ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮೂರು ದೇಶ ಸುತ್ತಿ ಅತಿಥಿಗಳನ್ನು ಆಹ್ವಾನಿಸಿದ ಬಿ.ಸಿ. ಪಾಟೀಲ್

|
Google Oneindia Kannada News

ಬೆಂಗಳೂರು,ಆ.6: ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಿನ್ನಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರು ಕಳೆದ ಜುಲೈ 26 ರಿಂದ‌ ಆಗಸ್ಟ್ 6 ರವರೆಗಿನ ಜರ್ಮನಿ , ಸ್ವಿಡ್ಜರ್‌ಲ್ಯಾಂಡ್ ಹಾಗೂ ಇಟಲಿ ದೇಶಗಳ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗಿನ ಅಧ್ಯಯನ ಪ್ರವಾಸ ಯಶಸ್ವಿಯಾಗಿ ಪೂರೈಸಿದ್ದಾರೆ.

ನಮ್ಮ ರಾಜ್ಯದ ರೈತರೂ ಸೇರಿದಂತೆ ದೇಶದ ಅನ್ನದಾತರು ಯಾವ ರೀತಿ ತಮ್ಮ ಕೃಷಿ ಚಟುವಟಿಕೆಗಳನ್ನು ಲಾಭಗೊಳಿಸಬಹುದು ಎಂಬುದನ್ನು ತುಲಾನಾತ್ಮಕವಾಗಿ ಅಧ್ಯಯನ ಪ್ರವಾಸದಲ್ಲಿ ಸಚಿವರು ಮನದಟ್ಟು ಮಾಡಿಕೊಂಡಿದ್ದಾರೆ.

ರೈತರಿಗೆ ಹಾಗೂ ರೈತೋದ್ಯಮಿಗಳಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಹಾಗೂ ರೈತರನ್ನು ಕೃಷಿಯತ್ತ ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ "ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ" ರಾಜಧಾನಿ‌ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಬರುವ ನವಂಬರ್ ತಿಂಗಳಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದರಿಂದ, ಜಾಗತಿಕ ಕೃಷಿ ಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ಜಾಗತಿಕ ಕೃಷಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿರುವ ರಫ್ತುದಾರರನ್ನು ಹಾಗೂ ಖಾಸಗಿ ಸಂಸ್ಥೆಗಳ ಮುಖ್ಯಸ್ಥರನ್ನು ಕೃಷಿ ಸಚಿವ ಬಿಸಿ ಪಾಟೀಲ್ ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾರೆ.

