ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ; ರೈತ ಚಳವಳಿ ರಾಜಕೀಯೇತರವಾಗಿರಬೇಕು: ಚುಕ್ಕಿ ನಂಜುಂಡಸ್ವಾಮಿ

|
Google Oneindia Kannada News

ಪ್ರಸ್ತುತ ಕರ್ನಾಟಕದಲ್ಲಿ ರೈತ ಸಂಘಟನೆಗಳನ್ನು ಒಗ್ಗೂಡಿಸುವ ನೆಪದಲ್ಲಿ ಕೆಲವು ರಾಜಕೀಯ ಪಕ್ಷಗಳು ಚಳವಳಿಯ ಅಂಗಳಕ್ಕೆ ಬಂದು ನಿಂತಿವೆ. ಮತ್ತೆ ಕೆಲವು ಪಕ್ಷಗಳು ಹಿಂಬಾಗಿಲಲ್ಲಿ ಕಾದು ಕುಳಿತಿರುವ ಬಗ್ಗೆ ಗುಮಾನಿ ಇದೆ. ರೈತ ಮುಖಂಡರನೇಕರು ಈ ಮೈತ್ರಿಯಿಂದ ರೈತ ಹೋರಾಟಕ್ಕೆ ಶಕ್ತಿ ಬಂದಿದೆ ಎಂದು ನಂಬಿದ್ದಾರೆ. ಅಥವಾ ಅವರನ್ನು ಹಾಗೆ ನಂಬಿಸಲಾಗಿದೆ.

ಹಾಗೆ ನಂಬಿರುವ ನಾಯಕರು ಈ ಮೈತ್ರಿಯ ಹಿಂದಿನ ಅಜೆಂಡಾ ಅರ್ಥವಾಗುವಷ್ಟರಲ್ಲಿ ಕಳೆದು ಹೋಗಿರುತ್ತಾರೆ. So, ಈ ಕಾಲಮಾನದಲ್ಲಿ ರೈತ ನಾಯಕರು ಎಚ್ಚರದ ಹೆಜ್ಜೆಗಳನ್ನಿಡಬೇಕಿದೆ.

ಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿಸಂಘಟಿತ ರೈತ ಚಳವಳಿ ಅನಿವಾರ್ಯ - ರಾಜಕೀಯ ಪಕ್ಷಗಳೊಂದಿಗಿನ ಹೊಂದಾಣಿಕೆ ಅಲ್ಲ- ಕೆ.ಟಿ.ಜಿ

ಹಿಂದೆ ರಾಜ್ಯದಲ್ಲಿ ಚಳವಳಿ ಕಟ್ಟಿ ಬೆಳಿಸಿದ ರೈತ ನೇತಾರ ಪ್ರೊ.ಎಂಡಿಎನ್ ಎಂದಿಗೂ ರಾಜಕೀಯ ಪಕ್ಷಗಳನ್ನು ಚಳವಳಿಯೊಳಗೆ ಬಿಟ್ಟುಕೊಂಡಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದೀಗ ಮಾರ್ಚ್ ಮಾಹೆಯಲ್ಲಿ ಶಿವಮೊಗ್ಗ, ಹಾವೇರಿ ಹಾಗೂ ಬೆಳಗಾವಿ ವಿಭಾಗಗಳಲ್ಲಿ ರಾಜಕೀಯೇತರವಾಗಿ, ಅಂದರೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದಂತೆ ರೈತ ಸಮಾವೇಶ ಏರ್ಪಡಿಸಿರುವ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಅವರನ್ನು ಒನ್ಇಂಡಿಯಾ ಕನ್ನಡ ಸಂದರ್ಶಿಸಿತು.

ದಿಲ್ಲಿಯ ರೈತ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ರೈತ ಸಮಾವೇಶಗಳನ್ನು ಏರ್ಪಡಿಸುತ್ತಿರುವ ನೀವು ಎಲ್ಲಾ ರೈತ ಸಂಘಗಳು/ಬಣಗಳನ್ನು ಆಹ್ವಾನಿಸಿದ್ದೀರಾ? ರಾಜ್ಯದ ಎಲ್ಲಾ ರೈತ ಸಂಘಗಳು/ಬಣಗಳ ಬೆಂಬಲ ಇದೆಯೇ?

