ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಆರಂಭಕ್ಕೂ ಮುನ್ನ ರೈತರಿಗೆ ಕೃಷಿ ಇಲಾಖೆ ಸಲಹೆಗಳು

|
Google Oneindia Kannada News

ಹಾವೇರಿ, ಮೇ 04 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾದ ಕಡೆ ಭೂಮಿ ಹಸನುಮಾಡಿಕೊಳ್ಳುವ ಕಾರ್ಯ ಆರಂಭವಾಗಿದೆ. ಕೆಲವೆಡೆ ರೈತರು ಬಿತ್ತನೆ ಪ್ರಾರಂಭಿಸಿದ್ದು, ಕೃಷಿ ಇಲಾಖೆ ಮುಂಗಾರು ಬಿತ್ತನೆಯ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.

ಬಿತ್ತನೆ ಭೂಮಿಗೆ ಕೇವಲ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಸಗಣಿ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಇಲಾಖೆಯ ವಿವಿಧ ಯೋಜನೆಗಳಡಿ ಲಭ್ಯವಿರುವ ಜೈವಿಕ ಗೊಬ್ಬರ, ಲಘು ಪೋಷಕಾಂಶಗಳಾದ ಜಿಂಕ್, ಜಿಪ್ಸಂ, ಬೋರಾನ್ ಬಳಲು ಸಲಹೆ ನೀಡಲಾಗಿದೆ.

ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ

"ಇವುಗಳ ಬಳಕೆಯಿಂದಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಕಾಲ ಕಾಲಕ್ಕೆ ಅವಶ್ಯವಿದ್ದರೆ ಮಾತ್ರ ರಾಸಾಯನಿಕಗಳನ್ನು ಬಳಸಬೇಕು" ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ರೈತರಿಗೆ ಕರೆ ನೀಡಿದ್ದಾರೆ.

ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ

ಹಾವೇರಿ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿಗೆ ಒಟ್ಟಾರೆ 3,32,826 ಹೆಕ್ಟೇರ್ ಬಿತ್ತನೆ ಗುರಿ ಇದೆ. ಏಕದಳ 2,07,973 ಹೆಕ್ಟೇರ್, ದ್ವಿದಳ 7,209 ಹೆಕ್ಟೇರ್, ಎಣ್ಣೆಕಾಳು 31,854 ಹೆಕ್ಟೇರ್, ವಾಣಿಜ್ಯ ಬೆಳೆ 85,790 ಹೆಕ್ಟೇರ್ ಬಿತ್ತನೆಯಾಗಲಿದೆ ಎಂದು ಅಂದಾಜಿಸಲಾಗಿದೆ.

 ಎಕರೆಗಟ್ಟಲೆ ಕಲ್ಲಂಗಡಿ ಕಿತ್ತು ಬೇರೆ ಬೆಳೆಯತ್ತ ಚಿತ್ತ ಹರಿಸಿದ ಗುಂಡ್ಲುಪೇಟೆ ರೈತ ಎಕರೆಗಟ್ಟಲೆ ಕಲ್ಲಂಗಡಿ ಕಿತ್ತು ಬೇರೆ ಬೆಳೆಯತ್ತ ಚಿತ್ತ ಹರಿಸಿದ ಗುಂಡ್ಲುಪೇಟೆ ರೈತ

ಹಾವೇರಿಯಲ್ಲಿನ ಪ್ರಮುಖ ಬೆಳೆಗಳು

ಹಾವೇರಿಯಲ್ಲಿನ ಪ್ರಮುಖ ಬೆಳೆಗಳು

ಹಾವೇರಿ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3,32,826 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಗೋವಿನಜೋಳ 1,63,318 ಹೆಕ್ಟೇರ್, ಹತ್ತಿ 77,565 ಹೆಕ್ಟೇರ್, ಭತ್ತ 40235 ಹೆಕ್ಟೇರ್, ಶೇಂಗಾ 19,840 ಹೆಕ್ಟೇರ್ ಹಾಗೂ ಸೋಯಾ ಅವರೆ 11,360 ಹೆಕ್ಟೇರ್ ಪ್ರಮುಖ ಬೆಳೆಗಳಾಗಿರುತ್ತದೆ.

ರಸಗೊಬ್ಬರದ ಕೊರತೆ ಇಲ್ಲ

ರಸಗೊಬ್ಬರದ ಕೊರತೆ ಇಲ್ಲ

2020ರ ಮುಂಗಾರು ಹಂಗಾಮಿನಲ್ಲಿ ಒಟ್ಟು 1,05,858 ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಯೂರಿಯಾ 48200 ಟನ್, ಡಿ.ಎ.ಪಿ 21720 ಟನ್, ಎಂ.ಓ.ಪಿ 4478 ಟನ್, ಕಾಂಪ್ಲೆಕ್ಸ್ 29650 ಟನ್ ಇರುತ್ತದೆ. ಇದರಲ್ಲಿ 31616 ಟನ್ ಸರಬರಾಜ ಆಗಿದ್ದು, 485 ಟನ್ ವಿತರಣೆಯಾಗಿ 31131 ಟನ್ ಉಳಿಕೆಯಾಗಿದೆ. ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಕೃಷಿ ಪರಿಕರಗಳ ಖರೀದಿ

ಕೃಷಿ ಪರಿಕರಗಳ ಖರೀದಿ

ಎಲ್ಲಾ ಪರಿಕರ ಮಾರಾಟಗಾರರು ಕೃಷಿ ಪರಿಕರಗಳನ್ನು ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಮಾರಾಟ ಮಾಡಿದ ಪರಿಕರಗಳಿಗೆ ಕಡ್ಡಾಯವಾಗಿ ರಶೀದಿಯಲ್ಲಿ ಲಾಟ್/ಬ್ಯಾಚ್ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ದರವನ್ನು ನಮೂದಿಸಿ ರಶೀದಿಯನ್ನು ನೀಡಬೇಕು. ಯಾವುದೇ ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ, ಅವಧಿ ಮೀರಿರುವ ಪರಿಕರಗಳನ್ನು ಮಾರಾಟ ಮಾಡುವುದಾಗಲಿ, ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವುದಾಗಲಿ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ರಸಗೊಬ್ಬರಗಳ ಖರೀದಿ

ರಸಗೊಬ್ಬರಗಳ ಖರೀದಿ

ರೈತರು ಅಧಿಕೃತ ಪರವಾನಿಗೆ ಹೊಂದಿದ ಪರಿಕರ ಮಾರಾಟಗಾರರಿಂದ ಮಾತ್ರ ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷದಿಗಳನ್ನು ಖರೀದಿಸಬೇಕು. ಪರಿಕರ ಖರೀದಿಸುವ ಮುನ್ನ ರೈತರು ಬೀಜ ಮತ್ತು ಕೀಟನಾಶಕಗಳ ಲಾಟ್/ಬ್ಯಾಚ್ ಸಂಖ್ಯೆ, ಉತ್ಪಾದನೆಯಾದ ದಿನಾಂಕ, ಅವಧಿ ಕೊನೆಗೊಳ್ಳುವ ದಿನಾಂಕ ಇವುಗಳನ್ನು ಪರಿಶೀಲಿಸಿ ಖರೀದಿಸಬೇಕು. ಬೀಜ ರಸಗೊಬ್ಬರದ ದರಗಳನ್ನು ರೈತರಿಗೆ ಕಾಣುವಂತೆ ದಾಸ್ತಾನು ಮತ್ತು ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಗಿದೆ.

English summary
Agriculture department suggestions for the Haveri farmers ahead of the monsoon season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X