ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರದಲ್ಲಿ ಅಕಾಲಿಕ ಮಳೆ; 97 ಹೆಕ್ಟೇರ್ ಮಾವು ಫಸಲು ನಷ್ಟ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂ14: ಹಣ್ಣುಗಳ ರಾಜ ಎಂಬ ಖ್ಯಾತಿಯನ್ನು ಪಡೆದಿರುವ ಮಾವಿನ ಬೆಳೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಗೆ ಸುಮಾರು 97 ಹೆಕ್ಟೇರ್ ಮಾವು ಫಸಲು ನಷ್ಟವಾಗಿದೆ.

ಅಲ್ಲದೇ ಈ ಬಾರಿ ಮಾವು ಧಾರಣೆಯ ಭಾರೀ ಕುಸಿತದಿಂದ ಜಿಲ್ಲೆಯ ಮಾವು ಬೆಳೆಗಾರರು ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹೂ ಬಿಟ್ಟು ಕಾಯಿ ಕಚ್ಚಬೇಕಾದ ಮಾವು ತಡವಾಗಿ ಹೂ ಬಿಟ್ಟಿದ್ದು ಮಾವು ಬೆಳೆಗೆ ಮಾರಕವಾಯಿತು.

ಬಿಡದಿ ಕೆರೆ ಸೇರಿದ ಕಾರ್ಖಾನೆ ತ್ಯಾಜ್ಯ; 2 ಟನ್ ಮೀನುಗಳು ಸಾವು ಬಿಡದಿ ಕೆರೆ ಸೇರಿದ ಕಾರ್ಖಾನೆ ತ್ಯಾಜ್ಯ; 2 ಟನ್ ಮೀನುಗಳು ಸಾವು

ನಂತರದಲ್ಲಿ ಮೇ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆ ಮಾವು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡಿತ್ತು. ನಂತರದಲ್ಲಿ ಮಾರುಕಟ್ಟೆಯಲ್ಲಿ ದಿಢೀರ್ ಮಾವು ಧಾರಣೆ ಕುಸಿದು ಮಾವು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಮಾವಿನ ಕೆಲವು ತಳಿಗಳು ವರ್ಷ ಪೂರ್ತಿ ಹೂ ಬಿಡುತ್ತವೆ. ಕೆಲವು ವರ್ಷ ಬಿಟ್ಟು ವರ್ಷ ಉತ್ತಮ ಫಸಲು ನೀಡುತ್ತವೆ. ಆದರೆ ಈ ವರ್ಷ ಹವಾಮಾನ ಬದಲಾವಣೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕಳೆದ ವರ್ಷ ಉತ್ತಮ ಬೆಳೆ ಬಂದರೂ ಲಾಕ್‌ಡೌನ್ ಮತ್ತು ಕೋವಿಡ್‌ನಿಂದಾಗಿ ಬೆಲೆ ಸಿಗಲಿಲ್ಲ. ಈ ಬಾರಿ ತುಸು ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಕೈ ಹಿಡಿಯುವ ಸಾಧ್ಯತೆ ಕಾಣಿಸುತ್ತಿಲ್ಲ.

ಮುಖ್ಯಮಂತ್ರಿಗಳ ಕಚೇರಿ ತಲುಪಿದ ಚನ್ನಪಟ್ಟಣ ಬಹು ಕೋಟಿ ಭೂ ಹಗರಣ ಮುಖ್ಯಮಂತ್ರಿಗಳ ಕಚೇರಿ ತಲುಪಿದ ಚನ್ನಪಟ್ಟಣ ಬಹು ಕೋಟಿ ಭೂ ಹಗರಣ

ಅಕಾಲಿಕ ಮಳೆಗೆ ನೆಲ ಕಚ್ಚಿದ ಮಾವು

ಅಕಾಲಿಕ ಮಳೆಗೆ ನೆಲ ಕಚ್ಚಿದ ಮಾವು

ಜಿಲ್ಲೆಯಲ್ಲಿ ಸುಮಾರು 30 ರಿಂದ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ ಮಾಡುತ್ತಿದ್ದು, ಮಾವು ಬೇಸಾಯವನ್ನೇ ನಂಬಿಕೊಂಡು ಸುಮಾರು 26 ಸಾವಿರ ಮಂದಿ ರೈತರು ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 2 ರಿಂದ 2.5 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಯಾಗುತ್ತಿತ್ತು. ಕಳೆದ ಎರಡು ವರ್ಷಗಳ ಕೋವಿಡ್ ಆರ್ಭಟದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರು ಈ ವರ್ಷ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ.