ದಿಲ್ಲಿಯ ರೈತ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ರೈತ ಸಮಾವೇಶಗಳನ್ನು ಏರ್ಪಡಿಸುತ್ತಿರುವ ನೀವು ಎಲ್ಲಾ ರೈತ ಸಂಘಗಳು/ಬಣಗಳನ್ನು ಆಹ್ವಾನಿಸಿದ್ದೀರಾ? ರಾಜ್ಯದ ಎಲ್ಲಾ ರೈತ ಸಂಘಗಳು/ಬಣಗಳ ಬೆಂಬಲ ಇದೆಯೇ?

ಚುಕ್ಕಿ ನಂಜುಂಡಸ್ವಾಮಿ: ಹೌದು. ಎಲ್ಲಾ ರೈತ ಸಂಘಟನೆಗಳು, ಬಣಗಳು ಮತ್ತು ಈಗೇನು ಹೊಸದಾಗಿ ಐಕ್ಯ ಹೋರಾಟ ಮತ್ತು ಸಂಯುಕ್ತ ಹೋರಾಟ ಅಂತಾ ಆಗಿದೆ ಎಲ್ಲರಿಗೂ ಮುಕ್ತ ಆಹ್ವಾನ ಕೊಟ್ಟಿದ್ದೇವೆ. ತುಂಬಾ ಪಾರದರ್ಶಕವಾಗಿ ಮತ್ತು ನೇರವಾಗಿ ಹೇಳಿದ್ದೀವಿ. ಎಲ್ಲರಿಗೂ ಆಹ್ವಾನ ಇದೆ, ಯಾವುದೇ ಷರತ್ತುಗಳಿಲ್ಲದೆ ಆಹ್ವಾನ ಕೊಟ್ಟಿದ್ದೇವೆ. ಎಲ್ಲ ಬಣಗಳಿಗೂ, ಬಣಗಳ ನಾಯಕರಿಗೂ ಕೂಡಾ. ಬಡಗಲಪುರ ನಾಗೇಂದ್ರ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಇಬ್ಬರಿಗೂ ಮುಂಚಿನಿಂದ ಮಾತನಾಡುತ್ತಾ ಬಂದಿದ್ದೀವಿ.

ಇನ್ನು ನೀವು ಎಲ್ಲರ ಬೆಂಬಲ ಇದೆಯೇ ಎಂಬ ಪ್ರಶ್ನೆ ಕೇಳಿದ್ದೀರಿ. ರೈತ ಚಳುವಳಿಯನ್ನು ಕಟ್ಟೋ ದಿಕ್ಕಿನಲ್ಲಿ ಹೊರಟಿರುವ ಎಲ್ಲರೂ ಇದಕ್ಕೆ ಕೈಜೋಡಿಸುತ್ತಾರೆಂದು ನಂಬಿದ್ದೇವೆ? ಚಳುವಳಿ ಬಿಟ್ಟು ಬೇರೆ ಅಜೆಂಡಾ ಇಟ್ಟುಕೊಂಡಿರುವವರ ಬಗ್ಗೆ ಮಾತನಾಡುವುದಕ್ಕೆ ನಮಗೇನೂ ಉಳಿದಿಲ್ಲ. ಒಟ್ಟಾರೆ ನಾವು ಕೃಷಿಯ ಬಿಕ್ಕಟ್ಟು ಮತ್ತು ಚಳುವಳಿಯ ಹಿತದೃಷ್ಠಿಯನ್ನಷ್ಟೇ ನೋಡ್ಬೇಕಾಗುತ್ತೆ.

ರೈತ ಹೋರಾಟಗಾರರು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸುವ ಅನಿವಾರ್ಯತೆ ಅಥವಾ ಅಗತ್ಯತೆ ಇದೆ ಎಂದು ನಿಮಗನಿಸುತ್ತಿದೆಯೇ?

ರೈತ ಹೋರಾಟಗಾರರು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸುವ ಅನಿವಾರ್ಯತೆ ಅಥವಾ ಅಗತ್ಯತೆ ಇದೆ ಎಂದು ನಿಮಗನಿಸುತ್ತಿದೆಯೇ?

