ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಸಿಹಿ ಸುದ್ದಿ ಕೊಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ!

|
Google Oneindia Kannada News

ಬೆಂಗಳೂರು, ಫೆ. 12: ರೈತರು ಬೆಳಯುವ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ನಮ್ಮ ದೇಶದಲ್ಲಿ ಸಾಮಾನ್ಯ ಸಂಗತಿ. ಜೊತೆಗೆ ಮಾರುಕಟ್ಟೆ ಮಾಹಿತಿಯ ಕೊರತೆಯೂ ಕೂಡ ರೈತರನ್ನು ಕಾಡುವ ಸಮಸ್ಯೆ. ಇದೀಗ ಈ ಸಮಸ್ಯೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಪರಿಹಾರ ಕಂಡು ಹಿಡಿದಿದ್ದು, ರೈತರು ತಮ್ಮ ಬೆಳೆಯನ್ನು ಸೂಕ್ತ ಬೆಲೆಗೆ ದೇಶಾದ್ಯಂತ ಮಾರಾಟ ಮಾಡಲು ಅನುಕೂಲ ವಾಗಲಿದೆ. ಈ ಬಗ್ಗೆ ಐಐಹೆಚ್ಆರ್ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಅವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ.

ದೇಶದ ನಾನಾ ಭಾಗಗಳ ಕೃಷಿ ಮಾರುಕಟ್ಟೆಗಳ ರೈತರ ಉತ್ಪನ್ನಗಳ ಬೆಲೆ ಕುರಿತು ಉತ್ಪಾದಕರಿಗೆ ನಿಖರ ಮಾಹಿತಿ ಒದಗಿಸುವ ಅರ್ಕಾ ಯುನೋ ಸೀಡ್ ಪೋರ್ಟಲ್‌ನಲ್ಲಿ ಈಗಾಗಲೇ 2.63 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (ಐಐಹೆಚ್ಆರ್) ನಿರ್ದೇಶಕ ಡಾ. ಎಂ.ಆರ್. ದಿನೇಶ್ ವಿವರಿಸಿದರು. ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೋರ್ಟಲ್ ಜೊತೆಗೆ ಈ ತಿಂಗಳ ಅಂತ್ಯದಲ್ಲಿ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅರ್ಕಾ ವ್ಯಾಪಾರ್ ಆ್ಯಪ್ ಫೆಬ್ರುವರಿ ತಿಂಗಳ ಅಂತ್ಯದೊಳಗೆ ಲಭ್ಯವಾಗಲಿದೆ.

ರೈತರ ಉತ್ಪನ್ನಗಳ ಬೆಲೆ ಕುರಿತು ಉತ್ಪಾದಕರಿಗೆ ನಿಖರ ಮಾಹಿತಿ ಒದಗಿಸಲು ಅರ್ಕಾ ವ್ಯಾಪರ್ ಆ್ಯಪ್‌ನ್ನು ಐಐಹೆಚ್ಆರ್ ಅಭಿವೃದ್ದಿಪಡಿಸಿದ್ದು, ಇದು ಗ್ರಾಹಕರು ಮತ್ತು ಉತ್ಪಾದಕರ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಉತ್ಪದಾಕರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ಈ ಆ್ಯಪ್ ರೂಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯ ಬಹುದಾಗಿದೆ ಎಂದು ದಿನೇಶ್ ತಿಳಿಸಿದರು.

ಮಾಧ್ಯಮಗಳ ಸಹಾಯ

ಮಾಧ್ಯಮಗಳ ಸಹಾಯ

ಕೊವಿಡ್ ಕಾಲಘಟ್ಟದಲ್ಲಿ ನಡೆದ ದೇಶದ ಮೊದಲ ಭೌತಿಕ ಮತ್ತು ಆನ್‌ಲೈನ್ ಮೂಲಕ ನಡೆದ ಬೃಹತ್ ಮೇಳ ಇದಾಗಿದ್ದು, ಒಟ್ಟು 16.3 ಲಕ್ಷ ಮಂದಿ ಭಾಗವಹಿಸಿದ್ದಾರೆ, ಮೇಳಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೇಳದ ಯಶಸ್ವಿಗೆ ಮಾದ್ಯಮದ ಪಾತ್ರ ಮುಖ್ಯವಾಗಿದ್ದು, ರೈತರಿಗೆ ಮೇಳದ ಪೂರ್ಣ ಮಾಹಿತಿಯನ್ನು ಮಾದ್ಯಮ ಒದಗಿಸಿದೆ ಮತ್ತು ಐಐಹೆಚ್ಆರ್ ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳ ಕುರಿತು ರೈತರಿಗೆ ಮೇಳದಲ್ಲಿ ಮಾಹಿತಿಯನ್ನು ಮಾದ್ಯಮ ಸಕಾಲದಲ್ಲಿ ಒದಗಿಸಿದೆ ಎಂದು ದಿನೇಶ್ ಹೇಳಿದರು.