 ಸಾವಯವ ಕೃಷಿ ವಿಧಾನದ ಬಗ್ಗೆ ಮಾಹಿತಿ

ಸಾವಯವ ಕೃಷಿ ವಿಧಾನದ ಬಗ್ಗೆ ಮಾಹಿತಿ

ವಿದೇಶ ಪ್ರವಾಸದಲ್ಲಿ ಅಲ್ಲಿನ ಹಾಗೂ ನಮ್ಮ‌ರಾಜ್ಯದ ರೈತರ ಕೃಷಿ ಚಟುವಟಿಕೆಗಳು ಕೃಷಿ ಇಲಾಖೆಯ ಸಾಧನೆಗಳು‌ ಹಾಗೂ ರೈತೋಪಯೋಗಿ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವ ಉದ್ದೇಶವನ್ನೊಳಗೊಂಡ ಸಚಿವ ಬಿ.ಸಿ.ಪಾಟೀಲರು ಅಧ್ಯಯನ‌ ಪ್ರವಾಸದಲ್ಲಿ ಜರ್ಮನಿ ನ್ಯೂರನ್‌ಬರ್ಗ್‌ದಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಸಾವಯವ ಸಮ್ಮೇಳನ ( BIOFAC - 2022 ) ದಲ್ಲಿ ಭಾಗವಹಿಸಿ ವಿವಿಧ ದೇಶಗಳಿಂದ ಭಾಗವಹಿಸಿದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ , ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು.ವಿಶೇಷವಾಗಿ ಶ್ರೀಲಂಕಾ ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಅವರೊಂದಿಗೆ ಶ್ರೀಲಂಕಾ ದೇಶದ ಸಾವಯವ ಕೃಷಿ ಅನುಷ್ಠಾನ ಹಾಗು ಸಾವಯವ ಪದಾರ್ಥಗಳ ರಫ್ತು ಸಾಮರ್ಥ್ಯ ಕುರಿತು ಚರ್ಚಿಸಿದರು. ಜಾಗತಿಕವಾಗಿ Anti Oxidant Blended Coffee ಉತ್ಪಾದಿಸುವ ಸುಪ್ರಸಿದ್ಧ ಸಂಸ್ಥೆಯ ಸಿಇಓ ಆದ ಅಸಂಕ ಡಿಸಿಲ್ವಾ ಅವರೊಂದಿಗೆ ರಾಜ್ಯದ ಸಾವಯವ ಕಾಫಿ ರಪ್ತಿನ ಅವಕಾಶಗಳ ಕುರಿತು ಬಿಸಿ ಪಾಟೀಲ್ ಚರ್ಚಿಸಿದ್ದಾರೆ.

 ಕೃಷಿ ಇಲಾಖೆಯ ಒಡಂಬಡಿಕೆಗೆ ಸಹಿ

ಕೃಷಿ ಇಲಾಖೆಯ ಒಡಂಬಡಿಕೆಗೆ ಸಹಿ

ಜುಲೈ 27 ರಿಂದ 29 ರವರೆಗೆ ಫಲದಾ, ನೇಚರ್ ಬಯೋಫುಡ್ , ಆರ್ಯ ಫುಡ್ಸ್ ಹಾಗೂ IFOAM ನಿರ್ದೇಶಕರೊಂದಿಗೆ ಚರ್ಚೆ, ಜುಲೈ 30 ರಿಂದ ಆಗಸ್ಟ್ 2 ರವರೆಗೆ ಸ್ವಿಡ್ಕರ್‌ಲ್ಯಾಂಡ್ ದೇಶದ ಜ್ಯೂರಿಚ್ ನಗರದ ಫ್ರಿಕ್‌ದಲ್ಲಿರುವ ಅಂತರರಾಷ್ಟ್ರೀಯ ಸಾವಯವ ಸಂಶೋಧನಾ ಸಂಸ್ಥೆ ( FIBL ) ಗೆ ಭೇಟಿ ನೀಡಿ ಅವರು ಭಾರತ ದೇಶದಲ್ಲಿ ಕೈಗೊಂಡಿರುವ ಸಂಶೋಧನಾ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಸಂಸ್ಥೆಯೊಂದಿಗೆ ಕೃಷಿ ಇಲಾಖೆಯಿಂದ ಒಂಡಬಂಡಿಕೆ ಮಾಡಿಕೊಂಡರು.ಅಲ್ಲದೇ ಮ್ಯುನಿಚ್ ನಗರದ ಕನ್ನಡ ಸಂಘದ ಪಧಾದಿಕಾರಿಗಳೊಂದಿಗೆ ಕೃಷಿ ಬಗ್ಗೆ ಕೃಷಿ ಸಚಿವರು ಚರ್ಚಿಸಿದರು.

