ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮೂಲಭೂತ ಸೌಕರ್ಯ ನಿಧಿ; ರೈತರಿಗೆ ಪ್ರಯೋಜನಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 16; ಕೃಷಿ ಮೂಲಭೂತ ಸೌಕರ್ಯ ನಿಧಿ (ಎಐಎಫ್ ) ಯೋಜನೆಯ ಅನುಷ್ಠಾನಕ್ಕೆ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆ, ಕೃಷಿ ನವೋದ್ಯಮಿಗಳು, ಜಂಟಿ ಬಾಧ್ಯತಾ ಗುಂಪು, ಮಾರುಕಟ್ಟೆ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದು.

ಭಾರತ ಸರ್ಕಾರ ಹೊಸ ಕೇಂದ್ರ ಪುರಸ್ಕೃತ "ಕೃಷಿ ಮೂಲಭೂತ ಸೌಕರ್ಯ ನಿಧಿಯಡಿಯಲ್ಲಿ ಹಣಕಾಸು ಸೌಲಭ್ಯಗಳು" ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಕೊಯ್ಲೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿಗಳನ್ನು ಸೃಷ್ಟಿಸಲು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯ ಭಾಗಕ್ಕೆ ಸಹಾಯಧನವನ್ನು ಒದಗಿಸುವುದು, ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಶೇ 9ರ ಬಡ್ಡಿಯ ಭಾಗಕ್ಕೆ ಶೇ 3ರ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.

ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?

ನೀಡಲಾಗುವ ಬಡ್ಡಿ ಸಹಾಯಧನದ ಗರಿಷ್ಟ ಮೊತ್ತ ರೂ. 2 ಕೋಟಿ. ಸುಧಾರಿತ ಮಾರುಕಟ್ಟೆ ಸೌಕರ್ಯವನ್ನು ಸೃಷ್ಟಿಸಿ ರೈತರು ಅವರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.

ಗಂಗಾವತಿಯ ನೂತನ ಕೃಷಿ ಮಹಾವಿದ್ಯಾಲಯ ಉದ್ಘಾಟಿಸಿದ ಸಚಿವ ಬಿ.ಸಿ ಪಾಟೀಲ್ಗಂಗಾವತಿಯ ನೂತನ ಕೃಷಿ ಮಹಾವಿದ್ಯಾಲಯ ಉದ್ಘಾಟಿಸಿದ ಸಚಿವ ಬಿ.ಸಿ ಪಾಟೀಲ್

Applications Invited For Loan Under NAIFF

ಗೋದಾಮು, ಸೈಲೋಗಳು, ಪ್ಯಾಕ್ ಹೌಸ್‍ಗಳು, ಜೋಡಣಾ ಘಟಕಗಳು, ವಿಗಂಡಣೆ ಮತ್ತು ಶ್ರೇಣಿಕರಣ ಘಟಕಗಳು, ಶೀಥಲ ಗೃಹಗಳು, ಸಂಗ್ರಹಣಾ ಕೇಂದ್ರಗಳು, ಸಾಮೂಹಿಕ ಅಣಬೆ ಉತ್ಪಾದನ ಚಟುವಟಿಕೆಗಳು, ಸಾವಯವ ಕೃಷಿ ಪರಿಕರಗಳ ಉತ್ಪಾದನ ಘಟಕಗಳು ಮತ್ತು ಜೈವಿಕ ಪ್ರಚೋದಕ ಘಟಕಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು ಮತ್ತು ಸಾಕಾಣಿಕ ಸೌಲಭ್ಯಗಳನ್ನು ಪಡೆಯಬಹುದಾದ ಅರ್ಹ ಯೋಜನೆಗಳಾಗಿರುತ್ತವೆ.

ಬೀದಿಗೆ ಬಿತ್ತು ಅನ್ನದಾತನ ಬದುಕು, ನಾಶವಾದ ಬೆಳೆ ಮೇಲೆ ಉರುಳಾಡಿದ ರೈತ ಬೀದಿಗೆ ಬಿತ್ತು ಅನ್ನದಾತನ ಬದುಕು, ನಾಶವಾದ ಬೆಳೆ ಮೇಲೆ ಉರುಳಾಡಿದ ರೈತ

ಅರ್ಜಿಕೆ ಹೇಗೆ?: ಫಲಾನುಭವಿಯು ತಮ್ಮ ಪ್ರಸ್ತಾವನೆಗೆ ಸಾಲ ಪಡೆಯುವ ಸಂಬಂಧಿತ ಹಣಕಾಸು ಸಂಸ್ಥೆಯೊಂದಿಗೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಹಾಯಧನ ಪಡೆಯಲು ನೋಂದಾಯಿಸಿಕೊಳ್ಳಬೇಕು. ಫಲಾನುಭವಿ/ ಅರ್ಜಿದಾರರು ಅಥವಾ ಸಾಲ ವಿತರಿಸುವ ಹಣಕಾಸು ಸಂಸ್ಥೆಯು ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ಆನ್ ಲೈನ್ ಪೋರ್ಟಲ್ www.agriinfra.dac.gov.in ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಸಂಬಂಧಿತ ಸಾಲ ವಿತರಣಾ ಸಂಸ್ಥೆಗಳು ಅರ್ಹ ಪ್ರಸ್ತಾವನೆಗಳ ಪರಿಶೀಲನೆ ಕೈಗೊಂಡು ಸಾಲ ಮಂಜೂರಾತಿ ನೀಡಿ ಸಾಲ ವಿತರಿಸಲಾಗುತ್ತದೆ. ಸಾಲ ವಿತರಣೆ ನಂತರ ಬಡ್ಡಿ ಸಹಾಯಧನ ಹಾಗೂ ಸಾಲಕ್ಕೆ ಖಾತರಿಯನ್ನು ಕೇಂದ್ರ ಸರ್ಕಾರವು ಸಂಬಂಧಿಸಿದ ಸಾಲ ವಿತರಣಾ ಸಂಸ್ಥೆಗಳಿಗೆ ಒದಗಿಸುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

English summary
Applications invited from farmers for the loan under National Agriculture Infra Financing Facility. Farmers can contact takuk agriculture office for more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X