• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜಗೋಳಿಯಲ್ಲಿ 31ನೇ ಕೃಷಿಮೇಳದ ಸಂಭ್ರಮ

By * ನಮನ ಬಜಗೋಳಿ, ಕಾರ್ಕಳ
|

31st Krishimela in Bajagoli
ಬಜಗೋಳಿ, ಜ. 29 : ಫೆಬ್ರವರಿ ನಾಲ್ಕರಿಂದ ಮೂರು ದಿನ ಧರ್ಮಸ್ಥಳ ಗ್ರಾಮಾಭಿವ್ರದ್ದಿ ವತಿಯಿಂದ ನಡೆಯಲಿರುವ 31ನೇ ಕೃಷಿಮೇಳದ ಪೂರ್ವ ತಯಾರಿ ಜನವರಿ 6ರಿಂದ ಆರಂಭಗೊಂಡಿದ್ದು ಇಂದಿನವರೆಗೆ ಶೇಕಡಾ 75ರಷ್ಟು ಕೆಲಸಗಳು ಮುಗಿದಿವೆ. ಬಾಕಿ ಕೆಲಸಗಳು ಭರದಿಂದ ಸಾಗುತ್ತಿದೆ. [ಗ್ಯಾಲರಿ]

ಅಡುಗೆ ಚಪ್ಪರ, 40 ಶೌಚಾಲಯ ನಿರ್ಮಾಣ, ಜಾನುವಾರು ಮತ್ತು ಶ್ವಾನ ಪ್ರದರ್ಶನಕ್ಕೆ ತಯಾರಿ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ತಯಾರಿ, ಗುಟ್ಟಿನ ಮನೆ, ನೀರು ಪೂರೈಕೆಗೆ ಪೈಪ್ ಲೈನ್ ವ್ಯವಸ್ಥೆ, ಆಲೆಮನೆ ತಯಾರಿ, ಚಪ್ಪರಗಳು ಸೇರಿದಂತೆ ಇನ್ನಿತರ ಪೂರ್ವ ಸಿದ್ದತೆಗಳು ಭರದಿಂದ ಸಾಗುತ್ತಿವೆ.

ಕೃಷಿ ಮೇಳದ ಸ್ವಾಗತ ಸಮಿತಿಯ ವತಿಯಿಂದ ಬಜಗೋಳಿಯ ಆಸುಪಾಸಿನಲ್ಲಿ ಏಳು ಸ್ವಾಗತ ದ್ವಾರಗಳು ನಿರ್ಮಾಣಗೊಳ್ಳುತ್ತಿವೆ. ಗ್ರಾಮಾಭಿವೃದ್ಧಿಯ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಕಾರ್ಕಳ, ಬೆಳ್ತಂಗಡಿ, ಮೂಡಬಿದಿರೆಗಳಲ್ಲಿ ಕೂಡ ಸ್ವಾಗತ ದ್ವಾರಗಳು ನಿರ್ಮಾಣಗೊಂಡಿವೆ.

31ನೇ ಕೃಷಿ ಮೇಳದ ಮೆರವಣಿಗೆಯಲ್ಲಿ 31 ತರಹದ ಟ್ಯಾಬ್ಲೋಗಳನ್ನೂ ಮೆರವಣಿಗೆಯಲ್ಲಿ ಅಳವಡಿಸುವ ಚಿಂತನೆ ನಡೆಯುತ್ತಿದೆ. ಈ ಕೃಷಿಮೇಳದಿಂದಾಗಿ ಬಜಗೋಳಿಯ ಸುತ್ತ ಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

English summary
Dharmasthala rural development committee has organized 31st Krishimela in Bajagoli, Karkala taluk, Dakshina Kannada district, Karnataka, from 4th February, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X