ಆದರೆ ಈ ವರ್ಷ ಮಾವಿನ ಫಸಲು ತುಂಬಾ ಕಡಿಮೆ ಬಿಟ್ಟಿದ್ದು, ರೈತರು ಕೈಸುಟ್ಟುಕೊಂಡು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಆಲಿಕಲ್ಲು ಮಳೆ ಮತ್ತು ಗಾಳಿಗೆ ಮಾವು ನೆಲಕಚ್ಚುತ್ತಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷರಾದ ನೀಲಟೂರು ಚಿನ್ನಪ್ಪರೆಡ್ಡಿ ಆತಂಕ ವ್ಯಕ್ತಪಡಿಸಿದರು.

80 ಸಾವಿರ ಮೆಟ್ರಿಕ್ ಟನ್ ಮಾವು ಮಾರುಕಟ್ಟೆಗೆ

80 ಸಾವಿರ ಮೆಟ್ರಿಕ್ ಟನ್ ಮಾವು ಮಾರುಕಟ್ಟೆಗೆ

ವಾತಾವರಣದಲ್ಲಿ ಉಂಟಾದ ಏರಿಳಿತದಿಂದ ಈ ವರ್ಷ ವಾಡಿಕೆಗಿಂತ ಶೇ 60% ಕಡಿಮೆ ಮಾವು ಫಸಲನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಬಿದ್ದ ಅಕಾಲಿಕ ಮಳೆ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ತೋಟಗಾರಿಕೆ ಇಲಾಖೆಯ ಅಂಶಗಳಂತೆ ಪ್ರತಿ ವರ್ಷ ಜಿಲ್ಲೆಯಲ್ಲಿ 2 ರಿಂದ 2.5 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪತ್ತಿ ಯಾಗಿತ್ತು.

ಡಿಸೆಂಬರ್‌ನಲ್ಲಿ ಉಂಟಾದ ಶೀತ ವಾತಾವರಣ ದಿಂದ ಮಾವಿನ ಫಸಲು 1 ರಿಂದ 1.5 ಲಕ್ಷ ಮೆಟ್ರಿಕ್ ಟನ್ ಬರಬಹುದು ಎಂದು ಅಂದಾಜಿಸಲಾಗುತ್ತು. ಆದರೆ ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೇವಲ 80 ಸಾವಿರ ಮೆಟ್ರಿಕ್ ಟನ್ ಗಳಷ್ಟು ಮಾವು ಮಾರುಕಟ್ಟೆಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದರಲ್ಲೂ ಮಳೆಯ ಕಾಟದ ನಂತರದಲ್ಲಿ ಮರದಲ್ಲಿ ಉಳಿದ ಮಾವಿನ ಕಾಯಿಯಲ್ಲಿ ಕಪ್ಪು ಶಿಲೀಂಧ್ರಗಳು ಉತ್ಪತ್ತಿಯಾಗಿದೆ. ಕಪ್ಪು ಶಿಲೀಂಧ್ರದ ಹಾವಳಿಯಿಂದ ಮಾವಿನ ಕಾಯಿ ತೊಟ್ಟಿನ ಸುತ್ತಾ ಕಪ್ಪಾಗಿ ಕಾಯಿ ಮರದಿಂದ ಉದಿರಿವೆ. ಕಪ್ಪು ಶಿಲೀಂಧ್ರಕ್ಕೆ ಸಿಲುಕಿದ ಮಾವಿನ ಕಾಯಿಗಳು ಹಣ್ಣು ಆಗುವುದಿಲ್ಲ ಕೊಳೆತು ಹೋಗುತ್ತಿವೆ ಎಂದು ರೈತರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