 ಕರ್ನಾಟಕ ರಾಜ್ಯದ ಸಿರಿಧಾನ್ಯಗಳ ಉತ್ಪಾದನೆ

ಕರ್ನಾಟಕ ರಾಜ್ಯದ ಸಿರಿಧಾನ್ಯಗಳ ಉತ್ಪಾದನೆ

ಇನ್ನು ಆಗಸ್ಟ್ 3ರಿಂದ‌ 5 ರವರೆಗೆ ಇಟಲಿಯ ರೋಮ್ ಹಾಗೂ ಮಿಲಾನ್ ನಗರಗಳಲ್ಲಿರುವ ಜಾಗತಿಕ ಕೃಷಿ ಸಂಸ್ಥೆಗಳ ಹಾಗೂ ಭಾರತ ದೇಶದ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮತ್ತು ಇಟಲಿ ದೇಶದ ವರ್ತಕರು ಹಾಗೂ ಇಟಲಿಯಲ್ಲಿ ನೆಲೆಸಿದ ಭಾರತೀಯ ವರ್ತಕರೊಂದಿಗೆ ಸಭೆಗಳನ್ನು ನಡೆಸಿದರು. ಇಟಲಿ ದೇಶದ ರೋಮ್ ನಗರದಲ್ಲಿ ಜಾಗತಿಕ ಆಹಾರ ಯೋಜನಾ ಸಂಸ್ಥೆಯ ಉಪಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಜುನೇಜಾ ಅವರೊಂದಿಗೆ , ವಿಶ್ವ ಆಹಾರ ಸಂಸ್ಥೆಯ ಮುಖ್ಯ ವಿಜ್ಞಾನಿ ಇಸ್‌ಮಹಾನ ಇಪಿ ಹಾಗೂ ಹಿರಿಯ ಸಲಹೆಗಾರ ಮೋನಾ ಹಾಗೂ ವಿಶ್ವ ಆಹಾರ ಸಂಸ್ಥೆಯ ಉಪಮಹಾ ನಿರ್ದೇಶಕ ಬೇತ್ ಬೆಕಡಾಲ್ ಇವರೊಂದಿಗೆ , ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ ಸಂಸ್ಥೆಯ ಉಪಾಧ್ಯಕ್ಷರಾದ ಡೊಮಿನಿಕ್ ಜಿಲ್ಲರ್ ಮತ್ತು ಭಾರತೀಯ ಕೌನ್ಸಲೇಟ್ ಜನರಲ್ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ- 2023 ನ್ನು ಆಚರಿಸಲು ಕರ್ನಾಟಕ ಸರ್ಕಾರವು ಇಲ್ಲಿಯವರೆಗೆ ರೂಪಿಸಿದ ಕಾರ್ಯಕ್ರಮಗಳ ಕುರಿತು ಪ್ರಸ್ತುತ ಪಡಿಸಿ ಕರ್ನಾಟಕ ರಾಜ್ಯದ ಸಿರಿಧಾನ್ಯಗಳ ಉತ್ಪಾದನೆ ಕುರಿತು ವಿವರಿಸಿದರು.

 ನವಂಬರ್ -2022 ರಲ್ಲಿ ನಡೆಯುವ ಮೇಳ

ನವಂಬರ್ -2022 ರಲ್ಲಿ ನಡೆಯುವ ಮೇಳ

ಬೆಂಗಳೂರಿನಲ್ಲಿ ನವಂಬರ್ -2022 ರಲ್ಲಿ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳಕ್ಕೆ ಜಾಗತಿಕ ಕೃಷಿ ಸಂಸ್ಥೆಯ ಮುಖ್ಯಸ್ಥರನ್ನು ಸಿರಿಧಾನ್ಯ ಮೇಳವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಿದರು. ಅಧ್ಯಯನ‌ ಪ್ರವಾಸದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಅವರು , ರಾಜ್ಯದ ಸಾವಯವ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆನಂದ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಆಡಳಿತ ಮಂಡಳಿಯ ಸದಸ್ಯ ಸುರೇಶ ಮರಗದ ರೈತ ನಿರಂಜನ ಬಾಬು ಹಾಗೂ ಸಚಿವರ ವಿಶೇಷ ಅಧಿಕಾರಿ ಮಂಜು ಎ.ಸಿ ಸಹ ಇದ್ದರು.

English summary
In the background of International Organic and Cereals Fair, Agriculture Minister B.C. Patil has successfully completed a study tour with the officials of the Department of Agriculture of Germany, Sweden and Italy from last July 26 to August 6, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X