ಚುಕ್ಕಿ ನಂಜುಂಡಸ್ವಾಮಿ: ಖಂಡಿತಾ ಕೈಜೋಡಿಸಬಾರದು. ಯಾಕೆ ಅಂದರೆ ಇವತ್ತಿನ ಯಾವುದೇ ರಾಜಕೀಯ ಪಕ್ಷಗಳಿಗೆ ಒಂದು ಐಡಿಯಾಲಜಿ ಅಂಥಾ ಇಲ್ಲ. ಕೃಷಿ ಕ್ಷೇತ್ರದ ಎಲ್ಲಾ ಸಮಸ್ಯೆಗಳು ಶುರುವಾಗಿದ್ದು ಪಿ.ವಿ.ನರಸಿಂಹರಾಯರ ಕಾಲದಲ್ಲಿ. ಪ್ರಸ್ತುತ ಸಮಸ್ಯೆ ಅದರ ಮುಂದುವರಿಕೆ ಅಷ್ಟೇನೆ. ಹಾಗಾಗಿ ನಾವು ಬಿಜಿಪಿ ವಿರುದ್ಧ ಎಂದೋ ಅಥವಾ ಕಾಂಗ್ರೆಸ್ ಪರ ಅನ್ನೋ ಪ್ರಶ್ನೆ ಬರೋದೇ ಇಲ್ಲಾ ಇಲ್ಲಿ. ಇದು ಸಂಪೂರ್ಣವಾಗಿ ಜನ ಚಳುವಳಿಯಾಗಿಯೇ ಉಳೀಬೇಕು, ಬೆಳೀಬೇಕು. ರಾಜಕೀಯ ಪಕ್ಷಗಳು ಬಂದು ಇದನ್ನು ಹೈಜಾಕ್ ಮಾಡುವ ಚಾನ್ಸಸ್ ಇರುತ್ತದೆ.

ಉತ್ತರ ಭಾರತದಲ್ಲಿ ನಡೀತಿರುವ ಚಳುವಳಿಯಲ್ಲಿ ಈಗ ರಾಜಕೀಯ ಪಕ್ಷಗಳನ್ನು ದೂರ ಇಡಲಾಗಿದೆ. ಹಿಂದೆ ರಾಜ್ಯದ ರೈತ ಚಳುವಳಿಯೂ ಎಂದಿಗೂ ರಾಜಕೀಯ ಪಕ್ಷಗಳನ್ನು ಹತ್ತಿರ ಸೇರಿಸಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ದಿಲ್ಲಿಯಲ್ಲಿ ನೋಡಿ., ಏನು ರೈತ ಪರ ಪಕ್ಷ ಅಂತಾ ಬಿಂಬಿತವಾಗಿರೋ 'ಲೋಕದಳ'ಕ್ಕೂ ಕೂಡಾ ಅಲ್ಲಿ ವೇದಿಕೆ ಕೊಡ್ತಾ ಇಲ್ಲಾ, ಅವರದೇ ಆದಂತ ಪ್ರತ್ಯೇಕ 'ಮಹಾ ಪಂಚಾಯತ್' ಗಳನ್ನು ಮಾಡ್ತಾರೆ.

ಅಜಿತ್ ಸಿಂಗ್ ಅವರ ಮಗ ಜಯಂತ್ ಸಿಂಗ್ ಇದ್ದಾರಲ್ಲಾ, ಅವರು ನಾವು ಅಲ್ಲಿಗೆ ಹೋದಂತಹ ಸಂದರ್ಭದಲ್ಲಿ ಬಿಜನೂರು ಮಹಾ ಪಂಚಾಯತ್ ಗೆ ಬಂದಿದ್ದರು. ಅಲ್ಲೂ ಅವರಿಗೆ ವೇದಿಕೆ ಹತ್ತಲಿಕ್ಕೆ ಅವಕಾಶ ಕೂಡಲಿಲ್ಲ. ವಿರೋಧದ ನಡುವೆ ಅವರು ವೇದಿಕೆಗೆ ಬಂದರು ಅನ್ನಿ. ಅದು ಜನಕ್ಕೆ ಅರ್ಥ ಆಗುತ್ತೆ.

ಇಲ್ಲಿ ನಾನೇನು ಹೇಳಲಿಕ್ಕೆ ಇಚ್ಛೆ ಪಡ್ತೀನಿ ಅಂದ್ರೆ, ಉತ್ತರದ ಚಳುವಳಿ ನಿರತರಿಗೆ ಪಕ್ಷಗಳ ಜೊತೆಗೆ ಹೇಗಿರಬೇಕು ಅನ್ನೋ ವಿಚಾರವಾಗಿ ಎಷ್ಟು ಸ್ಪಷ್ಟತೆ ಇದೆಯೋ ಅದೇ ಸ್ಪಷ್ಟತೆಯನ್ನು ನಾವು ದಕ್ಷಿಣ ಭಾರತದಲ್ಲೂ ಕಾಪಾಡ್ಕೋಬೇಕು. ರಾಜಕೀಯ ಪಕ್ಷಗಳನ್ನು ಬಿಟ್ಟುಕೊಂಡ್ರೆ ಅದು ಚಳುವಳಿಯನ್ನು ವೀಕ್ ಮಾಡುತ್ತೆ. ಯಾವುದೋ ಒಂದು ರಾಜಕೀಯ ಪಕ್ಷ ಚಳುವಳಿ ಹಿಂದೆ ಇದೆ ಅಂದ ತಕ್ಷಣ ಇಡೀ ಚಳುವಳಿಗೆ ಒಂದು ದೊಡ್ಡ ಪೆಟ್ಟು ಅದು. ಹಾಗಾಗಿ ಪಕ್ಷಗಳ ನಡುವೆ ಸ್ಪಷ್ಟವಾಗಿ Distance ಕಾಪಾಡ್ಕೊಳ್ಳೋದು ನಮಗೆಲ್ಲರಿಗೆ ತಿಳಿದಿರಬೇಕು.

