ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ; ಅಡಿಕೆ ಬೆಳೆಗಾರರಿಗೆ ಮಿಡತೆ ಬಗ್ಗೆ ಆತಂಕ ಬೇಡ

|
Google Oneindia Kannada News

ಶಿವಮೊಗ್ಗ, ಜೂನ್ 16 : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಲವು ಗ್ರಾಮಗಳ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು. ತೋಟಗಳಲ್ಲಿ ಮಿಡತೆಯಂತಹ ಕೀಟಗಳು ಕಾಣಿಸಿಕೊಂಡಿದ್ದು, ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿತ್ತು.

Recommended Video

Ramesh Aravind's week days with ramesh is start from June 18th | Oneindia Kannada

ತಾಲೂಕಿನ ಕೆರೋಡಿ ಹಾಗೂ ಸತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡ ಮಿಡತೆಯಿಂದ ಬೆಳೆಗೆ ಹಾನಿಯಾಗುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು

ಮಿಡತೆಗಳ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಜ್ಞ ವೈದ್ಯರ ತಂಡ ತೀರ್ಥಹಳ್ಳಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು

Arecanut Growers Panic After Found Tiger Beetles

ಇದು ಇತ್ತೀಚೆಗೆ ಕಂಡುಬಂದ ಮರುಭೂಮಿ ಮಿಡತೆ ಅಲ್ಲ. ಟೈಗರ್ ಬೀಟಲ್ ಜಾತಿಗೆ ಸೇರಿದ ಹುಳುಗಳಾಗಿದ್ದು ಅಡಿಕೆ ಬೆಳೆಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

 ಕೋಲಾರದಲ್ಲಿ ಎರಡನೇ ಬಾರಿ ಪ್ರತ್ಯಕ್ಷವಾದ ಮಿಡತೆ ದಂಡು ಕೋಲಾರದಲ್ಲಿ ಎರಡನೇ ಬಾರಿ ಪ್ರತ್ಯಕ್ಷವಾದ ಮಿಡತೆ ದಂಡು

ಟೈಗರ್ ಬೀಟಲ್ ಪರಭಕ್ಷಕ ಕೀಟವಾಗಿದ್ದು, ಬೇರೆ ಕೀಟಗಳನ್ನು ತಿಂದು ಬದುಕುತ್ತದೆ. ಇದು ಬೆಳೆಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಅದಕ್ಕಾಗಿ ತೋಟಗಾರಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಕೆ. ನಾಯ್ಕ್ ಮಾರ್ಗದರ್ಶನದಂತೆ ವಿಜ್ಞಾನಿಗಳಾದ ಡಾ. ಎಂ. ರವಿಕುಮಾರ್, ಡಾ. ನಾಗರಾಜಪ್ಪ ಅಡಿವಪ್ಪರ್ ಹಾಗೂ ಡಾ. ಶರಣಬಸಪ್ಪ ದೇಶ್‍ಮುಖ್ ಹಾಗೂ ರೇವತಿ ಮುಂತಾದವರು ಸ್ಥಳ ಪರಿಶೀಲನೆ ನಡೆಸಿದರು.

English summary
Arecanut growers of Thirthahalli taluk of Shivamogga district panic after found tiger beetles. Shivamogga agriculture university staff visited the place. Tiger beetles will not damage the crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X