ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿವಯಸ್ಸಿನಲ್ಲೂ ಕೃಷಿ ಕಾಯಕ; 105ರ ಪಾಪಮ್ಮನಿಗೆ ಒಲಿದುಬಂದ ಪದ್ಮಶ್ರೀ

|
Google Oneindia Kannada News

ಚೆನ್ನೈ, ಜನವರಿ 27: ಏನು ತಪ್ಪಿದರೂ ಪ್ರತಿದಿನ ಬೆಳಿಗ್ಗೆ 5.30ಕ್ಕೆ ಏಳುವುದು ಮಾತ್ರ ಒಂದು ದಿನವೂ ತಪ್ಪಿಲ್ಲ. ಗಂಟೆ ಬಾರಿಸಿದಂತೆ ಬೆಳಿಗ್ಗೆ 6ರ ಹೊತ್ತಿಗೆ ಹೊಲದಲ್ಲಿ ಕೆಲಸಕ್ಕೆ ಹಾಜರಾಗುವುದು ಎಂದೂ ನಿಂತಿಲ್ಲ. ದಣಿವಾಗುವವರೆಗೂ ದುಡಿದು ಮನೆಗೆ ಮರಳಿ, ಅಲ್ಲಿಯೂ ಸುಮ್ಮನೆ ಕೂರದೇ ಏನಾದರೊಂದು ಕೆಲಸ ಮಾಡುತ್ತಲೇ ಇರುವ ತಮಿಳುನಾಡಿನ 105 ವರ್ಷದ ಪಾಪಮ್ಮ ಅವರು ಯುವಜನರಿಗೆ ಉದಾಹರಣೆ ಮಾತ್ರವಲ್ಲ, ಸ್ಫೂರ್ತಿಯೂ ಹೌದು.

ಅಂದ ಹಾಗೆ ಪಾಪಮ್ಮ ಅವರಿಗೆ 72ನೇ ಗಣರಾಜ್ಯೋತ್ಸವದ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಈ ಬಾರಿಯ ವಿಶೇಷ. ತಮಿಳುನಾಡಿನ ಹನ್ನೊಂದು ಮಂದಿಗೆ ಈ ಬಾರಿ ಪದ್ಮಶ್ರಿ ಪ್ರಶಸ್ತಿ ಬಂದಿದ್ದು, ಅದರಲ್ಲಿ 105 ವರ್ಷದ ಪಾಪಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ರಾಜ್ಯದ ಜನರಿಗೆ ವಿಶೇಷವೆನಿಸಿದೆ. ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆ ಎಂದು ಪಾಪಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಮಶ್ರೀ ತಗ್ಗಿನಮಠ ಜೋಗತಿ ಮಂಜಮ್ಮ ಕಿರು ಪರಿಚಯಪದ್ಮಶ್ರೀ ತಗ್ಗಿನಮಠ ಜೋಗತಿ ಮಂಜಮ್ಮ ಕಿರು ಪರಿಚಯ

ಸುಮಾರು 2.5 ಎಕರೆ ಜಾಗದಲ್ಲಿ ಪಾಪಮ್ಮ ಅವರು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಿರಿಧಾನ್ಯಗಳು, ಬೇಳೆ ಕಾಳುಗಳು, ತರಕಾರಿಗಳು, ಜೋಳ ಇವುಗಳನ್ನು ಸುಮಾರು ಅವರತ್ತು ವರ್ಷಗಳಿಂದಲೂ ಬೆಳೆಯುತ್ತಿದ್ದಾರೆ. ಅವರ ಈ ಕೃಷಿ ಕಾಯಕದ ಹಿಂದೆ ಒಂದು ಪುಟ್ಟ ಸ್ವಾರಸ್ಯಕರ ಕಥೆಯೂ ಇದೆ.