ಉತ್ತಮ ಆದಾಯದ ರೈತರ ನಿರೀಕ್ಷೆ ಹುಸಿ

ಉತ್ತಮ ಆದಾಯದ ರೈತರ ನಿರೀಕ್ಷೆ ಹುಸಿ

ಕರ್ನಾಟಕದಲ್ಲಿ ಅವಧಿಗೂ ಮೊದಲೇ ಮಾರುಕಟ್ಟೆ ಪ್ರವೇಶ ಮಾಡುವ ಮಾವು ಎಂಬ ಹೆಗ್ಗಳಿಕೆ ರಾಮನಗರ ಜಿಲ್ಲೆಯ ಮಾವಿನ ಹಣ್ಣಿಗಿದೆ. ಆದರೆ ಈ ಬಾರಿಯ ಶೀತ ವಾತವರಣ ಹಾಗೂ ದಟ್ಟ ಮಂಜಿನಿಂದ ಮಾವು ಇಳುವರಿ ಕುಂಠಿತವಾಗುವ ಆತಂಕ ಮೂಡಿದೆ. ವರ್ಷಾಂತ್ಯದ ತನಕ ಸತತ ಸುರಿದ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದರೆ, ಈಗ ಇಬ್ಬನಿಯ ಪ್ರಭಾವದಿಂದ ಮರಗಳು ಮತ್ತಷ್ಟು ಶೀತಕ್ಕೆ ಸಿಲುಕಿ ಹೂ ಬಿಡುವ ಪ್ರಕ್ರಿಯೆ ಒಂದು ತಿಂಗಳು ತಡವಾಗಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲೆಯಲ್ಲಿ ಸುಮಾರು 33 ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ ಮಾಡುತ್ತಿದ್ದು, ಮಾವು ಬೇಸಾಯವನ್ನೇ ನಂಬಿಕೊಂಡು ಸುಮಾರು 30 ಸಾವಿರ ಮಂದಿ ರೈತರು ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 1.5 ರಿಂದ 1.8 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿದೆ. ಕಳೆದ ಎರಡು ವರ್ಷಗಳ ಕೊರೋನಾ ಆರ್ಭಟದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರು ಈಗ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾದಂತೆ ಕಾಣುತ್ತಿದೆ.

ರಾಜ್ಯಕ್ಕೆ ರೇಷ್ಮೆ ನಗರಿ ಎಂದೇ ರಾಮನಗರ ಪ್ರಖ್ಯಾತಿ

ರಾಜ್ಯಕ್ಕೆ ರೇಷ್ಮೆ ನಗರಿ ಎಂದೇ ರಾಮನಗರ ಪ್ರಖ್ಯಾತಿ

‌‌ಪ್ರತಿ ವರ್ಷ ಏಪ್ರಿಲ್‌ ಹೊತ್ತಿಗೆ ರಾಮನಗರ ಮಾವು ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಆದರೆ, ಡಿಸೆಂಬರ್‌ 2ನೇ ವಾರದವರೆಗೂ ಸುರಿದ ಮಳೆಯಿಂದಾಗಿ ಹೂ ಬಿಡುವುದು ತಡವಾಗಿದೆ. ಈ ಬಾರಿ ಉತ್ತಮ ಫಸಲು ನಿರೀಕ್ಷೆ ಇದ್ದು, ಮೇ ಅಂತ್ಯದ ವೇಳೆಗೆ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶ ಮಾಡಲಿದೆ.

ರಾಮನಗರ ಜಿಲ್ಲೆಯು ರಾಜ್ಯಕ್ಕೆ ರೇಷ್ಮೆ ನಗರಿ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಯಷ್ಟೇ ರೇಷ್ಮೆ ಇಲಾಖೆಯು ಪ್ರಮುಖ ಪಾತ್ರವಹಿಸುತ್ತದೆ. ಈ ಸಿಲ್ಕ್ ನಾಡಿನಲ್ಲಿ ರೇಷ್ಮೆಯು ಪ್ರಮುಖ ಬೆಳೆಯಾಗಿ ಪರಿಗಣಿಸಲಾಗಿದೆ. ಇಲ್ಲಿ ಉತ್ಪಾದಿಸಲಾದ ಗೂಡು ಬೇರೆ ರಾಜ್ಯಗಳಿಗೆ ತೆರಳಿದರೇ, ಬೇರೆ ಜಿಲ್ಲೆಯ ರೇಷ್ಮೆ ಗೂಡು ಇಲ್ಲಿಗೆ ಮಾರಾಟಕ್ಕೆ ಆಗಮಿಸುತ್ತದೆ. ಜಿಲ್ಲೆಯ ಪ್ರಮುಖ ಬೆಳೆಯಾಗಿ ಪರಿಗಣಿಸಲ್ಪಟ್ಟಿದೆ. ಇದರಲ್ಲಿ 27012 ರೇಷ್ಮೆ ಬೆಳೆಗಾರರಿರುದ್ದು, ಇದರಲ್ಲಿಯೇ ಜೀವನೋಪಯವನ್ನು ಕಂಡು ಕೊಂಡಿದ್ದಾರೆ. ಇವರ ಪೈಕಿ ಪೈಕಿ 2019 ಪರಿಶಿಷ್ಠ ಜಾತಿ, 180 ಪರಿಶಿಷ್ಟ ಪಂಗಡ, 361 ಅಲ್ಪ ಸಂಖ್ಯಾತರು ಮತ್ತು 24452 ಇತರೆ ಹಾಗೂ 2171 ಮಹಿಳಾ ರೇಷ್ಮೆ ಬೆಳೆಗಾರರು ನಿರಂತರವಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

English summary
Due to unseasonal rain 97 hectares of Mango crop damaged in Ramanagara district. Farmers in trouble after crop loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X