ಇದೀಗ ದಿಲ್ಲಿಯ ರೈತ ಹೋರಾಟಕ್ಕೆ ಅನೇಕ ರಾಜಕೀಯ ಪಕ್ಷಗಳು ಹೊರಗಿನಿಂದ ಬೆಂಬಲ ವ್ಯಕ್ತಪಡಿಸಿವೆ? ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಇದೀಗ ದಿಲ್ಲಿಯ ರೈತ ಹೋರಾಟಕ್ಕೆ ಅನೇಕ ರಾಜಕೀಯ ಪಕ್ಷಗಳು ಹೊರಗಿನಿಂದ ಬೆಂಬಲ ವ್ಯಕ್ತಪಡಿಸಿವೆ? ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಚುಕ್ಕಿ ನಂಜುಂಡಸ್ವಾಮಿ: ಬಾಹ್ಯ ಬೆಂಬಲ ಅವರು ವ್ಯಕ್ತಪಡಿಸಲಿ. ಆದರೆ ಚಳುವಳಿ ಒಳಗೆ ಬಂದು ಅವರ ನೇತೃತ್ವದಲ್ಲಿ ಯಾವುದೇ ಚಳುವಳಿ ನಡೀಬಾರದು. ಅವರು ವಿರೋಧ ಪಕ್ಷದ ಕೆಲಸವನ್ನು ಸಂಸತ್ತಿನ ಒಳಗಡೆ ಅಥವಾ ವಿಧಾನ ಸಭೆ ಒಳಗಡೆ ಮಾಡಿದ್ದಿದ್ರೆ ಜನಚಳುವಳಿಗಳಿಗೆ ಇಷ್ಟೊಂದು ಕೆಲಸ ಇರ್ತಿರ್ಲಿಲ್ಲ. ಇಷ್ಟೊಂದು ಹೋರಾಟದ ಅಗತ್ಯ ಬರ್ತಿರ್ಲಿಲ್ಲ. ಹಾಗಾಗಿ ಅವರ ಹೋರಾಟ ಇರೋದು ಸಂಸತ್ ಮತ್ತು ವಿಧಾನ ಸಭೆಯ ಒಳಗೆ. ಆ ಕೆಲಸವನ್ನು ಅವರು ಸರಿಯಾಗಿ ಮಾಡ್ದೆ ಇಲ್ಲೇನು ಮಾಡೋಕೆ ಬರ್ತಾರೆ.

ಸಂಘಟಿತ ರೈತ ಹೋರಾಟಕ್ಕೆ ನಿಮ್ಮ ಅಭಿಪ್ರಾಯವೇನು? ಎಲ್ಲಾ ರೈತ ಹೋರಾಟಗಾರರೂ ಒಟ್ಟು ಸೇರಲು ಇರಬಹುದಾದ ತೊಡಕುಗಳೇನು? ಮತ್ತದಕ್ಕೆ ಪರಿಹಾರ ಯೋಚಿಸಿದ್ದಾರಾ?

ಸಂಘಟಿತ ರೈತ ಹೋರಾಟಕ್ಕೆ ನಿಮ್ಮ ಅಭಿಪ್ರಾಯವೇನು? ಎಲ್ಲಾ ರೈತ ಹೋರಾಟಗಾರರೂ ಒಟ್ಟು ಸೇರಲು ಇರಬಹುದಾದ ತೊಡಕುಗಳೇನು? ಮತ್ತದಕ್ಕೆ ಪರಿಹಾರ ಯೋಚಿಸಿದ್ದಾರಾ?

