• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳದಿ ಎಲೆ ರೋಗ ನಿಯಂತ್ರಣ ಸಾಧ್ಯ: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್

|

"ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಯ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರೂ.ಗಳಲ್ಲಿ ಕಾರ್ಯಕ್ರಮವನ್ನು ಯೋಜಿಸಲಾಗುವುದು" ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾರ್ಚ್ 8, 2021 ರಂದು ಮಂಡಿಸಿದ 2021-22 ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಾರೆ.

ಅಡಿಕೆ ಬೆಳೆಯಲ್ಲಿ ಹಳದಿ ಎಲೆ ರೋಗ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ಹಳದಿ ಎಲೆ ರೋಗ ಬಂದಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ಅಡಿಕೆ ಹಳದಿ ರೋಗಕ್ಕೆ ಸಂಶೋಧನೆ; ಬಜೆಟ್‌ನಲ್ಲಿ 25 ಕೋಟಿ ರೂ. ಮೀಸಲಿಗೆ ಸಿಎಂ ಭರವಸೆ ಅಡಿಕೆ ಹಳದಿ ರೋಗಕ್ಕೆ ಸಂಶೋಧನೆ; ಬಜೆಟ್‌ನಲ್ಲಿ 25 ಕೋಟಿ ರೂ. ಮೀಸಲಿಗೆ ಸಿಎಂ ಭರವಸೆ

"ಹಳದಿ ಎಲೆ ರೋಗ ಫೈಟೋಪ್ಲಾಸ್ಮಾ (ಮೈಕೋಪ್ಲಾಸ್ಮಾ) ಹೆಸರಿನ ರೋಗಾಣುವಿನಿಂದ ಬರುತ್ತದಾದರೂ, ಈ ರೋಗ ಬರಲು ಅನೇಕ ಕಾರಣಗಳನ್ನು ಗುರುತಿಸಲಾಗಿದೆ. ಮುಖ್ಯವಾಗಿ ತೋಟಗಳ ಅಸಮರ್ಪಕ ನಿರ್ವಹಣೆ, ಪೋಷಕಾಂಶಗಳ ಅಸಮರ್ಪಕ ನಿರ್ವಹಣೆ, ಮಳೆಗಾದಲ್ಲಿ ಹೆಚ್ಚಾದನೀರು ಹೊರಹೋಗಲು ಬಸಿಕಾಲುವೆ ಮಾಡದೆ ಇರುವುದರಿಂದ ರೋಗ ಬರುತ್ತದೆ.''

ಗರಿಗಳ ಬೆಳವಣಿಗೆ ಕುಂಠಿತವಾಗುತ್ತವೆ

ಗರಿಗಳ ಬೆಳವಣಿಗೆ ಕುಂಠಿತವಾಗುತ್ತವೆ

ಮಣ್ಣಿನ ಪಿ.ಎಚ್(ರಸಸಾರತೆ) ಸಮತೋಲನ ಕಾಪಾಡದೇ ಇರುವುದು, ಭೂಮಿಗೆ ಬಿಸಿಲು ತಾಗದೆ ಇರುವುದು, ಕಳೆ ನಿರ್ವಹಣೆಯಲ್ಲಿ ಎಡವುವುದು ಹೀಗೆ ಅನೇಕ ಕಾರಣಗಳಿಂದ ಅಡಿಕೆ ಬೆಳೆಯಲ್ಲಿ ಹಳದಿ ಎಲೆ ರೋಗ ಬರುತ್ತಿದೆ ಎಂದು ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆಗಳ ವಿಜ್ಞಾನಿ ಡಾ.ಎಂ.ನಾರಾಯಣಸ್ವಾಮಿ ಹೇಳುತ್ತಾರೆ.

ಹಳದಿ ಎಲೆ ರೋಗದ ಲಕ್ಷಣಗಳ ಬಗ್ಗೆ ವಿವರಿಸಿದ ನಾರಾಯಣಸ್ವಾಮಿ ಅವರು ‘ ಮರದ ಕಾಂಡದ ಗಾತ್ರ ಕುಗ್ಗುವುದು, ಗರಿಗಳ ಬೆಳವಣಿಗೆ ಕುಂಠಿತವಾಗುತ್ತವೆ ನಂತರ ಹಳದಿಯಾಗಿ ತುದಿಯಿಂದ ಒಣಗುವುದು, ಬೇರು ಭಾಗ ಕೊಳೆಯುವುದು, ಎಲೆಗಳು ಬೆಳೆಯದೆ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಸುಳಿ ಮುರಿದು ಬೀಳುವುದು, ವಿಶೇಷವಾಗಿ ಕಾಯಿ ಬಲಿಯುವ ಸಮಯದಲ್ಲಿ ಗಾತ್ರದಲ್ಲಿ ಏರುಪೇರಾಗುವುದು, ಕಾಯಿಯ ಒಳಗಡೆ ಕಪ್ಪಾಗಿ ಅಂಟಿನಿಂದ ಕೂಡುವುದು ನಂತರ ಕಾಯಿಗಳು ಉದುರಿಹೋಗುವುದು, ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಈ ರೋಗವು ತೋಟದ ನಿರ್ವಹಣೆಯ ಸಮಯದಲ್ಲಿ ಉಂಟಾಗುವ ಭೌತಿಕ ತೊಂದರೆಗಳ ಮುಖಾಂತರ ಮರದಿಂದ ಮರಕ್ಕೆ ಹಬ್ಬುತ್ತದೆ.

