• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕಿ ಉತ್ಪಾದನೆಯಲ್ಲಿ 6-7ಮಿ.ಟನ್ ಕುಸಿತ: ಪೂರೈಕೆಗೆ ತೊಂದರೆ ಇಲ್ಲ ಎಂದು ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸೆಪ್ಟಂಬರ್ 18: ನೈಋತ್ಯ ಮುಂಗಾರು ಮಳೆಯ ಅಭಾವವು ಭಾರತದಲ್ಲಿ ಪ್ರಸಕ್ತ ವರ್ಷದಲ್ಲಿ ಅಕ್ಕಿ ಉತ್ಪಾದನೆ ಕುಂಠಿತಕ್ಕೆ ಕಾರಣವಾಗಿದೆ. ಈ ವರ್ಷ 6ರಿಂದ 7 ಮಿಲಿಯನ್ ಟನ್‌ ನಷ್ಟು ಅಕ್ಕಿ ಉತ್ಪಾದನೆಯ ಕೊರತೆ ಆಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಧಾನ್ಯಗಳು ಸೇರಿದಂತೆ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಗಳು ಏರಿಕೆ ಆಗಿದೆ. ಸಗಟು ಬೆಲೆ ಸಹ ಕಳೆದ 11 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿದೆ. ದೇಶದ ಕೆಲವು ಭಾಗಗಳಲ್ಲಿ ಮಳೆ ಕೊರತೆ ಇದ್ದ ಹಿನ್ನಲೆ ತಾಪಮಾನವು ಹೆಚ್ಚಿದ್ದದ್ದು ಗೋಧಿ ಉತ್ಪಾದನೆ ಮೇಲೂ ದುಷ್ಪರಿಣಾಮ ಭೀರಿದೆ.

Positive News: ಕರ್ನಾಟಕದಲ್ಲಿ ಬಿದಿರು ಕೃಷಿಗೆ ಹೆಚ್ಚಿದ ಆಸಕ್ತಿPositive News: ಕರ್ನಾಟಕದಲ್ಲಿ ಬಿದಿರು ಕೃಷಿಗೆ ಹೆಚ್ಚಿದ ಆಸಕ್ತಿ

ಜೂನ್‌ನಿಂದ ಸೆಪ್ಟಂಬರ್‌ವರೆಗೆ ನಿರೀಕ್ಷಿತ ಭತ್ತ ಬೆಳೆಯುವ ಪ್ರದೇಶಗಳಲ್ಲಿ ನಿರೀಕ್ಷೆಯಷ್ಟು ಮುಂಗಾರು ಸುರಿದಿಲ್ಲ. ಜೂನ್‌ ತಿಂಗಳಿಗೆ ಕೊನೆಗೊಂಡ ಹಿಂದಿನ ವರ್ಷ (2021-22)ದಲ್ಲಿ ಭಾರತದ ಅಕ್ಕಿ ಉತ್ಪಾದನೆ 130.29 ಮಿಲಿಯನ್ ಟನ್‌ಗಳಿಷ್ಟಿತ್ತು. ಅದರ ಹಿಂದಿನ ವರ್ಷವಾದ 2020-2021ರಲ್ಲಿ 124.37 ಮಿಲಿಯನ್ ಟನ್‌ ಇತ್ತು.

ಒಟ್ಟು ಅಕ್ಕಿ ಉತ್ಪಾದನೆ ಶೇ.85ರಷ್ಟು

ಒಟ್ಟು ಅಕ್ಕಿ ಉತ್ಪಾದನೆ ಶೇ.85ರಷ್ಟು

ಈ ಭಾರಿ ನಿರೀಕ್ಷಿತ ಉತ್ಪಾದನೆ ಆಗದೇ ಪ್ರಸಕ್ತ ಖಾರಿಫ್ ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆ 6ರಿಂದ 7 ಮಿಲಿಯನ್ ಟನ್ ಕುಸಿತ ಕಾಣಬಹದು ಎಂದು ಕೇಂದ್ರ ಸರ್ಕಾರ ಹಾಗೂ ಆಹಾರ ತಜ್ಞರು ಅಂದಾಜಿಸಿದ್ದಾರೆ. ಸದ್ಯ ದೇಶದಲ್ಲಿ ಒಟ್ಟು ಅಕ್ಕಿ ಉತ್ಪಾದನೆಯ 85% ರಷ್ಟಾಗಿದೆ. ಹೀಗಿದ್ದರು ದೇಶದ ಫಲಾನುಭವಿಗಳಿಗೆ ಅಥವಾ ಗ್ರಾಹಕರಿಗೆ ಅಕ್ಕಿ ಪೂರೈಕೆಯ ಬಗ್ಗೆ ಆತಂಕ ಪಡುವೆ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಬೇಡಿಕೆಯಷ್ಟು ಅಕ್ಕಿ ಪೂರೈಸಲಿರುವ ಸರ್ಕಾರ

ಬೇಡಿಕೆಯಷ್ಟು ಅಕ್ಕಿ ಪೂರೈಸಲಿರುವ ಸರ್ಕಾರ

ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಉತ್ಪಾದನೆ ಕೊರತೆ ಎಂದರೂ ಸಹ ಕೇಂದ್ರ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಬೇಡಿಕೆಯಷ್ಟು ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿದೆ ಎಂದು ಹೇಳಿದೆ. ಇದರಿಂದ ಅಕ್ಕಿ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದೆ. ಜತೆಗೆ ಕೇಂದ್ರ ಸರ್ಕಾರ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಸಾಧಿಸಲು ಈಗಾಗಲೇ ಅಕ್ಕಿ ರಪ್ತಿನ ಸುಂಕವನ್ನು ಶೇ.20ರಷ್ಟು ಹೆಚ್ಚಿಸಿದೆ. ಇದರಿಂದ ಮೊದಲಿನಷ್ಟು ಅಕ್ಕಿ ರಫ್ತಾಗದೇ ದೇಶದೊಳಗೆ ಹಂಚಿಕೆಯಾಗಲಿದೆ.