ಚುಕ್ಕಿ ನಂಜುಂಡಸ್ವಾಮಿ: ಸಂಘಟಿತ ಹೋರಾಟ ಅಗ್ಲೇಬೇಕು, ಸಂದರ್ಭ ಹಾಗಿದೆ. ಕೃಷಿ ಬಿಕ್ಕಟ್ಟಿನಿಂದಾಗಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೂರು ಮುಕ್ಕಾಲು ಲಕ್ಷ ಜನರ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಸ್ತವವಾಗಿ ಅದರ ಹತ್ತುಪಟ್ಟು ಇದ್ದರೆ ನಿಮಗೆ ಆಶ್ಚರ್ಯ ಬೇಡ.

ಯಾವುದೂ ನಮ್ಮ ಕೈಯಲ್ಲಿಲ್ಲ. ಕೃಷಿ ಅಂದಮೇಲೆ ಎಲ್ಲವೂ ನಮ್ಮ ಕೈಯಲ್ಲೇ ಇರಬೇಕಿತ್ತು. ಉತ್ಪಾದಕರು ಅಂದ ಮೇಲೆ ಎಲ್ಲ ಸಂಪನ್ಮೂಲಗಳು ನಮ್ಮ ಕೈಯಲ್ಲಿರಬೇಕಿತ್ತು. ಆದ್ರೆ ಇವತ್ತು ತುಂಡು ಭೂಮಿ ಬಿಟ್ಟು ಬೇರೇನೂ ನಮ್ಮ ಕೈಯಲ್ಲಿಲ್ಲ. ಈಗ ತುಂಡು ಭೂಮಿಯನ್ನೂ ಕಿತ್ಕೊಳೋ ಹುನ್ನಾರ ನಡೀತಿದೆ. ಹಾಗಾಗಿ ಸಂಘಟಿತ ರೈತ ಹೋರಾಟ ಒಂದೇ ಇದಕ್ಕೆ ಉತ್ತರ. ಪ್ರಸ್ತುತ ಸಂದರ್ಭ ಕೂಡಾ ಸಂಘಟಿತ ರೈತ ಹೋರಾಟ ಮಾತ್ರ ಇದಕ್ಕೆ ಉತ್ತರ ಅನ್ನೋದನ್ನು ಎತ್ತಿ ತೋರಿಸ್ತಿದೆ.

ಎಲ್ಲಾ ರೈತ ಹೋರಾಟಗಾರರು ಒಟ್ಟು ಸೇರಲು ಇರಬಹುದಾದ ತೊಡಕುಗಳ ಬಗ್ಗೆ ಕೇಳಿದ್ದೀರಿ. ಇದಕ್ಕೆ ಮುಖ್ಯವಾದ ಕಾರಣಗಳು ವೈಚಾರಿಕ ಅಸ್ಪಷ್ಟತೆ, ಸ್ವಾರ್ಥ ಮತ್ತು ನಾಯಕತ್ವದ ಕಾಯಿಲೆ. ಈ ಮೂರೂ ಇಲ್ಲಾ ಅಂದರೆ ಮತ್ತು ಎಲ್ಲಾ ರೈತ ಹೋರಾಟಗಾರರು ಬರೀ ರೈತ ಕುಲದ ಒಳಿತಿಗೆ ನಾವು ಕೆಲ್ಸಾ ಮಾಡ್ತೀವಿ ಅನ್ನೋದಾದರೆ ನಾವು ಒಟ್ಟಾಗೋದಕ್ಕೆ ಯಾವುದೇ ತೊಡಕಿಲ್ಲ. ಯಾವಾಗ ಅಧಿಕಾರ, ಸ್ವಾರ್ಥ, ನಾಯಕತ್ವದ ಕಾಯಿಲೆ ಬರುತ್ತೋ ಒಟ್ಟಾಗೋದಿಕ್ಕೆ ಸಮಸ್ಯೆಗಳು ಬರುತ್ತೆ. ಅದಕ್ಕೋಸ್ಕರ ಇದಕ್ಕೆ ಉತ್ತರ ಏನಪ್ಪ ಅಂದ್ರೆ ಸಾಮೂಹಿಕ ನಾಯಕತ್ವ. ಇದು ನಲವತ್ತು ವರ್ಷಗಳ ರೈತ ಚಳುವಳಿ ಹೇಳಿಕೊಟ್ಟಿರುವ ಪಾಠ ನಮಗೆ.

 ಸಾಮೂಹಿಕ ನಾಯಕತ್ವ ಅಂದ್ರೆ ಏನು, ಅದು ಹೇಗಿರಬೇಕು ? ವಿವರಿಸಿ?

ಸಾಮೂಹಿಕ ನಾಯಕತ್ವ ಅಂದ್ರೆ ಏನು, ಅದು ಹೇಗಿರಬೇಕು ? ವಿವರಿಸಿ?

