ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300 ಕೋಟಿ ಮೌಲ್ಯದ ಅಕ್ರಮ HT ಹತ್ತಿ ಬೀಜಗಳ ಮಾರಾಟ ಬಟಾಬಯಲು

|
Google Oneindia Kannada News

ಇತ್ತೀಚೆಗೆ ತೆಲಂಗಾಣದಲ್ಲಿ ಕಾನೂನು ಬಾಹಿರವಾಗಿ HT ಹತ್ತಿ ಬೆಳೆಯಲಾಗುತ್ತಿದೆ ಎಂದು ಅಲ್ಲಿನ ರೈತ ಸಂಘಟನೆಗಳು ಆರೋಪ ಮಾಡಿದ ಬೆನ್ನಲ್ಲೇ ಅಲ್ಲಿನ ಕೃಷಿ ಆಯುಕ್ತರು ಆ ಬಗ್ಗೆ ಎಲ್ಲಿಯೂ ಅಧಿಕೃತ ದಾಖಲೆಗಳು-ಪುರಾವೆಗಳಿಲ್ಲ, ನಾವು ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೇವೆ. ಈಗಾಗಲೇ 100 ಮಂದಿಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದರು.

ಇದೀಗ NSAI (National Seed Assiciation of India) ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ HT ಹತ್ತಿ ಬೀಜಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. 300 ಕೋಟಿ ಮೌಲ್ಯದ 50 ಲಕ್ಷ HT Bt ಹತ್ತಿ ಬೀಜ ಪೊಟ್ಟಣಗಳು (ಸುಮಾರು 24 ಲಕ್ಷ ಕೆ.ಜಿಯಷ್ಟು) ಈ ಮೂರೂ ರಾಜ್ಯಗಳ ಮಾರುಕಟ್ಟೆಯಲ್ಲಿವೆ ಎಂದು ಹೇಳಿರುವ NSAI ಈ ಹಣವು ಅಕ್ರಮ ವ್ಯವಹಾರ ಮಾಡುತ್ತಿರುವ ದಂಧೆಕೋರರ ಕೈ ತಲುಪುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದೆ.

HT ಹತ್ತಿ ವಿರುದ್ಧ ಹೋರಾಟಕ್ಕೆ ಕಾಲ ಪಕ್ವ; ಸರ್ಕಾರ, ಚಳವಳಿಗಳು ನಿಗಾವಹಿಸಬೇಕುHT ಹತ್ತಿ ವಿರುದ್ಧ ಹೋರಾಟಕ್ಕೆ ಕಾಲ ಪಕ್ವ; ಸರ್ಕಾರ, ಚಳವಳಿಗಳು ನಿಗಾವಹಿಸಬೇಕು

ಇದರಿಂದ ಕಾನೂನು ರೀತ್ಯಾ BG 2 ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿರುವ ಬೀಜ ಕಂಪನಿಗಳಿಗೆ ಸಮಸ್ಯೆಯಾಗಿದೆ. ಕೇವಲ ಮಾರಾಟದ ದೃಷ್ಟಿಯಿಂದಷ್ಟೇ ಅಲ್ಲ. ಬದಲಿಗೆ ಅಕ್ರಮ HT ಹತ್ತಿ ಬೀಜಗಳಿಂದ ಅಧಿಕೃತ ಹತ್ತಿ ಬೀಜಗಳು ಕಂಟಾಮಿನೇಟ್ ಆಗುತ್ತಿವೆ. ಈಗ BG 2 ಮಾರಾಟ ಮಾಡುತ್ತಿರುವ ಕಂಪನಿಗಳ ಬೀಜಗಳ ಲಾಟ್ ನಲ್ಲಿ ಅಪ್ಪೀ ತಪ್ಪಿ HT ಕಂಟಾಮಿನೇಷನ್ ಕಂಡಲ್ಲಿ ಅವರ ವಿರುದ್ಧ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ.

300 Crores Worth Of Illegal HT Cotton Seeds Sold

ತೆಲುಗು ಭಾಷೆಯಲ್ಲಿ ಒಂದು ಮಾತಿದೆ "ಕೂಸೇ ಗಾಡದಿ ಪಯ್ಯಿ ಮೇಸೇ ಗಾಡದಿ ಸೆಡೆಪೆ" ಎಂದು. ಹಾಗೆಂದರೆ ಕೂಗುವ ಕತ್ತೆ ಹೋಗಿ ಮೇಯುವ ಕತ್ತೆ ಕೆಡಿಸಿತು ಎಂದು. ಹೀಗೆ ಅಕ್ರಮವಾಗಿ ಮಾರುಕಟ್ಟೆ ಪ್ರವೇಶಿಸಿರುವ HT ಹತ್ತಿ ಬೀಜಗಳಿಂದ ಅಧಿಕೃತ ಹತ್ತಿ ಬೀಜಗಳ ಮಾರುಕಟ್ಟೆಗೆ ಪೆಟ್ಟು ಬಿದ್ದಿದೆ ಎಂದು NSAI ನ ನಿರ್ದೇಶಕ (policy and outreach) ಇಂದ್ರ ಶೇಖರ್ ಸಿಂಗ್ ಹೇಳಿರಿವುದಲ್ಲದೆ ಸರ್ಕಾರಗಳು ತಕ್ಷಣ ಈ ಅಕ್ರಮ ಬೀಜ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ತಾಕೀತು ಮಾಡಿದ್ದಾರೆ. ಈ ಅಕ್ರಮವು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆ ಬಗ್ಗೆ NSAI ಕೇಂದ್ರಕ್ಕೆ ಹಲವಾರು ಸಾರಿ ಪತ್ರ ಬರೆದಿರುವುದಾಗಿ ಕೂಡಾ ಸಂಸ್ಥೆ ಹೇಳಿದೆ.

300 Crores Worth Of Illegal HT Cotton Seeds Sold

ಫೆಬ್ರವರಿ 2019 ರಲ್ಲಿ ಲೋಕಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಇಷ್ಟೆಲ್ಲಾ ಎಚ್ಚರಿಕೆಯ ನಡೆಗಳ ನಡುವೆಯೂ ಅಕ್ರಮ ಬೀಜ ಮಾರಾಟ ಮಾತ್ರ ದೇಶದಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಏನನ್ನೂ ಪರೀಕ್ಷಿಸದೆ ಒಪ್ಪಿಕೊಳ್ಳುವ ರೈತರ ಗುಣ, ಮಾಹಿತಿಯ ಕೊರತೆ, ಮೌಡ್ಯ, ಕೆಲವೊಮ್ಮೆ ದುರಾಸೆಯೇ ಅಕ್ರಮ ದಂಧೆಕೋರರು ಪಳಗಲು ಕಾರಣವಾಗಿರಬಹುದು. ರೈತರೇ ಎಚ್ಚರಿಕೆಯ ಹೆಜ್ಜೆ ಇಟ್ಟರೆ ಇಂತಹ ಪರಿಸರ ವಿರೋಧಿ ದಂಧೆಗಳಿಗೆ ಅವಕಾಶವಿರುವುದಿಲ್ಲ.

English summary
Recently, farmer organizations have complained that HT cotton is being illegally grown in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X