೀರನ್ನು ಬಲಸಿಕೊಂಡು ಯಶಸ್ವಿಯಾಗಿ ಪಾಟ್ಟಿಸಂ ಯೋಜನೆಯನ್ನು ಅನುಷ್ಠಾಗೊಳಿಸಿದೆ.

ಈ ಯೋಜನೆಯಲ್ಲಿ ಕೃಷಿಕರ ಜಮೀನಿನಲ್ಲಿ ಸಿಲಿಂಡರ್ ಇಡಲಾಗುತ್ತದೆ. ಈ ಸಿಲಿಂಡರ್ ಮೂಲಕ ಕೃಷಿಕರು ನೀರು ಪಡೆಯಲಿದ್ದಾರೆ. ಈ ಸಿಲಿಂಡರ್ ನಲ್ಲಿರುವ ನೀರಿಗೆ ರಸಗೊಬ್ಬರ, ಕೀಟನಾಶಕಗಳನ್ನು ಮಿಶ್ರಣ ಮಾಡಬಹುದಾಗಿದೆ.

ನೀರಾವರಿ ದುರುಪಯೋಗವನ್ನು ಈ ವ್ಯವಸ್ಥೆ ತಡೆಯಲಿದೆ. ಜತೆಗೆ ಕೃಷ್ಣಾ ಹಿನ್ನೀರಿಗೆ ಹರಿದು ಹೋಗುವ ಕೊಳಚೆ ನೀರನ್ನೂ ಶುದ್ಧೀಕರಣಗೊಳಿಸಲಾಗುತ್ತದೆ.

 ರೈತರಿಗೆ ಲಾಭ

ರೈತರಿಗೆ ಲಾಭ

ಒಟ್ಟಾರೆ ಯೋಜನೆಯಿಂದ ನೀರು, ಗೊಬ್ಬರದ ಮಿತಬಳಕೆಯೊಂದಿಗೆ ರೈತರ ಖರ್ಚು ಕಡಿಮೆಯಾಗಲಿದೆ. ಅಲ್ಲದೆ ಬೆಳೆಗಳ ಪ್ರಮಾಣ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಯೋಜನೆಯನ್ನು ಅನುಷ್ಠಾನಗೊಳಿಸಿ 5 ವರ್ಷಗಳ ಕಾಲ ನಿರ್ವಹಣೆ ಮಾಡಿ ನಂತರ ಯೋಜನೆಯನ್ನು ರೈತರ ಕೈಗೆ ಎಮ್ಇಐಎಲ್ ಹಸ್ತಾಂತರಿಸಲಿದೆ. ಈ ಯೋಜನೆಯ ಪ್ರಯೋಜನ ಪಡೆಯುವ ರೈತರು ಪ್ರತೀ ವರ್ಷ ಎಕರೆಗೆ 1300 ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಒಂದೊಮ್ಮೆ 5 ವರ್ಷದ ನಂತರ ಅಗತ್ಯ ಬಿದ್ದಲ್ಲಿ ಈ ಹಣವನ್ನು ಉಪಯೋಗಿಸಲಾಗುತ್ತದೆ.

English summary
The largest drip irrigation project in Asia, the Ramthal project in Karnataka has been commissioned. The Ramthal Marola project in the Bhagalkot district of Karnataka has been implemented by Krishna Bhagya Jala Nigam Limited. Netafim, an Israeli corporation, has provided technical assistance for this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X