ಚುಕ್ಕಿ ನಂಜುಂಡಸ್ವಾಮಿ: ಸಾಮೂಹಿಕ ನಾಯಕತ್ವ ಅಂದ್ರೆ, ಯಾವುದೇ ಶ್ರೇಣೀಕೃತ ವ್ಯವಸ್ಥೆ ಇಲ್ಲದೇನೇ, ಅಧ್ಯಕ್ಷ, ಕಾರ್ಯದರ್ಶಿ ಕಾರ್ಯಾಧ್ಯಕ್ಷ ಇಂಥ ಅಂಗ ರಚನೆಯಿಂದ ಆಚೆ ಬಂದು ಎಲ್ಲರೂ ಸಮಾನವಾಗಿ ಸಮಿತಿಯನ್ನು ರಚಿಸುವುದರ ಮೂಲಕವೂ ಅಥವಾ ಸಮಾನವಾದ ಜವಾಬ್ದಾರಿಗಳನ್ನು ಹೊರುವ ಕೆಲಸ ಆಗಬೇಕು. ಅಂಥದೊಂದು ಸಂದರ್ಭ ಯಾವಾಗ ಬರುತ್ತಾಪ್ಪಾ ಅಂದ್ರೆ ರೈತರ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿದ್ದಾಗ ಮಾತ್ರ. ನಮ್ಮ ಎಲ್ಲ ಗಮನ ಸಮಸ್ಯೆಗಳ ಪರಿಹಾರದ ಬಗ್ಗೆ ಇರುತ್ತೆ ಮತ್ತು ಸಮಸ್ಯೆ ಪರಿಹಾರಕ್ಕೆ ಹೋರಾಟ ಕಟ್ಟುವ ಬಗ್ಗೆ ಇರುತ್ತೆ. ಹಾಗಾದಾಗ ಕುರ್ಚಿ, ಪದವಿ ಎಲ್ಲವೂ ಗೌಣ ಆಗುತ್ತದೆ. ಅದನ್ನೇ ನಾವು ಸಾಮೂಹಿಕ ನಾಯಕತ್ವ ಅಂಥಾ ಕರಿಯೋದು. ಇದು ಅತ್ಯಂತ ಪರಿಣಾಮಕಾರಿ ಕಾರ್ಯವೈಖರಿ ಆಗುತ್ತೆ.

ನಲವತ್ತು ವರ್ಷಗಳ ರೈತ ಚಳುವಳಿಯ ಅನುಭವದಲ್ಲಿ ನಾವು ಕಂಡದ್ದು ಮತ್ತು ಬೇರೆ ಬೇರೆ ಸಂಘಟನೆಗಳನ್ನು ನೋಡ್ದಾಗ ಅರಿತದ್ದು, ಸಂಘಟನೆಗಳಲ್ಲಿ ಒಡಕು ಬರೋದು ಕುರ್ಚಿಗೋಸ್ಕರ. ಆ ಕುರ್ಚಿ ಇದ್ಯಲ್ಲಾ ಅದು ಮುಖ್ಯ ಆಗೋದು ನಮಗೆ ವೈಚಾರಿಕ ಸ್ಪಷ್ಟತೆ ಇಲ್ಲವಾದಾಗ. ಅಂದ್ರೆ ನಾವು ಗುರಿ ಕಳ್ಕೊಂಡಾಗ ಗುರಿನೇ ಕುರ್ಚಿ ಆಗಿಬಿಡುತ್ತೆ. ಇದು ಇಡೀ ಚಳುವಳಿಯ ದಿಕ್ಕು ತಪ್ಪಿಸುವಂತಾ ಅಪಾಯಕಾರಿ ಕೆಲ್ಸಕ್ಕೆ ನಾಂದಿಯಾಗುತ್ತದೆ. ಹಾಗಾಗಿ ಇದನ್ನು ನಾವು ಮೂಲದಲ್ಲೇ ಚಿವುಟಬೇಕು ಅನ್ನೋದಾದ್ರೆ ನಾವು ಆ ಕುರ್ಚಿನೇ ಇಲ್ದೆ ಇರೋಹಾಗೆ ಮಾಡಬೇಕು. ಸಮಾನವಾಗಿ ನಾವೆಲ್ಲರೂ ಒಟ್ಟಿಗೆ ಕೂತು ಒಟ್ಟಿಗೆ ಕೆಲ್ಸ ಮಾಡುವಂತಹ ಒಂದು ಕಾರ್ಯವೈಖರಿಯನ್ನು ಅಭ್ಯಾಸ ಮಾಡ್ಕೋಬೇಕಾಗುತ್ತದೆ. ಅದನ್ನೇ ಸಾಮೂಹಿಕ ನಾಯಕತ್ವ ಅಂತಾ ಹೇಳೋದು.

