ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನ ಈ ಚಹಾ ಬೆಲೆ ಒಂದು ಕೆ.ಜಿ.ಗೆ 1 ಲಕ್ಷ ರುಪಾಯಿ!

|
Google Oneindia Kannada News

ಗುವಾಹಟಿ, ಜೂನ್ 20: ಭಾರತ ಚಹಾ ಪ್ರಿಯರ ದೇಶ, ನೀರು ಬಿಟ್ಟರೆ ದೇಶದಲ್ಲಿ ಹೆಚ್ಚಾಗಿ ಕುಡಿಯುವುದು ಚಹಾವನ್ನು, ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ಕಪ್ ಚಹಾ ಬೆಲೆ 10 ರುಪಾಯಿಯಿಂದ 20 ರುಪಾಯಿವರೆಗೆ ಇದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಇದರ ಬೆಲೆ 100 ರಿಂದ 500 ರೂಗಳ ವರೆಗೆ ಇರಬಹುದು. ಚಹಾ ಪುಡಿ 1000 ರುಪಾಯಿವರೆಗೆ ಇರುತ್ತದೆ, ಆದರೆ ಅಸ್ಸಾಂನ ಟೀ ಎಸ್ಟೇಟ್ ಒಂದು ತಾನು ಉತ್ಪಾದಿಸಿದ ಚಹಾವನ್ನು ದಾಖಲೆ ಬೆಲೆಗೆ ಮಾರಾಟ ಮಾಡಿದೆ.

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಜೋರ್ಹತ್‌ನ ಹರಾಜು ಕೇಂದ್ರದಲ್ಲಿ ಸೋಮವಾರ ಪ್ರತಿ ಕೆ.ಜಿ.ಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದೆ.

ಕಡಿಮೆ ಚಹಾ ಕುಡಿಯಿರಿ, ಹಣ ಉಳಿಸಿ: ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನ ಸರ್ಕಾರದ ಮನವಿಕಡಿಮೆ ಚಹಾ ಕುಡಿಯಿರಿ, ಹಣ ಉಳಿಸಿ: ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನ ಸರ್ಕಾರದ ಮನವಿ

ಇದು ಈ ವರ್ಷದಲ್ಲೇ ಅತಿ ಹೆಚ್ಚು ದಾಖಲೆಗೆ ಮಾರಾಟವಾದ ಚಹಾ ಎನಿಸಿಕೊಂಡಿದೆ. ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ತಿಳಿಸಿದ್ದಾರೆ.

A Rare Variety Of Assam Organic Tea Sold For Rs 1 Lakh Per Kilogram

ಅಪರೂಪದ ಚಹಾ!

ಪಭೋಜನ್ ಗೋಲ್ಡ್ ಟೀ ಹಿತವಾದ ರುಚಿಯೊಂದಿಗೆ ಪ್ರಕಾಶಮಾನವಾದ ಹಳದಿ ಡಿಕಾಕ್ಷನ್ ನೀಡುತ್ತದೆ ಮತ್ತು ಚಹಾ ಎಸ್ಟೇಟ್‌ನಿಂದ ಆಯ್ಕೆ ಮಾಡಿದ ಉತ್ತಮವಾದ ಟೀ ಎಲೆಗಳಿಂದ ತಯಾರಿಸಲಾಗುತ್ತದೆ. ಸುಳಿ ಚಿನ್ನದ ಬಣ್ಣಕ್ಕೆ ತಿರುಗುತ್ತವೆ ಮತ್ತು ಪಾನೀಯಕ್ಕೆ ಬಣ್ಣ ಸೇರಿಸುತ್ತವೆ.

ಎಸಾಹ್ ಟೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಜಿತ್ ಶರ್ಮಾ ಮಾತನಾಡಿ, ಅಸ್ಸಾಂನ ಅತ್ಯುತ್ತಮ ಚಹಾ ಮಿಶ್ರಣಗಳಲ್ಲಿ ಒಂದನ್ನು ತಮ್ಮ ಗ್ರಾಹಕರಿಗೆ ಒದಗಿಸಲು ಚಹಾ ವೈವಿಧ್ಯವು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಕಪ್ಪು ಚಹಾ ಮತ್ತು ಹಾಲಿನ ಚಹಾ ಯಾವ ಚಹಾವನ್ನು ಕುಡಿದರೆ ಉತ್ತಮಕಪ್ಪು ಚಹಾ ಮತ್ತು ಹಾಲಿನ ಚಹಾ ಯಾವ ಚಹಾವನ್ನು ಕುಡಿದರೆ ಉತ್ತಮ

"ಈ ಚಹಾ ವೈವಿಧ್ಯವು ಅಪರೂಪ, ಚಹಾ ಪ್ರಿಯರಿಗೆ, ಇದು ಒಂದು ಕಪ್‌ನಲ್ಲಿನ ಅನುಭವ. ನಮ್ಮ ಗ್ರಾಹಕರು ಪ್ರಪಂಚದಾದ್ಯಂತ ಹರಡಿದ್ದಾರೆ ಮತ್ತು ಈ ವಿಧದ ರುಚಿ ಮತ್ತು ಚಹಾದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಅಧಿಕೃತ ಅಸ್ಸಾಂ ಚಹಾ ಒದಗಿಸುವ ನಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ'' ಎಂದು ಬಿಜಿತ್ ಶರ್ಮಾ ಹೇಳಿದರು.

A Rare Variety Of Assam Organic Tea Sold For Rs 1 Lakh Per Kilogram

ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲೀಕ ರಾಖಿ ದತ್ತಾ ಸೈಕಿಯಾ ಮಾತನಾಡಿ, "ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ ಮತ್ತು ಹೊಸ ದಾಖಲೆ ಬೆಲೆಯಿಂದ ಇತಿಹಾಸ ಸೃಷ್ಠಿಸಿರುವುದಕ್ಕೆ ಸಂತೋಷವಾಗುತ್ತಿದೆ. ಈ ಚಹಾ ಪಡೆದ ಬೆಲೆಯು ಅಸ್ಸಾಂ ಚಹಾ ಉದ್ಯಮವು ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ,'' ಎಂದು ಅವರು ಹೇಳಿದರು.

ಈ ವಿಧದ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾಕ್ಕೆ ವಿವೇಚನಾಶೀಲ ಗ್ರಾಹಕರು, ಚಹಾ ಪ್ರಿಯರು ಮತ್ತು ಖರೀದಿದಾರರಿಂದ ಹೆಚ್ಚಿನ ಬೇಡಿಕೆಯನ್ನು ಅನುಸರಿಸಿ ಈ ವಿಧವನ್ನು ಮೊದಲ ಬಾರಿಗೆ ತಯಾರಿಸಲಾಗಿದೆ ಎಂದು ಸೈಕಿಯಾ ಹೇಳಿದರು.

English summary
A rare variety of organic tea Called Pabhojan Gold Tea from Assam's Golaghat district, was on Monday sold at a whopping Rs. 1 lakh per kilogram, the highest this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X