ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಸಾಥ್ ನೀಡಲು 1000 ಕಿ.ಮೀ. ಸೈಕಲ್ ನಲ್ಲೇ ಬಂದ ವೃದ್ಧ

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ರೈತರ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲವೂ ವ್ಯಕ್ತಗೊಂಡಿದೆ. ದಿನೇ ದಿನೇ ಗಡಿಯಲ್ಲಿ ರೈತರ ಸಂಖ್ಯೆ ಏರಿಕೆಯಾಗುತ್ತಿದ್ದು, ನಲವತ್ತಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಈ ಪ್ರತಿಭಟನೆಯಲ್ಲಿ ರೈತರಿಗೆ ಸಾಥ್ ನೀಡಲು 60 ವರ್ಷದ ವೃದ್ಧ ಸತ್ಯದೇವ್ ಮಿನ್ಜಿ ಬಿಹಾರದಿಂದ ದೆಹಲಿವರೆಗೂ ಸೈಕಲ್ ನಲ್ಲೇ ಬಂದಿದ್ದಾರೆ. ಬಿಹಾರದ ಸಿವಾನ್ ನಿಂದ ಗುರುವಾರ ದೆಹಲಿ-ಹರಿಯಾಣ ಗಡಿ ಪ್ರದೇಶ ಟಿಕ್ರಿಗೆ ಬಂದು ತಲುಪಿದ್ದಾರೆ.

ರೈತರನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣರೈತರನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ

ನಡುಗಿಸುವ ಚಳಿಯ ನಡುವೆ ಹನ್ನೊಂದು ದಿನಗಳ ಕಾಲ ಸೈಕಲ್ ನಲ್ಲೇ ಸುಮಾರು 1000 ಕಿಲೋ ಮೀಟರ್ ಕ್ರಮಿಸಿ ಗಡಿ ತಲುಪಿರುವ ಸತ್ಯದೇವ್, ರೈತರಿಗೆ ಮಾರಕವಾಗಿರುವ ಈ ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ರದ್ದುಪಡಿಸಲೇಬೇಕು ಎಂದು ಆಗ್ರಹಿಸಿದ್ದಾರೆ.

60 Year Old From Bihar Came To Delhi By Bicycle To Support Farmers Protest

"ಈ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಲೇಬೇಕು. ಅಲ್ಲಿಯವರೆಗೂ ನಾನು ಪ್ರತಿಭಟನೆಯಲ್ಲಿರುತ್ತೇನೆ. ವಾಪಸ್ ಹೋಗುವುದಿಲ್ಲ. ರೈತರಿಗೆ ನನ್ನ ಬೆಂಬಲ ವ್ಯಕ್ತಪಡಿಸಲು ಸಾವಿರ ಕಿಲೋ ಮೀಟರ್ ಕ್ರಮಿಸಿ ಇಲ್ಲಿಗೆ ಬಂದಿದ್ದೇನೆ. ಈ ಉದ್ದೇಶವನ್ನು ಪೂರೈಸಿಯೇ ವಾಪಸ್ ಹೊರಡುವುದು" ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವೆಂಬರ್ 26ರಿಂದಲೂ ರೈತರ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆ ದಿನೇ ದಿನೇ ಕಾವೇರುತ್ತಿದ್ದು, ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಗುರುವಾರ ಸೂಚಿಸಿದೆ.

English summary
Satyadev Manjhi, a 60-year-old man from Bihar’s Siwan reached Tikri at Delhi-Haryana border completing a journey of nearly 1,000 kilometres in 11 days on a bicycle to participate in the ongoing farmers’ protest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X