ರೈತ ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಿದರೆ ಒಳಿತು ಎಂದು ನಿಮಗೆ ಅನ್ನಿಸುತ್ತೆ?

ರೈತ ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಿದರೆ ಒಳಿತು ಎಂದು ನಿಮಗೆ ಅನ್ನಿಸುತ್ತೆ?

ಚುಕ್ಕಿ ನಂಜುಂಡಸ್ವಾಮಿ: 1995 ರಿಂದೀಚೆಗೆ ಭಾರತದ ಕೃಷಿ ಕ್ಷೇತ್ರ ಒಂದು ಗಂಭೀರವಾದಂತಹ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಅದು ಬರೀ ಆರ್ಥಿಕ ಬಿಕ್ಕಟ್ಟಲ್ಲ. ಬೆಂಬಲ ಬೆಲೆ ಸಿಗ್ತಾ ಇಲ್ಲಾ ಅನ್ನೋದು ಒಂದು ಕಡೆ ಆದ್ರೆ, ಇನ್ನೊಂದು ಕಡೆಯಿಂದ ರೈತನಿಗೆ ಹೊಡೆತ ಬೀಳ್ತಿರೋದು ಅಂತರ್ಜಲದ ಕುಸಿತ ಮತ್ತು ಮಣ್ಣಿನ ಫಲವತ್ತತೆ ನಶಿಸಿರೋದು. ಬಿತ್ತನೆ ಬೀಜಗಳು ನಮ್ಮ ಕೈಯಲ್ಲಿ ಇಲ್ದೆ ಇರೋವಂಥದ್ದು ಮತ್ತು ಈಚೆಗೆ ಶುರುವಾಗಿರುವ ಹವಾಮಾನದ ವೈಪರೀತ್ಯ, ಇವೆಲ್ಲದರ ಒಟ್ಟು ಹೊಡೆತ ಕೃಷಿ ಕ್ಷೇತ್ರದ ಮೇಲೆ ಬೀಳ್ತಿದೆ. ಸಣ್ಣ ಸಣ್ಣ ರೈತರ ಮೇಲೆ ಪರಿಣಾಮ ಆಗ್ತಿದೆ.

ಈಗ ಪ್ರಸ್ತುತ ಮೂರು ಕಾನೂನುಗಳನ್ನು ಹಿಂಪಡೆಯಲು ಹೋರಾಟ ಏನ್ ನಡೀತಿದೆ, ಈ ಹೋರಾಟ ಗೆಲುವು ಕಂಡ ನಂತರ ಮುಂದೇನು ಅನ್ನೋ ಪ್ರಶ್ನೆ ರೈತ ಸಂಘಗಳಿಗೆ ಬರುತ್ತದೆ. ಇಷ್ಟೊತ್ತಿಗಾಗಲೇ ನಮಗೆ ಒಂದು ಸ್ಪಷ್ಟವಾದ ಒಳನೋಟ ಬಂದಿರಬೇಕಿತ್ತು. ಕೃಷಿ ಬಿಕ್ಕಟ್ಟಿನಿಂದ ಹೊರಬರಬೇಕು ಅಂದ್ರೆ ಆರ್ಥಿಕ ಬಿಕ್ಕಟ್ಟು ಅಷ್ಟನ್ನೇ ಅಡ್ರೆಸ್ ಮಾಡೋದಲ್ಲ, ಪರಿಸರ ಪೂರಕ ಕೃಷಿ ಇದ್ಯಲ್ಲಾ ಅದು ಕೇವಲ ಆಯ್ಕೆಯಲ್ಲಾ ಅನಿವಾರ್ಯ ಎಂಬ ಸ್ಪಷ್ಟವಾದ ಗ್ರಹಿಕೆ ಎಲ್ಲಾ ರೈತ ನಾಯಕರಿಗೆ ಬರಬೇಕು.

