ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 14ರಿಂದ ರವೆ, ಗೋಧಿ ಹಿಟ್ಟು ರಫ್ತಿನ ಮೇಲೂ ನಿರ್ಬಂಧ : ಕೇಂದ್ರ ಸರ್ಕಾರ ಆದೇಶ

|
Google Oneindia Kannada News

ಕೇಂದ್ರ ಸರ್ಕಾರವು, ಮೈದಾ, ರವೆ ಮತ್ತು ಗೋಧಿ ಹಿಟ್ಟು ಮತ್ತು ಅದರ ಉತ್ಪನ್ನಗಳ ರಫ್ತಿನ ಮೇಲೆ ಆಗಸ್ಟ್ 14ರಿಂದ ನಿರ್ಬಂಧ ವಿಧಿಸಿದೆ. ಈ ಮೊದಲು ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು.

ಕಡಿಮೆ ಗೋಧಿ ಇಳುವರಿ ಮತ್ತು ಸಂಗ್ರಹಣೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡ ಪರಿಣಾಮವಾಗಿ ಮಾರ್ಚ್ ತಿಂಗಳಿನಿಂದ ಗೋಧಿ ಬೆಲೆಗಳಲ್ಲಿ ದೇಶೀಯವಾಗಿ ಏರಿಕೆಯಾಗುತ್ತಿದೆ. ಮತ್ತಷ್ಟು ಬೆಲೆ ಏರಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಅಧಿಕ ಉತ್ಪಾದನೆ: 1.2 ಮಿಲಿಯನ್ ಟನ್ ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿಅಧಿಕ ಉತ್ಪಾದನೆ: 1.2 ಮಿಲಿಯನ್ ಟನ್ ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿ

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್‌ನ ಅಧಿಕೃತ ಆದೇಶದ ಪ್ರಕಾರ, ಮೈದಾ, ರವೆ ಇತ್ಯಾದಿಗಳ ರಫ್ತುಗಳನ್ನು ಗೋಧಿ ರಫ್ತಿನ (ಡಿಜಿಎಫ್‌ಟಿ) ಅಂತರ-ಸಚಿವಾಲಯ ಸಮಿತಿಯ (ಐಎಂಸಿ) ಅನುಮೋದನೆ ಬಾಕಿ ಉಳಿದಿದೆ.

Amid Worlds Wheat Supply Cntre Resricts Export Of Wheat Flour, Suji And Maida

ಡಿಜಿಎಫ್‌ಟಿ ಆದೇಶವು "ಈ ಅಧಿಸೂಚನೆ ಹೊರಡಿಸುವ ಮೊದಲು ಹಡಗಿನಲ್ಲಿ ಲೋಡ್ ಮಾಡಿರುವ ಅಥವಾ ರವಾನೆಯನ್ನು ಹಸ್ತಾಂತರಿಸಿದ ಸಂದರ್ಭಗಳಲ್ಲಿ ಆಗಸ್ಟ್ 8 ರಿಂದ ಆಗಸ್ಟ್ 14 ರ ಅವಧಿಯಲ್ಲಿ ಮೈದಾ, ರವೆ ಸರಕುಗಳನ್ನು ರಫ್ತು ಮಾಡಲು ಅನುಮತಿಸಲಾಗುವುದು" ಎಂದು ಹೇಳಿದೆ.

ಗೋಧಿ ರಫ್ತನ್ನು ನಿರ್ಬಂಧಿಸಿದ್ದ ಕೇಂದ್ರ

ರಫ್ತು ತಪಾಸಣೆ ಕೌನ್ಸಿಲ್ (ಇಐಸಿ) ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿದರೆ ಐಎಂಜಿ ಯಿಂದ ಅಧಿಕೃತಗೊಳಿಸಲಾದ ಎಲ್ಲಾ ಸಾಗಣೆಗಳ ರಫ್ತುಗೆ ಅನುಮತಿ ನೀಡಬೇಕು ಎಂದು ಆದೇಶವು ಹೇಳುತ್ತದೆ. ಸರ್ಕಾರವು ಜುಲೈನಲ್ಲಿ ಗೋಧಿ ಹಿಟ್ಟಿನ ರಫ್ತು ನಿರ್ಬಂಧಿಸಿತು ಮತ್ತು ಮೇ 13 ರಂದು ಅಧಿಕೃತವಾಗಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

Amid Worlds Wheat Supply Cntre Resricts Export Of Wheat Flour, Suji And Maida

ಆಗಸ್ಟ್ 14ರಿಂದ ಹೊಸ ನಿಯಮ ಜಾರಿಗೆ ಬರಲಿದೆ, "ಸರಕುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಗತ್ಯ ವಿಧಾನಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು" ಎಂದು ಡಿಜಿಎಫ್‌ಟಿ ಹೇಳಿದೆ.

ಅಧಿಸೂಚನೆ ಹೊರಡಿಸುವ ಮೊದಲು ಈ ಉತ್ಪನ್ನಗಳು ಹಡಗಿನಲ್ಲಿ ಲೋಡ್ ಆಗಿದ್ದರೆ ಮತ್ತು ಸಾಗಣೆಯನ್ನು ಕಸ್ಟಮ್ಸ್‌ಗೆ ಹಸ್ತಾಂತರಿಸಿದ್ದರೆ ಮತ್ತು ಅದರಲ್ಲಿ ನೋಂದಾಯಿಸಿದ್ದರೆ ಮೈದಾ ಮತ್ತು ರವೆ ರಫ್ತುಗಳನ್ನು ಆಗಸ್ಟ್ 8 ರಿಂದ ಆಗಸ್ಟ್ 14 ರ ನಡುವೆ ಅನುಮತಿಸಲಾಗುವುದು ಎಂದು ಅದು ಹೇಳಿದೆ.

ಭಾರತವು 2021-2022ರಲ್ಲಿ 246.57 ಮಿಲಿಯನ್‌ ಡಾಲರ್ ಮೌಲ್ಯದ ಗೋಧಿ ಹಿಟ್ಟನ್ನು ರಫ್ತು ಮಾಡಿದೆ. ಶಾಖದ ಅಲೆಯ ಪರಿಣಾಮದಿಂದ ಗೋಧಿ ಇಳುವರಿಯಲ್ಲಿ ಕುಸಿತ ಕಾಣಬಹುದು ಎಂಬ ಆತಂಕದ ನಡುವೆ, ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಭಾರತವು ಮೇ ತಿಂಗಳಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿತು.

Recommended Video

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada

English summary
The union government restricted the exports of maida, semolina, and all variants of wheat flour from 14 August. The government restricted the export of wheat flour in July, and officially banned the export of wheat on May 13. Restricted the shipments of plain atta due to problems in the world's wheat supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X