ರೋಗಾಣುವಿಗೆ ಚಿಕಿತ್ಸೆ ಕೊಡುವುದರಿಂದ ಸಾಧ್ಯವಿಲ್ಲ

ರೋಗಾಣುವಿಗೆ ಚಿಕಿತ್ಸೆ ಕೊಡುವುದರಿಂದ ಸಾಧ್ಯವಿಲ್ಲ

ಸಂಪಾಜೆ, ಪುತ್ತೂರು, ಸುಳ್ಯ, ಶೃಂಗೇರಿ ಜಯಪುರ, ಬಾಳೆಹೊನ್ನೂರು, ಬಾಳೆಹೊಳೆ, ಮುಂತಾದ ಪ್ರದೇಶಗಳಲ್ಲಿ ಈ ರೋಗವು ಹೆಚ್ಚಿದ್ದು ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ""ಹಳದಿ ರೋಗ ನಿಯಂತ್ರಣ ಮಾಡಲು ಇಡೀ ತೋಟವನ್ನು ಸಮರ್ಪಕವಾಗಿ ನಿರ್ವಹಿಸುವುದರಿಂದ ಮಾತ್ರ ಸಾಧ್ಯ. ಕೇವಲ ಹಳದಿ ಎಲೆ ರೋಗಕ್ಕೆ ನೇರ ಕಾರಣವಾದ ರೋಗಾಣುವಿಗೆ ಚಿಕಿತ್ಸೆ ಕೊಡುವುದರಿಂದ ಸಾಧ್ಯವಿಲ್ಲ'' ಎಂಬುದು ತಜ್ಞರ ಅಭಿಮತ.

ಪ್ರತಿಯೊಂದು ಮರದ ಬುಡಕ್ಕೆ ಸುರಿಯುವುದು

ಪ್ರತಿಯೊಂದು ಮರದ ಬುಡಕ್ಕೆ ಸುರಿಯುವುದು

ಅಡಿಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಣೆಗಾಗಿ ಪ್ರಧಾನ ಪೋಷಕಾಂಶಗಳ ಜೊತೆಯಲ್ಲಿ ಮಧ್ಯಮ ಹಾಗೂ ಲಘು ಪೋಷಕಾಂಶಗಳ ಮಿಶ್ರಣವಾದ, ಮಲ್ಟಿಪ್ಲೆಕ್ಸ್ ಅರೇಕಾ ಗ್ರೀನ್ 150-200 ಗ್ರಾಂ ಪ್ರತಿ ಮರಕ್ಕೆ ಎರಡು ಬಾರಿ ಕೊಡಬೇಕು. ಜೊತೆಗೆ ಕಾಪರ್ ಆಕ್ಸಿಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ, ಟೆಟ್ರಾಸೈಕ್ಲಿನ್ 500 ಎಂ.ಜಿ ಕ್ಯಾಪ್ಸ್ಯೂಲ್ 1 ಗುಳಿಗೆ ಒಂದು ಲೀಟರ್ ನೀರಿಗೆ ಮಿಶ್ರಣಮಾಡಿ ತಯಾರಿಸಿದ ದ್ರಾವಣವನ್ನು 2-3 ಲೀಟರ್ ಪ್ರತಿಯೊಂದು ಮರದ ಬುಡಕ್ಕೆ ಸುರಿಯುವುದರಿಂದ ರೋಗ ಹರಡುವುದನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು.

ಉತ್ತಮ ಇಳುವರಿ ತೆಗೆಯಲು ಸಾಧ್ಯ

ಉತ್ತಮ ಇಳುವರಿ ತೆಗೆಯಲು ಸಾಧ್ಯ

ಇದೆಲ್ಲದರ ಜೊತೆ ತೋಟಗಳಲ್ಲಿ ಬಸಿಕಾಲುವೆ ಮಾಡಿಕೊಳ್ಳುವುದು, ಕಳೆ ನಿರ್ವಹಣೆ, ಮಣ್ಣಿನ ರಸಸಾರತೆ ಕಾಪಾಡಿಕೊಳ್ಳುವುದು, ಪ್ರಧಾನ ಪೋಷಕಾಂಶಗಳ ಜೊತೆಗೆ ಮಧ್ಯಮ ಹಾಗೂ ಲಘು ಪೋಷಕಾಂಶಗಳ ಸಮರ್ಥ ನಿರ್ವಹಣೆ ಮಾಡಿದಲ್ಲಿ ಹಳದಿ ಎಲೆ ರೋಗವನ್ನು ಪಸರಿಸದಂತೆ ನಿಯಂತ್ರಿಸುವುದು ಅಲ್ಲದೆ ಉತ್ತಮ ಇಳುವರಿ ತೆಗೆಯಲು ಸಾಧ್ಯ ಎಂದು ಡಾ.ಎಂ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ.ಎಂ. ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಬಹುದು +91-99455 67625

English summary
Chief Minister BS Yediyurappa has announced in the budget that the program will be launched at a cost of Rs 25 crore to intensify research on Arecanut disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X