ಪರಿಸರ ಪೂರಕ ಕೃಷಿ ಅಥವಾ ನೈಸರ್ಗಿಕ ಕೃಷಿ

ಪರಿಸರ ಪೂರಕ ಕೃಷಿ ಅಥವಾ ನೈಸರ್ಗಿಕ ಕೃಷಿ

MSP ಸಿಕ್ಕ ತಕ್ಷಣ ಎಲ್ಲ ಸಮಸ್ಯೆಗಳು ಬಗೆಹರಿಯೋದಿಲ್ಲ. ನಾಳೆ ಬರೋಕಾಲಕ್ಕೆ ಮಳೆ ಬರೋದಿಲ್ಲ. ಯಾವಾಗ ಮಳೆ ಬರಬಾರ್ದೋ ಅಂತಾ ಸಮಯದಲ್ಲಿ ಮಳೆ ಬರುತ್ತೆ. ಅಥವಾ ಬರಗಾಲ ಬೀಳುತ್ತೆ. ಇದಕ್ಕೆಲ್ಲಾ ಉತ್ತರ ರೈತರೇ ಕಂಡ್ಕೋಬೇಕು. ಹಾಗಾಗಿ ರೈತ ಸಂಘಟನೆಗಳು ಪರಿಸರ ಪೂರಕ ಕೃಷಿ ಅಥವಾ ನೈಸರ್ಗಿಕ ಕೃಷಿ ಕಡೆಗೆ ಇಡೀ ರೈತ ಸಮುದಾಯವನ್ನು ತಿರುಗಿಸುವ ಕೆಲ್ಸಕ್ಕೆ ಒಂದು ಪ್ರಮುಖವಾದ ಅಜೆಂಡಾ ಇಟ್ಕೊಂಡು ಚಳುವಳಿ ಕಟ್ಟೋ ಕೆಲ್ಸ ಮಾಡ್ಬೇಕು.

ಯಾಕಂದ್ರೆ ಇವತ್ತು ಉದಾಹರಣೆಗೆ ಪಂಜಾಬ್ ರೈತರು ಈ ಚಳವಳಿಯನ್ನು ಶುರು ಮಾಡಿದೋರು, ನೇತೃತ್ವ ವಹಿಸಿದೋರು. MSP ತೆಗೆದು ಹಾಕಿದ್ರೆ ನೇರ ಹೊಡೆತ ಬೀಳೋದು ಪಂಜಾಬ್ ಮತ್ತು ಹರಿಯಾಣದ ಭತ್ತ ಮತ್ತು ಗೋಧಿ ಬೆಳೆವ ರೈತರಿಗೆ. ಹಾಗಾಗಿ ಅಲ್ಲಿಂದಲೇ ಚಳುವಳಿ ಎದ್ದಿದೆ.

ಆರೋಗ್ಯದ ಮೇಲೆ ದುಷ್ಪರಿಣಾಮ

ಆರೋಗ್ಯದ ಮೇಲೆ ದುಷ್ಪರಿಣಾಮ

ಇನ್ನೊಂದು ವಿಷಯ, ಪಂಜಾಬ್ ಮತ್ತು ಹರಿಯಾಣದಲ್ಲಿ ಅನುಸರಿಸ್ತಿರೋ ಬೇಸಾಯ ಪದ್ಧತಿಗಳಿಂದ ಕೃಷಿ ಕಾರ್ಮಿಕರು ಕ್ಯಾನ್ಸರ್ ಪೀಡಿತರಾಗ್ತಿದ್ದಾರೆ. ಈ ರಸಾಯನಿಕ ಕೃಷಿ ಪದ್ಧತಿಗಳು ಜನರ ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಅನ್ನೋದಕ್ಕೆ ಪಂಜಾಬ್ ದೊಡ್ಡ ಉದಾಹರಣೆ. ಒಂದು ಕ್ಯಾನ್ಸರ್ ಟ್ರೈನ್ ಒಡಾಡುತ್ತೆ ಅಲ್ಲಿ.

ಒಟ್ಟಾರೆ ಈಗ ಪಂಜಾಬ್ ನಿಂದ ಏನು ಚಳುವಳಿ ಎದ್ದಿದೆ ಅದು ಕೇವಲ MSPಗೆ ಅಥವಾ ಈಗ ತಂದಿರುವ ಕಾನೂನಿಗಳಷ್ಟೇ ಸೀಮಿತ ಆಗದೇ, ಒಟ್ಟಾರೆ ಕೃಷಿಯಲ್ಲಿರುವ ತಪ್ಪುಗಳನ್ನು ಸರಿ ಮಾಡುವ ದಿಕ್ಕಿನಲ್ಲಿ ತಗೊಂಡೋಗುವಂತದ್ದೂ ಕೂಡಾ ರೈತ ಚಳುವಳಿಯ ಮುಂದಿನ ದಿಕ್ಕು ಆಗಬೇಕು.

English summary
In March month, a non-political farmer conference will held in Shivamogga, Haveri and Belagavi section wise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X