ವರ್ಚುವಲ್ ಮೂಲಕ ನಡೆದ ರೈತರು ಮತ್ತು ವಿಜ್ಞಾನಿಗಳ ಸಂವಾದದಲ್ಲಿ ವಿಜ್ಞಾನಿಗಳು ಆಯಾ ರಾಜ್ಯಗಳ ರೈತರ ಮಾತೃ ಭಾಷೆಯಲ್ಲಿಯೇ ಮಾಹಿತಿ ವಿನಿಮಯ ಮಾಡಿಕೊಂಡಿರುವುದು ಮೇಳದ ವಿಶೇಷವಾಗಿತ್ತು, ಇದರಿಂದ ರೈತರಿಗೆ ಇನ್ನಷ್ಟು ಅನುಕೂಲವಾಯಿತು, ಮೇಳದ ಮೂಲಕ ಒಂದು ಮಿನಿ ಭಾರತವೇ ಸೃಷ್ಟಿಯಾಯಿತು ಎಂದರೇ ಅತಿಶೋಯಕ್ತಿಯಲ್ಲ ಎಂದರು.

ರೈತರನ್ನು ತಲುಪಿದ್ದೇವೆ

ರೈತರನ್ನು ತಲುಪಿದ್ದೇವೆ

ಮೇಳದ ಸಂಘಟನಾ ಹೊಣೆ ಹೊತ್ತಿದ್ದ, ಐಐಹೆಚ್ಆರ್‌ ಮುಖ್ಯ ವಿಜ್ಞಾನಿ, ಡಾ. ಎಂ.ವಿ. ಧನಂಜಯ್ ಮಾತನಾಡಿ, ಮೇಳದಲ್ಲಿ ಒಟ್ಟು 7 ತಂತ್ರಜ್ಞಾನ ವಿನಿಯಮ ಮತ್ತು ಪರವಾನಗಿ ಒಡಂಬಡಿಕೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. ಎರಡು ವಿಧದ ತೋಟಗಾರಿಕೆ ಬೆಳೆಯನ್ನು ಈ ಬಾರಿಯ ಮೇಳದಲ್ಲಿ ಬಿಡುಗಡೆ ಮಾಡಲಾಗಿದೆ. ಒಟ್ಟು 16 ಸರಕಾರಿ ಸಂಸ್ಥೆಗಳು ಈ ಪೈಕಿ 9 ಕೇಂದ್ರ ಸರಕಾರ ಸ್ವಾಮ್ಯ ಹಾಗೂ 6 ರಾಜ್ಯ ಸರಕಾರ ಸ್ವಾಮ್ಯದ ಸಂಸ್ಥೆಗಳು ಮೇಳದಲ್ಲಿ ಕೈಜೋಡಿಸಿದ್ದವು ಎಂದರು.


ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ನಗರ ಮತ್ತು ಪಟ್ಟಣಗಳ ಜನರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದು ವರ್ಚವಲ್ ಮತ್ತು ಭೌದಿಕವಾಗಿ ನಡೆಯಿತು. ಈ ತರಬೇತಿ ಕಾರ್ಯಕ್ರಮಕ್ಕೆ ಬಾರೀ ಬೆಂಬಲ ವ್ಯಕ್ತವಾಗಿದ್ದು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳ ಮೂಲಕ ರೈತರು ವರ್ಚವಲ್ ಮೇಳದಲ್ಲಿ ಭಾಗವಹಿಸಿದ್ದರು. ಈ ಮೂಲಕ ನಾವು ಮೊದಲ ಬಾರಿಗೆ ಹೋಬಳಿ ಮತ್ತು ತಾಲೂಕು ಮಟ್ಟದ ರೈತರನ್ನು ತಲುಪಿದ್ದೇವೆ ಎಂದರು.