105 Year Old Organic Farmer From Tamil Nadu Awarded Padmashri

1914ರಲ್ಲಿ ಜನಿಸಿದ ಪಾಪಮ್ಮ ಅವರು ಚಿಕ್ಕ ವಯಸ್ಸಿಗೇ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿಯೊಂದಿಗೆ ಬೆಳೆದರು. ಎರಡನೇ ತರಗತಿವರೆಗೂ ಓದಿ ನಂತರ ಶಾಲೆ ತೊರೆದರು. ಅಜ್ಜಿ ತೀರಿಕೊಂಡ ನಂತರ ತಮ್ಮದೇ ಪೆಟ್ಟಿ ಅಂಗಡಿಯನ್ನು ತೆರೆದು ಹಣ ಕೂಡಿಡಲು ಮುಂದಾದರು ಪಾಪಮ್ಮ. ಮುಂಚಿನಿಂದಲೂ ಕೃಷಿ ಮಾಡಬೇಕು ಎಂದು ಕನಸು ಕಂಡಿದ್ದ ಪಾಪಮ್ಮ ಅವರು ಆ ದುಡ್ಡಿನಲ್ಲೇ ಹತ್ತು ಎಕರೆ ಜಾಗ ಕೊಂಡುಕೊಂಡರು.

ತಮ್ಮ ಕನಸಿನ ಕೃಷಿಯನ್ನು ಕೈಗೆತ್ತಿಕೊಂಡು ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಸುಮಾರು ಅರವತ್ತು ವರ್ಷಗಳಿಂದ ನಿರಂತರವಾಗಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ವಯಸ್ಸಾಗುತ್ತಿದ್ದಂತೆ ಸ್ವಲ್ಪ ಭೂಮಿ ಮಾರಿ ಇದೀಗ ಎರಡೂವರೆ ಎಕರೆ ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ.

ತಮಿಳುನಾಡಿನ ಜೋಹೊ ಸಂಸ್ಥಾಪಕನಿಗೆ ಪದ್ಮಶ್ರೀ ಪ್ರಶಸ್ತಿತಮಿಳುನಾಡಿನ ಜೋಹೊ ಸಂಸ್ಥಾಪಕನಿಗೆ ಪದ್ಮಶ್ರೀ ಪ್ರಶಸ್ತಿ

ಹತ್ತು ವರ್ಷದ ಹಿಂದೆ ಪಾಪಮ್ಮ ಪತಿ ತೀರಿಕೊಂಡಿದ್ದು, ಅವರಿಗೆ ಮೂರು ಹೆಣ್ಣು ಮಕ್ಕಳು, ಮೂರು ಮೊಮ್ಮಕ್ಕಳು, ಇಬ್ಬರು ಮರಿಮಕ್ಕಳು ಇದ್ದಾರೆ. 1959ರಲ್ಲಿ ತೆಕ್ಕಂಪಟ್ಟಿ ಪಂಚಾಯಿತಿ ಕೌನ್ಸಿಲರ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಪಾಪಮ್ಮ ಅವರು ತಮಿಳುನಾಡು ಕೃಷಿ ವಿವಿ ಸಹಯೋಗದಲ್ಲಿ ಹಲವು ಕೃಷಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಇಂದಿಗೂ ಬಾಳೆ ಎಲೆಯಲ್ಲಿಯೇ ಊಟ ಮಾಡುವ ರೂಢಿ ಇಟ್ಟುಕೊಂಡಿರುವ ಪಾಪಮ್ಮ ಅವರು ಒಂದು ದಿನವೂ ಸುಮ್ಮನೆ ಕುಳಿತಿರುವ ಉದಾಹರಣೆಯೇ ಇಲ್ಲ ಎಂದು ಮೊಮ್ಮಕ್ಕಳು ಹೊಗಳುತ್ತಾರೆ. ಇಳಿವಯಸ್ಸಿನಲ್ಲಿಯೂ ಅವರ ಈ ಅದಮ್ಯ ಉತ್ಸಾಹ ಯುವಜನರಿಗೆ ಮಾದರಿ ಎನ್ನುವಂತಿದೆ.

English summary
105 year old organic farmer papammal from Coimbatore tamil nadu is celebrating her Padma Shri award on this 72nd republic day. Here is brief introduction about her...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X