10-12 ಮಿಲಿಯನ್ ಟನ್ ಕುಸಿತವಾದರೂ ತೊಂದರೆ ಇಲ್ಲ

10-12 ಮಿಲಿಯನ್ ಟನ್ ಕುಸಿತವಾದರೂ ತೊಂದರೆ ಇಲ್ಲ

ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಅಕ್ಕಿ ಸಗಟು ಬೆಲೆ ಸೆಪ್ಟೆಂಬರ್ 14ರವರೆಗೆ ಪ್ರತಿ ಕ್ವಿಂಟಲ್‌ಗೆ ರೂ. 3,357.2ಗೆ ಅಂದರೆ ಶೇ. 10.7ರಷ್ಟು ಹೆಚ್ಚಾಗಿದೆ. ವರ್ಷದ ಹಿಂದೆ ಇದರ ಬೆಲೆ ಪ್ರತಿ ಕ್ವಿಂಟಲ್‌ಗೆ ರೂ. 3,047.32 ಇದ್ದು, ಆಗ ಅಕ್ಕಿಯ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ರೂ.34.85 ರಿಂದ ರೂ.38.15 ರವರೆಗೆ ಇತ್ತು.

ಹಣಕಾಸು ಸಚಿವಾಲಯ ಶನಿವಾರ ವರದಿ ಒಂದನ್ನು ಬಿಡುಗಡೆ ಮಾಡಿದ್ದು, ಪ್ರಸಕ್ತ ಖಾರಿಫ್‌ನಲ್ಲಿ ಮಳೆ ಕಡಿಮೆ ಹಿನ್ನೆಲೆ ಭತ್ತ ಬಿತ್ತನೆ ಕಡಿಮೆ ಆಗಿದ್ದು, ಆದರೆ ದಾಸ್ತಾನು ಮತ್ತು ಮಾರುಕಟ್ಟೆ ಬೆಲೆಗಳಿಂದ ಹೆಚ್ಚು ತೊಂದರೆ ಉಂಟಾಗುವುದಿಲ್ಲ. ಕೇಂದ್ರ ಈ ನಿಟ್ಟಿನಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದೆ. ರಫ್ತಿನ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅಕ್ಕಿ ಉತ್ಪಾದನೆಯಲ್ಲಿ 10ರಿಂದ 12 ಮಿಲಿಯನ್ ಟನ್ ಕುಸಿತವಾದರೂ ದೇಶಿಯ ಲಭ್ಯತೆ, ಪೂರೈಕೆ ವಿಚಾರದಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ವರದಿ ತಿಳಿಸಿದೆ.

ಪಿಎಂಜಿಕೆಎವೈ ಉಚಿತ ಅಕ್ಕಿ ಯೋಜನೆ ವಿಸ್ತರಣೆ ಅಸಾಧ್ಯ

ಪಿಎಂಜಿಕೆಎವೈ ಉಚಿತ ಅಕ್ಕಿ ಯೋಜನೆ ವಿಸ್ತರಣೆ ಅಸಾಧ್ಯ

ಕೃಷಿ ಮತ್ತು ಅರ್ಥಶಾಸ್ತ್ರಜ್ಞ ಮತ್ತು ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯ ಕಾರ್ಯದರ್ಶಿ ಅಧಿಕಾರಿ ಒಬ್ಬರು ಜಾಗತಿಕವಾಗಿ ಬೆಲೆ ಏರಿಕೆಗೆ ಭಾರತದ ಅಗತ್ಯ ವಸ್ತುಗಳನ್ನು ಹೋಲಿಕೆ ಮಾಡಿದರೆ ಭಾರತದಲ್ಲಿ ವಾತಾವರಣ ಹೆಚ್ಚು ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ದೇಶದಲ್ಲಿ 80 ಕೋಟಿ ಜನರಿಗೆ ಪ್ರತಿ ಕೆ.ಜಿ.ಗೆ ರೂ.2ರಿಂದ 3 ಗೆ ಪ್ರತಿ ವ್ಯಕ್ತಿಗೆ 5ಕೆಜಿ ಯಂತೆ ಆಹಾರ ಧಾನ್ಯ ಒದಗಿಸುತ್ತದೆ. 2020ರ ಏಪ್ರಿಲ್‌ನಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ 80 ಕೋಟಿ ಜನರಿಗೆ ಇನ್ನೂ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ಈ ಉಚಿತ ವಿತರಣೆಯು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಈದಾದ ಬಳಿಕ ಯೋಜನೆ ವಿಸ್ತರಣೆ ಅನುಮಾನ ಎಂದು ತಜ್ಞರು ತಿಳಿಸಿದ್ದಾರೆ.

English summary
Though rice production has declined by 6 to 7 million tonnes, Central government has said that there is no problem for supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X