ರೈತ ಗುಂಪು ರಚನೆ ಅಗತ್ಯ

ರೈತ ಗುಂಪು ರಚನೆ ಅಗತ್ಯ

ಭಾರತೀಯ ಕೃಷಿ ಸಂಶೋಧನೆ ಪರಿಷತ್ ನ ಉಪ ಮಹಾನಿರ್ದೇಶಕ ಡಾ. ವಿಕ್ರಾಮಾದಿತ್ಯ ಪಾಂಡೆ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರು ಸ್ಥಳೀಯ ರೈತರ ಮನವಲಿಸಬೇಕು, ಇದಕ್ಕಾಗಿ ಅವರು ಗುಂಪುಗಳನ್ನು ರಚಿಸಿಕೊಳ್ಳಬೇಕು. ಮೇಳದಲ್ಲಿ ಪಾಲ್ಗೊಂಡ ರೈತರು ಮತ್ತು ಪ್ರತಿನಿದಿಗಳು, ಇದರ ಪ್ರಯೋಜನವನ್ನು ಜನರಿಗೆ ಮತ್ತು ರೈತರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಅದರಲ್ಲೂ ಮುಖ್ಯವಾಗಿ ಐಐಹೆಚ್ಆರ್ ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳು, ರೋಗ ನಿರೋಧಕ, ಕಟ್ಟಕಡೆಯ ರೈತರಿಗೆ ತಲುಪಬೇಕಾಗಿದೆ ಎಂದು ಪಾಂಡೆ ಅಭಿಪ್ರಾಯಪಟ್ಟರು. ರೈತ ಉತ್ಪಾದನ ಸಂಘಟನೆಗಳು ಮೂಲಕ ಹೆಚ್ಚು ರೈತರನ್ನು ನಾವು ಇಂದಿನ ದಿನಗಳಲ್ಲಿ ತಲುಪಬೇಕಾಗಿದೆ, ಗುಂಪುಗಳನ್ನು ರಚಿಸಿಕೊಳ್ಳುವುದರ ಮೂಲಕ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪಾಂಡೆ ತಿಳಿಸಿದರು.

ರೈತರ ಬೆಳೆಗೆ ಬೆಲೆ ನಿಗದಿ ಅಗತ್ಯ

ರೈತರ ಬೆಳೆಗೆ ಬೆಲೆ ನಿಗದಿ ಅಗತ್ಯ

ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಎಸ್‌.ಆರ್. ವಿಶ್ವನಾಥ್ ಅವರು ಮಾತನಾಡಿ, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗುವಂತಾಗಬೇಕು. ರೈತನಿಗೆ ನ್ಯಾಯವಾದ ಬೆಲೆ ಸಿಗದೆ ಮದ್ಯವರ್ತಿಗಳ ಪಾಲುಗುತ್ತಿದೆ ಎಂದರು. ಪ್ರಧಾನ ಮಂತ್ರಿಗಳು 2022 ರ ವೇಳೆಗೆ ರೈತರ ಆದಾಯ ದ್ವಿಗುಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಇದು ಸಾದ್ಯವಾಗಬೇಕಾದರೆ, ಎಲ್ಲ ಬೆಳೆಗಳಿಗೆ ಅಗತ್ಯ ಬೆಂಬಲ ಬೆಲೆ ಅಗತ್ಯ ನಿಗದಿ ಮಾಡಬೇಕು ಎಂದು ವಿಶ್ವನಾಥ ಆಗ್ರಹಿಸಿದರು.

ಐಐಹೆಚ್ ಆರ್ ಉತ್ತಮ ತಂತ್ರಜ್ಞಾನ ಮತ್ತು ಹೊಸ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿ ಪಡಿಸಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ, ರೋಗ ನಿರೋಧಕ ತಂತ್ರಜ್ಞಾನಗಳು ಮತ್ತು ಹೊಸ ತಳಿಗಳ ಸಂಶೋಧನೆಯಿಂದ ರೈತರು ಕಡಿಮೆ ಉತ್ಪಾದನ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾದ್ಯವಾಗಿದೆ ಎಂದು ವಿಶ್ವನಾಥ್ ಶ್ಲಾಘಿಸಿದರು.

ಸಮಾರಂಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಆರ್. ರಾಜೇಂದ್ರ ಪ್ರಸಾದ್, ಐಐಹೆಚ್ ಆರ್ ಪ್ರಧಾನ ವಿಜ್ಞಾನಿ ಡಾ. ಬಿ. ನಾರಾಯಣ ಸ್ವಾಮಿ, ಬೆಂಗಳೂರಿನ ಕೆವಿಕೆ ಗಳ ಅಟಾರಿ ನಿರ್ದೇಶಕ ವಿ. ವೆಂಕಟಸುಬ್ರಮಣ್ಯನ್, ಐಐಹೆಚ್ಆರ್ ಪ್ರಧಾನ ವಿಜ್ಞಾನಿ ಕೆ.ಕೆ. ಉಪ್ರೇತಿ ಅವರು ಉಪಸ್ಥಿತರಿದ್ದರು.

English summary
Indian Institute of Horticultural Research (IIHR) Director Dr M R Dinesh today said as many as 2.63 crore users have already downloaded Arka Vyapara app and would be available on Google Play Store by month-end. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X